ನಾನು ಸಹ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೇನೆ ಶಾಸಕರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಟಿ ರಘುಮೂರ್ತಿ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 26 ನಾನು ಸಹ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೇನೆ, ಸತತ ಮೂರು ಸಲ ಜನ ಗೆಲಿಸಿದ್ದು ಹೈಕಮಾಂಡ್ ಗಮನಿಸಿದೆ ನಮ್ಮ ಎಸ್ಟಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಭರವಸೆಯಿದೆ ಎಂದು ಶಾಸಕರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಟಿ ರಘುಮೂರ್ತಿ ತಿಳಿಸಿದರು.

ಚಿತ್ರದುರ್ಗದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ ರಘುಮೂರ್ತಿ, ಸಿಎಂ ದೆಹಲಿ ಪ್ರವಾಸ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡುವ ಭರವಸೆ ಇದೆ ನಮ್ಮ ಕ್ಷೇತ್ರದಲ್ಲಿ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆಗಿಲ್ಲ ಗ್ಯಾರಂಟಿ ಯೋಜನೆ ಜತೆಗೆ ಇತರೆ ಕೆಲಸಗಳೂ ನಡೆಯುತ್ತಿವೆ ಸ್ವಲ್ಪ ಕಡಿಮೆ ಆಗಿರಬಹುದು, ಆದರೆ ಅಭಿವೃದ್ಧಿ ಆಗುತ್ತಿದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ರಘುಮೂರ್ತಿ ತಿಳಿಸಿದರು. 

Leave a Reply

Your email address will not be published. Required fields are marked *