ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ನಾನು ನನ್ನಕೈಲಾದಷ್ಟು ಪರಿಹಾರವನ್ನು ನೀಡಲಾಗುವುದು:ಕೆ. ಆರ್. ಉಷಾ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 23 ನಿಮ್ಮ ಎಲ್ಲಾ ರೀತಿಯಾದ ಸಮಸ್ಯೆಗಳಿಗೆ ನನ್ನ ಕೈಲಾದ ಪರಿಹಾರವನ್ನು ನೀಡುತ್ತೇನೆ, ಸಂಘಟನೆಯನ್ನು ಬಲಪಡಿಸಿಕೊಳ್ಳಿ ಎಂದು ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕರಾದ ಕೆ. ಆರ್. ಉಷಾ ಕರೆ ನೀಡಿದರು.


ನಗರದ ಕೋಟೆ ಮುಂಭಾಗದ ಮಹಾರಾಣಿ ಕಾಲೇಜಿನ ಶ್ರೀ ಗುರು ವಾಲ್ಮೀಕಿ ಆಡಿಟೋರಿಯಂನಲ್ಲಿ ಭಾನುವಾರ
ಹಮ್ಮಿಕೊಳ್ಳಲಾಗಿದ್ದ, ಅಖಿಲ ಭಾರತ ಅಂಚೆ ನೌಕರರ ಸಂಘಗಳು ಮೂರನೇ ವರ್ಗ, ನಾಲ್ಕನೇ ವರ್ಗ ಮತ್ತು ಗ್ರಾಮೀಣ ಅಂಚೆ
ನೌಕರರ ಸಂಘಗಳ ಚಿತ್ರದುರ್ಗ ವಿಭಾಗದ 42 ನೇ ಜಂಟಿ ದೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಲಿ ಮಾತನಾಡಿದ ಅವರು,
ಚಿತ್ರದುರ್ಗದ ಎರಡು ಸಂಘಗಳಲ್ಲಿಯೂ ಒಗ್ಗಟು ಇದೆ. ಬೇರೆ ಕಡೆಗಳಲ್ಲಿ ಈ ರೀತಿಯಾದ ಒಗ್ಗಟು ಇಲ್ಲ, ಇಲ್ಲಿ ನಿಮ್ಮ ಒಗ್ಗಟ್ಟನ್ನು
ನೋಡಿ ಸಂತೋಷವಾಗುತ್ತದೆ. ಇದೇ ಒಗ್ಗಟ್ಟನ್ನು ಕಾಪಾಡಿಕೊಳ್ಳಿ ಎರಡು ಯೂನಿಯನ್‍ಗಳು ಜಂಟಿಯಾಗಿ ಸಮ್ಮೇಳವನ್ನು ಮುಂದಿನ
ದಿನದಲ್ಲಿ ಮಾಡಿ, ನಿಮ್ಮ ಒಗ್ಗಟ್ಟಿಗೆ ಮುಂದಿನ ದಿನದಲ್ಲಿ ಬಲ ಸಿಗಲಿದೆ. ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ನಾನು ನನ್ನ
ಕೈಲಾದಷ್ಟು ಪರಿಹಾರವನ್ನು ನೀಡಲಾಗುವುದು ಎಂದರು.

ಗ್ರೂಪ್.ಸಿ.ನ ರಾಷ್ಟ್ರೀಯ ಕಾರ್ಯಾಧ್ಯಕ್ಷರು, ನವದೆಹಲಿ, ಮತ್ತು ಕರ್ನಾಟಕ ಸರ್ಕಲ್‍ನ ವಲಯ ಕಾರ್ಯದರ್ಶಿಗಳಾದ ಕಾಂ, ಜಿ.
ಜಾನಕಿರಾಮ್ ಮಾತನಾಡಿ, ಕೇಂದ್ರ ಸರ್ಕಾರ ನಮ್ಮ ಅಂಚೆ ಇಲಾಖೆಯಲ್ಲಿ ಇದುವರೆವಿಗೂ ಸೇವಾ ಮಮೋಭಾವ ಇತ್ತು ಅದರೆ
ಇತ್ತೀಚಿನ ದಿನಮಾನದಲ್ಲಿ ಇಲಾಖೆಯನ್ನು ಲಾಭದಾಯಕ ಇಲಾಖೆಯನ್ನಾಗಿ ಮಾಡಲು ಹೂರಟಿದೆ, ಜನತೆಗೆ ಪತ್ರವನ್ನು ಮಾತ್ರ
ತಲುಪಿಸುತ್ತಿದ್ದ ಇಲಾಖೆ ಇದು ವಿವಿಧ ರೀತಿಯ ಸೇವೆಯನ್ನು ಮಾಡುತ್ತಿದೆ. ನಮ್ಮ ಇಲಾಖೆಯಲ್ಲಿ ಈಗ ನೇಮಕಾತಿ
ಆಗುತ್ತಿರುವವವರು ಉನ್ನತ ವಿದ್ಯೆಯನ್ನು ಪಡೆಸದವರಾಗಿದ್ದಾರೆ ಇವರು ಮುಂದೆ ಬಡ್ತಿಯನ್ನು ಪಡೆದು ಉತ್ತನ ಹುದ್ದೆಗೆ ಹೋದಾಗ
ಅಲ್ಲಿ ಉತ್ತಮ ರೀತಿಯ ಮಾರ್ಪಾಡುಗಳು ಆಗುತ್ತವೆ ಎಂಬ ನಂಬಿಕೆ ಇದೆ ಎಂದರು.

ನಮ್ಮ ಇಲಾಖೆ ಈಗ ನಷ್ಠದಲ್ಲಿ ನಡೆಯುತ್ತಿದೆ ಈ ನಷ್ಠದಿಂದ ಹೂರಗೆ ಬರುವ ಸಲುವಾಗಿ ಇಲಾಖೆಯನ್ನು ಖಾಲಿ ಇರುವ ಹುದ್ದೆಗಳನ್ನು
ಭರ್ತಿ ಮಾಡದೇ ಹೂರಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದೆ ಇವರಿಗೆ ಸರ್ಕಾರದ ಯಾವುದೇ ಸೌಲಭ್ಯವನ್ನು ನೀಡದೆ
ವೇತನವನ್ನು ಮಾತ್ರ ನೀಡುವುದರ ಮೂಲಕ ಇಲಾಖೆಯನ್ನು ಲಾಘದತ್ತ ಕೊಂಡ್ಯೂಯುವ ಕಾರ್ಯವನ್ನು ಮಾಡಲಾಗುತ್ತಿದೆ. ನಮ್ಮ
ಸಂಘಟನೆಯಿಂದ ಸಿಬ್ಬಂದಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಸಿಬ್ಬಂದಿಗಳಿಗೆ ಆರೋಗ್ಯಕರವಾದ ಅದೇಶಗಳನ್ನು ಜಾರಿ
ಮಾಡಲು ನಮ್ಮ ಸಂಘಟನೆ ಹೋರಾಟವನ್ನು ಮಾಡುತ್ತದೆ. ನಮ್ಮ ಮೇಲಿನ ಅಧಿಕಾರಿಗಳು ನಮಗೆ ಗುರಿಯನ್ನು ನೀಡಿದಾಗ
ನಾವುಗಳು ಉತ್ತಮವಾಗಿ ಕೆಲಸವನ್ನು ಮಾಡುತ್ತೇವೆ ಅವರೇ ಗುರಿಯನ್ನು ನೀಡದಿದ್ಧಾಗ ಕೆಲಸದಲ್ಲಿ ಅಸಡ್ಡೆಯನ್ನು
ತೋರಿಸಲಾಗುತ್ತದೆ ಈ ರೀತಿ ಆಗದಂತೆ ಎಚ್ಚರವನ್ನು ವಹಿಸಬೇಕಿದೆ ಎಂದು ಕರೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ಅಂಚೆ ನೌಕರರ ಸಂಘಗಳು ವಿಭಾಗೀಯ ಕಾರ್ಯದರ್ಶಿ ಆರ್.ಕರಿಸಿದ್ದಪ್ಪ ಈ ಸಂಘ
1907ರಲ್ಲಿ ಪ್ರಾರಂಭವಾಯಿತು ಇದುವರೆವಿಗೂ ಹಲವಾರು ರೀತಿಯ ಏಳು ಬೀಳುಗಳನ್ನು ಕಂಡಿದೆ. ನಮ್ಮ ಹಿರಿಯರು ಮಾಡಿದ
ಸಂಘಟನೆಯ ಫಲವನ್ನು ನಾವು ಈಗ ಪಡೆಯುತ್ತಿದ್ದೇವೆ ಈಗ ನಾವು ಮಾಡಿದ ಸಂಘಟನೆಯನ್ನು ನಮ್ಮ ಮುಂದಿನ ಪೀಳೀಗೆಯವರು
ಪಡೆಯುತ್ತಾರೆ. ಇದಕ್ಕಾಗಿ ಹೋರಾಟ ಅನಿವಾರ್ಯವಾಗಿದೆ. ನಮ್ಮ ಹೋರಾಟ ಯಾವುದೇ ಸರ್ಕಾರವಾಗಲಿ ಆಡಳಿತ ಶಾಹಿಯ
ವಿರುದ್ದವಾಗಿ ಅಲ್ಲ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಾತ್ರ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘದ ಮೂರನೇ ವರ್ಗದ ಅಧ್ಯಕ್ಷರಾದ ಕಾಂ.ಕೆ. ಚಿದಾನಂದ ಸಮ್ಮೇಳನದ
ಅಧ್ಯಕ್ಷತೆಯನ್ನು ವಹಿಸಿದ್ದರು.ಅಖಿಲ ಭಾರತ ಅಂಚೆ ನೌಕರರ ಸಂಘ, ಕರ್ನಾಟಕ ವಲಯದ ಅಧ್ಯಕ್ಷರಾದ ಕಾಂ. ಚಂದ್ರಸ್ವಾಮಿ
ವಲಯ ಸಹಕಾರ್ಯದರ್ಶಿ ಕಾಂ. ಕೆ.ಎಸ್. ರುದ್ರೇಶ್, ಚಿತ್ರದುರ್ಗ ಉಪ ವಿಭಾಗದ ಸಹಾಯಕ ಅಂಚಿ ಅಧೀಕ್ಷಕರಾದ ಎನ್. ಅನಿಲ್
ಕುಮಾರ್, ಅಖಿಲ ಭಾರತ ಅಂಚೆ ನೌಕರರ ಸಂಘ, ಮೂರನೇ ವರ್ಗದ ಮಾಜಿ ವಿಭಾಗೀಯ ಕಾರ್ಯದರ್ಶಿ ಹೆಚ್. ಚೌಡಪ್ಪ, ಅಖಿಲ
ಭಾರತ ಅಂಚೆ ನೌಕರರ ಸಂಘ, ಮೂರನೇ ವರ್ಗದ ಮಾಜಿ ಗೌರವಾಧ್ಯಕ್ಷರಾದ ಕಾಂ, ಜಿ.ಟಿ. ಮಠಪತಿ ವಿಭಾಗೀಯ ಮಾಜಿ
ಕಾರ್ಯದರ್ಶಿ ಕಾಂ.ಕೆ. ರಂಗಸ್ವಾಮಿ, ಶಿವಾನಂದ, ಮಂಜುನಾಥ್, ಲಕ್ಷ್ಮಣ್, ಶಶಿಕುಮಾರ್, ತಿಮ್ಮರಾಯಪ್ಪ, ಲೋಕೇಶಪ್ಪ
ಸೇರಿದಂತೆ ಇತರರು ಭಾಗವಹಿಸಿದ್ದರು
ಈ ಸಮ್ಮೇಳನದಲ್ಲಿ ಬಡ್ತಿ ಹೊಂದಿದ, ನಿವೃತ್ತಿ ಹೊಂದಿದ ಅಂಚೆ ನೌಕರರನ್ನು ಹಾಗೂ ಸಂಘಕ್ಕೆ ಹೊಸದಾಗಿ ಸೇರ್ಪಡೆಯಾದ ಅಂಚೆ
ನೌಕರರನ್ನು ಸನ್ಮಾನಿಸಲಾಯಿತು. ಪ್ರಸನ್ನ ಕುಮಾರ್ ಪ್ರಾರ್ಥಿಸಿದರೆ, ಶಿವನಂದ ಸ್ವಾಗತಿಸಿದರು.

Leave a Reply

Your email address will not be published. Required fields are marked *