ICC ಐತಿಹಾಸಿಕ ನಿರ್ಣಯ, ಇನ್ಮುಂದೆ ಮಹಿಳಾ ಕ್ರಿಕೆಟ್ ವನಿತೆಯರಿಗೂ ಸಿಗಲಿದೆ ಪುರುಷ ಆಟಗಾರರ ಸಮಾನ ಬಹುಮಾನದ ಮೊತ್ತ

ICC ತನ್ನ ವಾರ್ಷಿಕ ಸಭೆಯಲ್ಲಿ ಮಹತ್ವದ ಈ ನಿರ್ಧಾರವನ್ನು ತೆಗೆದುಕೊಂಡಿದೆ, ಇದರಿಂದ ಪುರುಷ ಹಾಗೂ ಮಹಿಳಾ ಕ್ರಿಕೆಟ್ ಆಟಗಾರರು ತಮ್ಮ ಈವೆಂಟ್‌ಗಳಲ್ಲಿ ಪಡೆಯುವ ಬಹುಮಾನದ ಮೊತ್ತವು ಏಕಸಮಾನ ಇರಲಿದೆ.  

ಡರ್ಬನ್‌: ಡರ್ಬನ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಮಹಿಳಾ ಮತ್ತು ಪುರುಷರ ಐಸಿಸಿ ಈವೆಂಟ್‌ಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಹಿಳಾ ಕ್ರಿಕೆಟ್‌ಗೆ ಹೊಸ ವೇಗವನ್ನು ನೀಡುವ ಸಲುವಾಗಿ, ಐಸಿಸಿ (ICC Historic Decision) ಇದೀಗ ಪುರುಷರ ಈವೆಂಟ್‌ಗಳಲ್ಲಿ ಪಡೆಯುವ ಬಹುಮಾನದ ಮೊತ್ತವನ್ನು ಮಹಿಳಾ ಸ್ಪರ್ಧೆಗಳಲ್ಲಿಯೂ ನೀಡಲು ನಿರ್ಧರಿಸಿದೆ. ಐಸಿಸಿಯ ಈ ನಿರ್ಧಾರದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಇದುವರೆಗೆ, ಐಸಿಸಿ ಈವೆಂಟ್‌ಗಳಲ್ಲಿ ಪುರುಷರಿಗೆ ಹೋಲಿಸಿದರೆ (Cricket News In Kannada) ಮಹಿಳೆಯರಿಗೆ ಸಮಾನವಾದ ಬಹುಮಾನದ ಮೊತ್ತ ಸಿಗುತ್ತಿರಲಿಲ್ಲ.  2030 ರ ವೇಳೆಗೆ, ಈ ವಿಷಯವನ್ನು ಏಕರೂಪವಾಗಿ ಮಾಡಲಾಗುವುದು. ಈಗ ಪುರುಷರು ಮತ್ತು ಮಹಿಳೆಯರಲ್ಲಿ ಆಡಲಾಗುವ ODI, T20 ಮತ್ತು ಇತರ ICC ಪಂದ್ಯಾವಳಿಗಳು ಒಂದೇ ಬಹುಮಾನವನ್ನು ಹೊಂದಿರಲಿವೆ.

ಈ ನಿರ್ಧಾರದ ಬಗ್ಗೆ ಮಾತನಾಡಿರುವ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ, ಇದು ನಮಗೆ ದೊಡ್ಡ ಮತ್ತು ಐತಿಹಾಸಿಕ ನಿರ್ಧಾರವಾಗಿದೆ (Sports News In Kannada) ಮತ್ತು ಇನ್ಮುಂದೆ ಐಸಿಸಿ ಈವೆಂಟ್‌ಗಳಲ್ಲಿ ಪುರುಷ ಮತ್ತು ಮಹಿಳಾ ಆಟಗಾರರು ಸಮಾನ ಬಹುಮಾನವನ್ನು ಮೊತ್ತವನ್ನು ಪಡೆಯುತ್ತಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ ಎಂದಿದ್ದಾರೆ. 2017 ರಿಂದ, ಸಮಾನ ಬಹುಮಾನದ ಹಣವನ್ನು ತಲುಪುವ ಸ್ಪಷ್ಟ ಗಮನದೊಂದಿಗೆ ನಾವು ಪ್ರತಿ ವರ್ಷ ಮಹಿಳಾ ಈವೆಂಟ್‌ಗಳಲ್ಲಿ ಬಹುಮಾನದ ಹಣವನ್ನು ಹೆಚ್ಚಿಸಿದ್ದೇವೆ.

ಸಂತಸ ವ್ಯಕ್ತಪಡಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ 
ಈ ಐತಿಹಾಸಿಕ ನಿರ್ಧಾರದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ, ಈ ನಿರ್ಧಾರದಿಂದ ನನಗೆ ತುಂಬಾ ಸಂತೋಷವಾಗಿದೆ, ಈಗ ಪುರುಷ ಮತ್ತು ಮಹಿಳಾ ತಂಡಗಳ ನಡುವಿನ ತಾರತಮ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಎರಡೂ ತಂಡಗಳು ಈಗ ಒಟ್ಟಿಗೆ ಮುನ್ನಡೆಯಲು ಸಾಧ್ಯವಾಗುತ್ತದೆ. ಈ ನಿರ್ಧಾರದ ಬಗ್ಗೆ ಮಂಡಳಿಯಲ್ಲಿ ಭಾಗಿಯಾಗಿರುವ ಎಲ್ಲ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

Source : https://zeenews.india.com/kannada/sports/icc-historic-decision-now-women-cricketers-will-also-enjoy-equal-prize-money-as-male-cricketers-145463

Leave a Reply

Your email address will not be published. Required fields are marked *