ದೇಹದಲ್ಲಿ ಶುಗರ್ ಹೆಚ್ಚಾದರೆ, ಬೆಳಗ್ಗೆ ಎದ್ದಾಗ ಈ 5 ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ! ಆಗ ನಿರ್ಲಕ್ಷ್ಯ ಮಾಡಬಾರದು

ಒಂದು ವೇಳೆ ಮನುಷ್ಯನಿಗೆ ಸಕ್ಕರೆಕಾಯಿಲೆ ಕಾಣಿಸಿಕೊಂಡರೆ, ಬೆಳಗ್ಗಿನ ಸಮಯದಲ್ಲಿ ಕೆಲವೊಂದು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ! ಸಾಮಾನ್ಯವಾಗಿ ಈ ರೋಗಲಕ್ಷಣಗಳ ತುಂಬಾನೇ ಸೂಕ್ಷ್ಮವಾಗಿರುವುದರಿಂದ, ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಲು ಹೋಗಬಾರದು! ಇದರಲ್ಲಿ ಒಂದು ವೇಳೆ ನಿರ್ಲಕ್ಷ್ಯ ತೋರಿದರೆ, ಬಾಡಿ ಶುಗರ್ ಲೆವೆಲ್ ಏರುಪೇರು ಆಗುತ್ತಲೇ ಹೋಗುತ್ತದೆ.

ಸಕ್ಕರೆ ಕಾಯಿಲೆ ಇಂದು ವಿಶ್ವವ್ಯಾಪಿ ಎಲ್ಲಾ ಕಡೆ ಹರಡಿದೆ. ಇಂದಿನ ದಿನಗಳಲ್ಲಿ ಹೇಗೆ ಆಗಿಬಿಟ್ಟಿದೆ ಎಂದರೆ ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಇದಕ್ಕೆಲ್ಲಾ ಪ್ರಮುಖ ಕಾರಣಗಳನ್ನು ನೋಡುವುದಾದರೆ, ಇಂದಿನ ಯುವ ಜನತೆಯರು ಅನುಸರಿಸುತ್ತಿರುವ ಜೀವನಶೈಲಿ ಹಾಗೂ ಆಹಾರಪದ್ಧತಿ ಹಾಗೂ ಕೆಲವೊಮ್ಮ ವಂಶಪಾರಂಪರ್ಯದ ಕಾರಣಗಳಿಂದಾಗಿ ವಯಸ್ಸಲ್ಲದ ವಯಸ್ಸಿನಲ್ಲಿ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಕಾಯಿಲೆ ಬರುವಂತೆ ಮಾಡಿರುತ್ತದೆ. ಈ ಕಾಯಿಲೆ ಒಮ್ಮೆ ಬಂದರೆ ಹೋಗುವ ಮಾತೇ ಇಲ್ಲ. ಕೇವಲ ಇದನ್ನು ಹೆಚ್ಚಾಗದಂತೆ ಕಂಟ್ರೋಲ್ ಮಾಡಿಕೊಳ್ಳಬಹುದು ಅಷ್ಟೇ. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ, ಬಾಡಿ ಶುಗರ್ ಲೆವೆಲ್ ಏರುಪೇರು ಆಗುತ್ತಲೇ ಹೋಗುತ್ತದೆ!

ಈ ಕಾಯಿಲೆಯ ಬಗ್ಗೆ ವೈದ್ಯರು ಹೇಳುವ ಪ್ರಕಾರ

ಈ ಕಾಯಿಲೆಯ ಬಗ್ಗೆ ವೈದ್ಯರು ಹೇಳುವ ಪ್ರಕಾರ
  • ನಮ್ಮಲ್ಲಿ ಹೆಚ್ಚಿನ ಜನರು ಮಧುಮೇಹ ಕಾಯಿಲೆಯ ಲಕ್ಷಣಗಳ ಬಗ್ಗೆ ಹೆಚ್ಚು ತಿಳಿದುಕೊಂಡಿಲ್ಲ, ಅಲ್ಲದೆ ಈ ಕಾಯಿಲೆಯ ಆರಂಭಿಕ ಲಕ್ಷಣಗಳು ಬಹಳ ಬೇಗನೇ ಪತ್ತೆ ಹಚ್ಚಬಹುದು ಎಂದು ತಿಳಿದು ಕೊಂಡಿದ್ದಾರೆ! ಆದರೆ ದುರದೃಷ್ಟವಶಾತ್, ಸಕ್ಕರೆಕಾಯಿಲೆ ಇನ್ನೂ ಆರಂಭಿಕ ಹಂತದಲ್ಲಿ ಇರುವಾಗಲೇ ನೀಡುವ ಸೂಚನೆಗಳು ಸ್ಪಷ್ಟವಾಗಿದ್ದರೂ ನಮ್ಮಲ್ಲಿ ಹೆಚ್ಚಿನವರು, ಇದು ಬೇರೆಯದೇ ಆರೋಗ್ಯ ಸಮಸ್ಯೆ ಎಂದು ತಿಳಿದುಕೊಂಡು ನಿರ್ಲಕ್ಷ್ಯ ಮಾಡುತ್ತಾರೆ.
  • ಕೊನೆಗೆ ಯಾವುದೋ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಬಳಿಕವೇ ಮಧುಮೇಹ ಆವರಿಸಿರುವುದು ಗೊತ್ತಾಗುತ್ತದೆ. ಅಲ್ಲಿಯವರೆಗೆ ಮಧುಮೇಹ ಪ್ರಾರಂಭಿಕ ಹಂತದಲ್ಲಿದ್ದುದೇ ಹೆಚ್ಚಿನವರಿಗೆ ಗೊತ್ತಿರುವು ದಿಲ್ಲ. ಇದಕ್ಕೆ ಪ್ರಮುಖ ಕಾರಣ ಈ ಕಾಯಿಲೆಯ ಆರಂಭಿಕ ಲಕ್ಷಣಗಳು ಕೆಲವು ತುಂಬಾ ಸೂಕ್ಷ್ಮವಾಗಿ ರುತ್ತವೆ ಅಥವಾ ಹೆಚ್ಚಿನವರು ಇವನ್ನು ಕಡೆಗಣಿಸುತ್ತಾರೆ ಎನ್ನುತ್ತಾರೆ ಡಾ.ಬಿ.ಎಂ.ಮಕ್ಕರ್, ಹಿರಿಯ ಮಧುಮೇಹ ತಜ್ಞ, ಆರ್.ಎಸ್.ಎಸ್.ಡಿ.ಐ​

ಬಾಯಿ ಒಣಗುವ ಸಮಸ್ಯೆ ಕಂಡು ಬಂದರೆ

ಬಾಯಿ ಒಣಗುವ ಸಮಸ್ಯೆ ಕಂಡು ಬಂದರೆ

ಬೆಳಗ್ಗೆ ಎದ್ದ ಕೂಡಲೇ ಬಾಯಿ ಒಣಗುವ ಸಮಸ್ಯೆ ಅಥವಾ ಆಗಾಗ್ಗೆ ಬಾಯಾರಿಕೆಯಾಗುತ್ತಿದ್ದರೆ, ಇದು ಮಧುಮೇಹದ ಆರಂಭಿಕ ಲಕ್ಷಣ ಆಗಿರ ಬಹುದು! ಯಾಕೆಂದ್ರೆ ದೇಹದಲ್ಲಿ ಶುಗರ್ ಲೆವೆಲ್ ಜಾಸ್ತಿ ಆಗುತ್ತಿದ್ದರೆ, ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು! ಹೀಗಾಗಿ ಕೂಡಲೇ ಬ್ಲಡ್ ಶುಗರ್ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು.

ಕಣ್ಣುಗಳು ಮಸುಕಾಗಿ ಕಾಣುತ್ತಿದ್ದರೆ

ಕಣ್ಣುಗಳು ಮಸುಕಾಗಿ ಕಾಣುತ್ತಿದ್ದರೆ

ಹಾಸಿಗೆಯಿಂದ ಎದ್ದ ಕೂಡಲೇ ಕಣ್ಣುಗಳು ಮಸುಕಾಗಿ ಕಾಣುತ್ತಿದ್ದರೆ, ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಜಾಸ್ತಿಯಾಗಿದೆ ಎಂದರ್ಥ! ನಿಮಗೆ ಗೊತ್ತಿರಲಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದರೆ ಇದು ಕಣ್ಣಿನ ದೃಷ್ಟಿಯ ಮೇಲೆ ನೇರವಾದ ಪರಿಣಾಮ ಉಂಟು ಮಾಡುತ್ತದೆಯಂತೆ. ಹೀಗಾಗಿ ಬೆಳಗ್ಗಿನ ಸಮಯದಲ್ಲಿ ಕಣ್ಣುಗಳು ಮಸುಕಾಗಿ ಕಾಣಿಸಿಕೊಳ್ಳುತ್ತಿದ್ದರೆ, ಕೂಡಲೇ ಬ್ಲಡ್ ಶುಗರ್ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು.

ಬಾಯಾರಿಕೆಯ ಜೊತೆಗೆ ಮೂತ್ರವಿಸರ್ಜನೆಗೆ ಅವಸರವಾಗುವುದು!

ಬಾಯಾರಿಕೆಯ ಜೊತೆಗೆ ಮೂತ್ರವಿಸರ್ಜನೆಗೆ ಅವಸರವಾಗುವುದು!

ಶುಗರ್ ಇರುವವರಿಗೆ ಬಾಯಾರಿಕೆ ಸಹಜ.ಹಗಲು ರಾತ್ರಿ ಪದೇ ಪದೇ ನೀರು ಕುಡಿಯಬೇಕು ಅನಿಸಿದರೆ, ಜೊತೆಗೆ ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಅವಸರವಾಗುತ್ತಿರುವುದು ಕೂಡ ಮಧುಮೇಹದ ಪ್ರಮುಖ ಲಕ್ಷಣಗಳಲ್ಲಿ ಒಂದು! ಕೆಲವೊಮ್ಮೆ ನೀರು ಕುಡಿಯದೇ ಇದ್ದರೂ ಕೂಡ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆ ಎದುರಾ ಗುತ್ತದೆ. ಇದು ಸಕ್ಕರೆ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ ಎಂದು ಹೇಳಬಹುದು.

ಸುಸ್ತು ಹಾಗೂ ಆಯಾಸ ಕಾಣಿಸಿಕೊಳ್ಳುವುದು

ಸುಸ್ತು ಹಾಗೂ ಆಯಾಸ ಕಾಣಿಸಿಕೊಳ್ಳುವುದು

ಬೆಳಗ್ಗೆ ಎದ್ದಾಗ ತುಂಬಾನೇ ಸುಸ್ತು ಮತ್ತು ಆಯಾಸ ಎದುರಾಗುತ್ತದೆ. ಯಾವುದೇ ಕೆಲಸಗಳನ್ನು ಮಾಡಲು ಮನಸ್ಸು ಇರುವುದಿಲ್ಲ. ರಾತ್ರಿ ಕಣ್ತುಂಬಾ ನಿದ್ದೆ ಮಾಡಿದ್ದರೂ ಕೂಡ, ಬೆಳಗ್ಗಿನ ಜಾವ ಈ ರೀತಿಯಲ್ಲಿ ಸಮಸ್ಯೆ ಕಾಣಿಸಿಕೊಂಡರೆ, ಶುಗರ್ ಹೆಚ್ಚಾಗಿ ಎಂದರ್ಥ. ಈ ಯಾವುದೇ ಕೆಲಸಗಳನ್ನು ಮಾಡಲು ಮನಸ್ಸು ಇರುವುದಿಲ್ಲ! ಇದಕ್ಕೆ ಪ್ರಮುಖ ಕಾರಣ ಇನ್ಸುಲಿನ್ ಪ್ರತಿರೋಧತೆ ಹಾಗೂ ರಕ್ತದಲ್ಲಿ ಏರುಪೇರು ಆಗುವ ಬ್ಲಡ್ ಶುಗರ್ ಪದೇ ಪದೇ ಸುಸ್ತು ಆಯಾಸ ಉಂಟಾಗುವಂತೆ ಮಾಡುತ್ತದೆ.

ಕೊನೆ ಮಾತು

ಕೊನೆ ಮಾತು

ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಏರಿಕೆಯಾದ ಸಂದರ್ಭದಲ್ಲಿ ಇನ್ನು ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳೆಂದರೆ, ಸುಸ್ತು, ಆಯಾಸ, ಕಣ್ಣುಗಳು ಮಂಜಾಗುವುದು, ಕೈಕಾಲುಗಳಲ್ಲಿ ಮುಳ್ಳು ಚುಚ್ಚಿದ ಅನುಭವ ಉಂಟಾಗುವುದು, ಕೈಕಾಲುಗಳು ಹಿಡಿದುಕೊಂಡಂತೆ ಆಗುವುದು ಕೂಡ ಆಗುತ್ತದೆ. ಒಟ್ಟಿನಲ್ಲಿ ಸಕ್ಕರೆ ಕಾಯಿಲೆ ಹೆಚ್ಚಾದ ವ್ಯಕ್ತಿ ಗಳಲ್ಲಿ ಈ ರೀತಿಯ ಆರೋಗ್ಯಸಮಸ್ಯೆಗಳು ಒಟ್ಟಿಗೆ ಅಥವಾ ಒಂದಾದ ಮೇಲೆ ಒಂದರಂತೆ ಕಾಣಿಸಿಕೊಳ್ಳುತ್ತವೆ.

ಹಕ್ಕು ನಿರಾಕರಣೆ: ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲೂ ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಸಮಗ್ರ ಸುದ್ದಿ ಇದರ ಸತ್ಯತೆ, ನಿಖರತೆ ಮತ್ತು ಪರಿಣಾಮದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

Vijayakarnataka

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *