ಹೃದಯದಲ್ಲಿ ಬ್ಲೋಕೆಜ್ ಇದ್ದರೆ ಕಾಣಿಸಿಕೊಳ್ಳುತ್ತವೆ ಈ ಲಕ್ಷಣಗಳು! ಜನ ಇದನ್ನು ನಿರ್ಲಕ್ಷಿಸುವುದೇ ಹೆಚ್ಚು.

  • ಹಾರ್ಟ್ ಬ್ಲಾಕ್ ನಲ್ಲಿ ಮೂರು ಹಂತಗಳಿರುತ್ತವೆ.
  • ಮೊದಲ ಹಂತದಲ್ಲಿ ಇದು ಕನಿಷ್ಠ ಸಮಸ್ಯೆಗಳನ್ನು ಉಂಟುಮಾಡಬಹುದು.
  • ಈ ನಿರ್ಲಕ್ಷ್ನವೇ ಹೃದಯಾಘಾತಕ್ಕೆ ಕಾರಣವಾಗಬಹುದು.

Warning Signs And Symptoms Of Heart Blockage : ಹೃದಯದ ಅಪ್ಪರ್ ಚೇಂಬರ್ ನಿಂದ ವಿದ್ಯುತ್ ಸಂಕೇತಗಳು ಹೃದಯದ ಕೆಳಗಿನ ಚೇಂಬರ್ ಗೆ  ಸರಿಯಾಗಿ ತಲುಪದಿದ್ದಾಗ ಹಾರ್ಟ್ ಬ್ಲಾಕ್ ಆಗುತ್ತದೆ.ಹಾರ್ಟ್ ಬ್ಲಾಕ್ ನಲ್ಲಿ ಮೂರು ಹಂತಗಳಿರುತ್ತವೆ. ಮೊದಲ ಹಂತದಲ್ಲಿ ಇದು ಕನಿಷ್ಠ ಸಮಸ್ಯೆಗಳನ್ನು ಉಂಟುಮಾಡಬಹುದು.ಆದರೆ,ಮೂರನೇ ಹಂತ ಮಾರಣಾಂತಿಕವಾಗಿರುತ್ತದೆ.    ವಯಸ್ಸು ಹೆಚ್ಚಾದಂತೆ ಹೃದಯಾಘಾತದ ಅಪಾಯ ಕೂಡಾ ಹೆಚ್ಚುತ್ತದೆ. ಹಾರ್ಟ್ ನಲ್ಲಿ ಬ್ಲೋಕೆಜ್ ಇದ್ದಾಗ ಅನೇಕ ರೀತಿಯ ಸಂಕೇತಗಳು ನಮಗೆ ಸಿಗುತ್ತವೆ.ಆದರೆ  ಇದನ್ನು ಹೆಚ್ಚಿನವರು ನಿರ್ಲಕ್ಷಿಸಿ ಬಿಡುತ್ತಾರೆ. ಈ ನಿರ್ಲಕ್ಷ್ನವೇ ಹೃದಯಾಘಾತಕ್ಕೆ ಕಾರಣವಾಗಬಹುದು. 

ಉಸಿರಾಟದ ಸಮಸ್ಯೆ : 
ಕೆಲವರಿಗೆ ಪದೇ ಪದೇ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಉಸಿರಾಟ ಬಹಳ ತ್ರಾಸದಾಯಕವಾಗಿರುತ್ತದೆ.ಈ ಸಮಸ್ಯೆಗೆ ಕಾರಣ ಏನಿರಬಹುದು ಎಂದು ನಿಮ್ಮಷ್ಟಕ್ಕೆ ಯೋಚನೆ ಮಾಡುವ ಬದಲು ತಕ್ಷಣ ವೈದ್ಯರನ್ನು ಭೇಟಿ ಮಾಡಿ. 

ಮೂರ್ಛೆ ಹೋಗುವುದು : 
ಪದೇ ಪದೇ ಮೂರ್ಛೆ ಹೋಗುತ್ತಿದ್ದರೆ, ಅದು ಹೃದಯದಲ್ಲಿ ಬ್ಲೋಕೆಜ್ ಇರುವ ಸಂಕೇತವಾಗಿರಬಹುದು. ಹೃದಯಾಘಾತವಾದಾಗಲೂ ಈ ಸಂಕೇತ ಕಂಡು ಬರುತ್ತದೆ.ಇದರೊಂದಿಗೆ,ನಿಮ್ಮ ಹೃದಯ ಬಡಿತಡ ವೇಗ ವಿಪರೀತ ಹೆಚ್ಚಾಗುತ್ತದೆ.ಈ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಎದೆ ನೋವು : 
ಹೃದಯದಲ್ಲಿ ಬ್ಲೋಕೆಜ್ ಇದ್ದರೆ ಎದೆ ನೋವು ಕಾಣಿಸಿಕೊಳ್ಳುತ್ತದೆ.ಹೆಚ್ಚಿನವರು ಈ ಲಕ್ಷಣವನ್ನು ಗ್ಯಾಸ್ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ.ಆದರೆ, ಈ ಸಮಸ್ಯೆ  ದೀರ್ಘಕಾಲದವರೆಗೆ ಕಾಡುತ್ತಿದ್ದರೆ ಸ್ಥಿತಿ ಹದಗೆಡಬಹುದು. ಹಾಗಾಗಿ ಎದೆ ಮತ್ತು ಸುತ್ತ ಮುತ್ತ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ. 

ತಲೆಸುತ್ತುವುದು : 
ತಲೆ ಸುತ್ತುವುದು ಹೃದಯದ ಬ್ಲೋಕೆಜ್ ನ ಸಂಕೇತವಾಗಿರಬಹುದು. ಯಾವುದೇ ಕಾರಣವಿಲ್ಲದೆ ಆಗಾಗ ತಲೆಸುತ್ತುತ್ತಿದ್ದರೆ ಅದು ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ.ಇಂತಹ ಚಿಹ್ನೆಗಳು ಸಾಮಾನ್ಯವಾಗಿ ಅನೇಕ ಸಾಮಾನ್ಯ ಸಂದರ್ಭಗಳಲ್ಲಿ ಸಂಭವಿಸುತ್ತವೆ.ಆದ್ದರಿಂದಲೇ ಜನ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. 

ವಾಕರಿಕೆ : 
ಯಾವುದೇ ಕಾರಣವಿಲ್ಲದೆ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುವುದು ಕೂಡಾ ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ. ಜನರು ಸಾಮಾನ್ಯವಾಗಿ ಇಂಥಹ ಚಿಹ್ನೆಗಳ ಬಗ್ಗೆ ನಿರ್ಲಕ್ಷ್ಯ ತೋರಿ ಬಿಡುತ್ತಾರೆ. ನಿಮ್ಮ ದೇಹದಲ್ಲಿಯೂ ಇಂಥಹ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ತಜ್ಞರ ಸಲಹೆ ಪಡೆಯಿರಿ. 

(ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳು ಮತ್ತು ಸಲಹೆಗಳನ್ನು ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಸಮಗ್ರ ಸುದ್ದಿ  ಖಚಿತಪಡಿಸಿಕೊಳ್ಳುವುದಿಲ್ಲ.)

Source : https://zeenews.india.com/kannada/health/these-symptoms-indicates-heart-blockage-heart-health-209122

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *