ಆರೋಗ್ಯಕರ ಮೂಳೆಗಳು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮ್ಮ ದೈನಂದಿನ ಜೀವನದಲ್ಲಿ ಕೆಲವು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಸಾಧ್ಯವಾದಷ್ಟು ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಅಂತರ ಕಾಯ್ದುಕೊಳ್ಳಬಹುದು ಎಂದು ಹೇಳಲಾಗುತ್ತದೆ.
![](https://samagrasuddi.co.in/wp-content/uploads/2024/08/image-11.png)
- ನಮ್ಮ ವಯಸ್ಸು, ನಾವು ತೆಗೆದುಕೊಳ್ಳುವ ಆಹಾರ, ದೈಹಿಕ ಚಟುವಟಿಕೆಗಳು, ಹಾರ್ಮೋನ್ ಬದಲಾವಣೆಗಳು, ಜೀವನಶೈಲಿ ಎಲ್ಲವೂ ಕೂಡ ಮೂಳೆಗಳ ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ.
- ಆರೋಗ್ಯಕರ ಮೂಳೆಗಳನ್ನು ಹೊಂದಲು ಪೋಷಕಾಂಶಭರಿತ ಆಹಾರಗಳನ್ನು ಸೇವಿಸುವುದರ ಜೊತೆಗೆ ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಕೂಡ ಅಗತ್ಯವಾಗಿದೆ.
Bones Health: ದೇಹಕ್ಕೆ ಚೌಕಟ್ಟನ್ನು ಒದಗಿಸುವ ಮೂಳೆಗಳು ದೈಹಿಕ ಕಾರ್ಯಗಳಿಗೆ ಅಗತ್ಯ ಖನಿಜವಾದ ಕ್ಯಾಲ್ಸಿಯಂ ಸಂಗ್ರಹಣೆಯ ಜೊತೆಗೆ ಸ್ನಾಯುಗಳನ್ನು ರಕ್ಷಿಸುತ್ತವೆ. ಮೂಳೆ ಆರೋಗ್ಯವು ನಮ್ಮ ಒಟ್ಟಾರೆ ಆರೋಗ್ಯದ ನಿರ್ಣಾಯಕ ಅಂಶ ಎಂತಲೇ ಹೇಳಬಹುದು. ಆದರೆ, ಈ ಬದಲಾದ ಜೀವನಶೈಲಿಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮೂಳೆಗಳಿಗೆ ಸಂಬಂಧಿಸಿದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಪ್ಪಿಸಿ ನೈಸರ್ಗಿಕವಾಗಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ದೈನಂದಿನ ಜೀವನದಲ್ಲಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮುಖ್ಯವಾಗಿದೆ.
ವಾಸ್ತವವಾಗಿ, ನಮ್ಮ ವಯಸ್ಸು, ನಾವು ತೆಗೆದುಕೊಳ್ಳುವ ಆಹಾರ, ದೈಹಿಕ ಚಟುವಟಿಕೆಗಳು, ಹಾರ್ಮೋನ್ ಬದಲಾವಣೆಗಳು, ಜೀವನಶೈಲಿ ಎಲ್ಲವೂ ಕೂಡ ಮೂಳೆಗಳ ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ.
ಆರೋಗ್ಯಕರ ಮೂಳೆಗಳನ್ನು (Healthy Bones) ಹೊಂದಲು ಪೋಷಕಾಂಶಭರಿತ ಆಹಾರಗಳನ್ನು ಸೇವಿಸುವುದರ ಜೊತೆಗೆ ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಕೂಡ ಅಗತ್ಯವಾಗಿದೆ.
ನೈಸರ್ಗಿಕವಾಗಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಈ ಕೆಲಸಗಳನ್ನು ತಪ್ಪದೇ ಮಾಡಿ!
ಕ್ಯಾಲ್ಸಿಯಂ ಭರಿತ ಆಹಾರ:
ನಿಮ್ಮ ದೈನಂದಿನ ಆಹಾರದಲ್ಲಿ ಹಾಲು, ಚೀಸ್, ಮೊಸರು ಸೇರಿದಂತೆ ಡೈರಿ ಉತ್ಪನ್ನಗಳನ್ನು ಒಳಗೊಂಡಂತೆ ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು (Calcium Rich Foods) ಸೇವಿಸಿ.
ವಿಟಮಿನ್ ಡಿ:
ಆರೋಗ್ಯಕರ ಮೂಳೆಗಳನ್ನು ಪಡೆಯಲು ವಿಟಮಿನ್ ಡಿ (Vitamin D) ಮುಖ್ಯವಾಗಿದ್ದು, ನಿತ್ಯ 10-20 ನಿಮಿಷಗಳವರೆಗೆ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳಿ.
ನಿಯಮಿತ ವ್ಯಾಯಾಮ:
ಉತ್ತಮ ಆಹಾರಾಭ್ಯಾಸದ ಜೊತೆಗೆ ಪ್ರತಿದಿನ ವಾಕಿಂಗ್, ಜಾಗಿಂಗ್ ಮತ್ತು ಡ್ಯಾನ್ಸಿಂಗ್‌ನಂತಹ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ. ಇದು ನಿಮ್ಮ ತೂಕವನ್ನು ನಿಯಂತ್ರಿಸುವುದಷ್ಟೇ ಅಲ್ಲ, ಮೂಳೆಗಳನ್ನು ಬಲಗೊಳಿಸಲು ಕೂಡ ಪ್ರಯೋಜನಕಾರಿ ಆಗಿದೆ.
ಕೆಫಿನ್ ಸೇವೆ ತಪ್ಪಿಸಿ:
ಕೆಫಿನ್ ಮೂಳೆಗಳಿಗೆ ವಿಷವಿದ್ದಂತೆ. ಹಾಗಾಗಿ, ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾದಷ್ಟು ಕೆಫಿನ್ ಸೇವನೆಯನ್ನು ತಪ್ಪಿಸಿ.
ನಿಷ್ಕ್ರಿಯತೆಯ ಅವಧಿ:
ಇತ್ತೀಚಿನ ದಿನಗಳಲ್ಲಿ ಒಂದು ಕಡೆ ಕುಳಿತು ಕೆಲಸ ಮಾಡುವವರೇ ಹೆಚ್ಚು. ಆದರೆ, ಇದು ನಮ್ಮ ದೇಹವನ್ನು ನಿಷ್ಕ್ರಿಯವಾಗಿಸುತ್ತದೆ. ಹಾಗಾಗಿ, ನೀವು ದೀರ್ಘ ಸಮಯ ಒಂದೇ ಕಡೆ ಕುಳಿತು ಕೆಲಸ ಮಾಡುವವರಾಗಿದ್ದರೆ ಆಗಾಗ್ಗೆ ಬ್ರೇಕ್ ತೆಗೆದುಕೊಳ್ಳಿ.
ಹೈಡ್ರೆಟ್ ಆಗಿರಿ:
ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದು, ದೇಹವನ್ನು ಹೈಡ್ರೆಟೆಡ್ ಆಗಿರಿಸುವುದು ಮೂಳೆಗಳ ಆರೋಗ್ಯಕ್ಕಷ್ಟೇ ಕೊಡುಗೆ ನೀಡುವುದಿಲ್ಲ. ಒಟ್ಟಾರೆ ಆರೋಗ್ಯವನ್ನೂ ಬೆಂಬಲಿಸುತ್ತದೆ.
ಧೂಮಪಾನ ಮತ್ತು ಆಲ್ಕೋಹಾಲ್ ತಪ್ಪಿಸಿ:
ಧೂಮಪಾನ, ಮದ್ಯಪಾನ ಎರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಧೂಮಪಾನವು ಮೂಳೆಯ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. ಅಂತೆಯೇ ಅತಿಯಾದ ಆಲ್ಕೊಹಾಲ್ ಸೇವನೆಯು ಕ್ಯಾಲ್ಸಿಯಂ ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ. ಹಾಗಾಗಿ ಈ ಅಭ್ಯಾಸಗಳನ್ನು ತ್ಯಜಿಸಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.