ನಿಮ್ಮ ದೇಹದಲ್ಲಿ ಹೀಗಾಗುತ್ತಿದ್ದರೆ ಅರ್ಥ ಮಾಡಿಕೊಳ್ಳಿ ಬ್ಲಡ್ ಶುಗರ್ ಲೋ ಆಗಿದೆ ! ಇದು ಬಹಳ ಅಪಾಯಕಾರಿ.

  • ಬ್ಲಡ್ ಶುಗರ್ ಹೆಚ್ಚಾದಾಗ ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ
  • ಬ್ಲಡ್ ಶುಗರ್ ಕಡಿಮೆಯಾದರೆ ಅದನ್ನು ಹೈಪೊಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ
  • ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುವುದು ಸಹ ತುಂಬಾ ಅಪಾಯಕಾರಿ

What happens when blood sugar decreases in the body : ಮಧುಮೇಹವು ಚಯಾಪಚಯ ಅಸ್ವಸ್ಥತೆಯಾಗಿದ್ದು,ಇದರಲ್ಲಿ ಬಳಲುತ್ತಿರುವ ವ್ಯಕ್ತಿಯ ಬ್ಲಡ್ ಶುಗರ್ ಹೆಚ್ಚಾಗಿರುತ್ತದೆ.ಬ್ಲಡ್ ಶುಗರ್ ಹೆಚ್ಚಾದಾಗ ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಲು ಪ್ರಾರಂಭಿಸುತ್ತವೆ.ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಉತ್ಪತ್ತಿಯಾಗದಿದ್ದಾಗ,ದೇಹದ ಜೀವಕೋಶಗಳು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ.ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಮಧುಮೇಹದ ಸಮಸ್ಯೆ ಗಂಭೀರವಾಗಬಹುದು.

ಬ್ಲಡ್ ಶುಗರ್ ಹೆಚ್ಚಾದಂತೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುವುದು ಸಹ ತುಂಬಾ ಅಪಾಯಕಾರಿ ಸ್ಥಿತಿಯಾಗಿದೆ.ಬ್ಲಡ್ ಶುಗರ್ ಕಡಿಮೆಯಾದರೆ ಅಂಥಹ ಸ್ಥಿತಿಯನ್ನು ಹೈಪೊಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ.ಸಮಯಕ್ಕೆ ಸರಿಯಾಗಿ ಇದಕ್ಕೆ ಚಿಕಿತ್ಸೆ ನೀಡದಿದ್ದರೆ,ಈ ಸ್ಥಿತಿಯು ಮಾರಣಾಂತಿಕವಾಗಬಹುದು.

ಹೈಪೊಗ್ಲಿಸಿಮಿಯಾ ಸಮಸ್ಯೆ ಎದುರಾಗಲು ಕಾರಣ? : 
ತಜ್ಞರ ಪ್ರಕಾರ,ಒಬ್ಬ ವ್ಯಕ್ತಿಯ ಸಕ್ಕರೆ ಮಟ್ಟವು 70 mg/dLಗಿಂತ ಕಡಿಮೆಯಾದರೆ,ಅದನ್ನು ಲೋ ಬ್ಲಡ್ ಶುಗರ್ ಅಥವಾ ಹೈಪೊಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ. ಟೈಪ್-1 ಡಯಾಬಿಟಿಸ್ ರೋಗಿಗಳಲ್ಲಿ ಈ ಸ್ಥಿತಿಯು ಹೆಚ್ಚಾಗಿ ಕಂಡುಬರುತ್ತದೆ. ಹಾಗಂತ ಟೈಪ್-2 ಡಯಾಬಿಟಿಸ್ ರೋಗಿಗಳಲ್ಲಿ ಇದು ಕಂಡು ಬರುವುದಿಲ್ಲ ಎಂದಲ್ಲ.ಮಧುಮೇಹ ಇಲ್ಲದವರಲ್ಲಿಯೂ  ಹೈಪೊಗ್ಲಿಸಿಮಿಯಾ ಅಪಾಯ ಎದುರಾಗಬಹುದು. 

ಕಡಿಮೆ ರಕ್ತದ ಸಕ್ಕರೆಯ ಲಕ್ಷಣಗಳು ಯಾವುವು? :
ದೇಹದ ನಡುಕ 
ಅತಿಯಾಗಿ ಬೆವರುವುದು
ಹೃದಯ ಬಡಿತ ಹೆಚ್ಚಾಗುತ್ತದೆ
ತುಂಬಾ ಹಸಿವಾಗುವುದು 
ಚರ್ಮದ ಬಣ್ಣ ಬದಲಾಗುವುದು 
ತಲೆತಿರುಗುವಿಕೆ ಮತ್ತು ಮೂರ್ಛೆ ಹೋಗುವುದು 
ಮಂದ ದೃಷ್ಟಿ
ಮಾತನಾಡುವಾಗ ತೊಂದರೆ

ಬ್ಲಡ್ ಶುಗರ್ ಲೋ ಆಗದಂತೆ ನೋಡಿಕೊಳ್ಳುವುದು ಹೇಗೆ ? :
೧. ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು. ಆಹಾರದಲ್ಲಿ ಫ್ಯಾಟ್, ಪ್ರೋಟೀನ್ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್ ಗಳನ್ನು ಸೇರಿಸಬೇಕು. 
೨. ಸರಿಯಾದ ಸಮಯಕ್ಕೆ ನಿಮ್ಮ ಆಹಾರವನ್ನು ಸೇವಿಸಿ.
೩. ವೈದ್ಯರ ಸಲಹೆ ಪಾಲಿಸಿ ಸಮಯಕ್ಕೆ ಸರಿಯಾಗಿ ಔಷಧಿಗಳು ಮತ್ತು ಇನ್ಸುಲಿನ್ ಅನ್ನು ತೆಗೆದುಕೊಳ್ಳಿ.
೪. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುತ್ತಿರಿ ಮತ್ತು ಅದರಲ್ಲಿನ ಬದಲಾವಣೆಗಳಿಗೆ ಗಮನ ಕೊಡಿ.
೫. ಖಾಲಿ ಹೊಟ್ಟೆಯಲ್ಲಿ ಎಂದಿಗೂ ವ್ಯಾಯಾಮಕ್ಕೆ ಹೋಗಬೇಡಿ.
೬. ಆಲ್ಕೋಹಾಲ್ ಸೇವಿಸುವುದನ್ನು ತಪ್ಪಿಸಿ.
೭. ನಿಮ್ಮೊಂದಿಗೆ ಯಾವಾಗಲೂ ಸಿಹಿ ಅಥವಾ ಕಾರ್ಬೋಹೈಡ್ರೇಟ್ ಇರುವ ತಿಂಡಿಗಳನ್ನು ಕೊಂಡೊಯ್ಯಿರಿ. ತಲೆ ಸುತ್ತಿದಂತೆ ಆದಾಗ ಅಥವಾ ದೌರ್ಬಲ್ಯ ಎದುರಾದಾಗ ಈ ವಸ್ತುಗಳನ್ನು ಸೇವಿಸಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಸಮಗ್ರ ಸುದ್ದಿ ಖಚಿತಪಡಿಸಿಕೊಳ್ಳುವುದಿಲ್ಲ.

Source : https://zeenews.india.com/kannada/health/low-blood-sugar-symptoms-in-a-body-and-remedies-215534

Leave a Reply

Your email address will not be published. Required fields are marked *