ದೇಹದಲ್ಲಿ ವಿಟಮಿನ್ ಡಿ ಕೊರತೆ ಎದುರಾದರೆ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
- ನಿಮ್ಮಲ್ಲೂ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆಯಾ?
- ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
- ತಕ್ಷಣ ವಿಟಮಿನ್ ಡಿ ಪರೀಕ್ಷೆ ಮಾಡಿಸಿಕೊಳ್ಳಿ

vitamin D deficiency : ವಿಟಮಿನ್ ಡಿ ಮೂಳೆಯ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ.ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಂಡುಬರುತ್ತಿರುವುದು ಸಾಮಾನ್ಯ ಸಮಸ್ಯೆಯಾಗಿದೆ.
ಕೂದಲು ಉದುರುವುದು :
ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಉದುರುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಇದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ವಿಟಮಿನ್ ಡಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ದೇಹದಲ್ಲಿ ವಿಟಮಿನ್ ಡಿ ಕೊರತೆ ಎದುರಾದರೆ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ತೂಕ ಹೆಚ್ಚಾಗುವುದು :
ಹಠಾತ್ ತೂಕ ಹೆಚ್ಚಾಗುವುದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರುತ್ತದೆ. ವಿಟಮಿನ್ ಡಿ ನಮ್ಮ ದೇಹಕ್ಕೆ ನೈಟ್ರಿಕ್ ಆಕ್ಸೈಡ್ ಅನ್ನು ನೀಡುತ್ತದೆ.ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಕೊರತೆಯು ತೂಕ ಹೆಚ್ಚಾಗಲು ಕಾರಣವಾಗಬಹುದು.
ಸುಸ್ತು :
7 ರಿಂದ 8 ಗಂಟೆಗಳ ನಿದ್ದೆ ಮಾಡಿದ ನಂತರವೂ, ಸುಸ್ತು, ಆಲಸ್ಯವಾಗುತ್ತಿದ್ದರೆ, ಅದು ವಿಟಮಿನ್ ಡಿ ಕೊರತೆಯ ಲಕ್ಷಣವೂ ಆಗಿರಬಹುದು.
ಮನಸ್ಥಿತಿಯ ಮೇಲೆ ಪರಿಣಾಮ :
ಮಾತಿಗೆ ಮುನ್ನ ಸಿಡುಕುತನ, ಖಿನ್ನತೆಗೆ ಒಳಗಾಗುವುದು, ಸಣ್ಣ ಸಣ್ಣ ವಿಚಾರಗಳಿಗೆ ಅಳುವುದು ಸಹ ವಿಟಮಿನ್ ಡಿ ಕೊರತೆಯ ಸಂಕೇತವಾಗಿರುತ್ತದೆ. ವಿಟಮಿನ್ ಡಿಯನ್ನು ಸೂರ್ಯನ ಕಿರಣಗಳಿಂದ ನೈಸರ್ಗಿಕವಾಗಿ ಪಡೆಯಬಹುದು.
ಕೀಲು ಮತ್ತು ಸ್ನಾಯು ನೋವು :
ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ, ಅದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ವಿಟಮಿನ್ ಡಿ ಕೊರತೆಯಿಂದಾಗಿ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗುತ್ತದೆ. ಇದರಿಂದಾಗಿ ಮೂಳೆಗಳು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬೆನ್ನು ಅಥವಾ ಕೀಲುಗಳಲ್ಲಿ ನೋವು ಇದ್ದರೆ, ವಿಟಮಿನ್ ಡಿ ಪರೀಕ್ಷೆಯನ್ನು ಮಾಡಿಸಿಕೊಲ್ಲುವುದು ಸೂಕ್ತ.
ವಿಟಮಿನ್ ಡಿ ಪೂರೈಸುವ ಆಹಾರಗಳು :
ಅಣಬೆ, ಮೊಟ್ಟೆ, ಹಾಲು, ಸೋಯಾ ಹಾಲು, ಕಿತ್ತಳೆ ರಸ, , ಕೊಬ್ಬಿನ ಅಂಶಗಳಿರುವ ಮೀನು, ಇತ್ಯಾದಿಗಳನ್ನು ಸೇವಿಸುವುದರಿನದ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.