Multiple Bank Account Rules : ಅನೇಕ ಖಾಸಗಿ ಬ್ಯಾಂಕ್ಗಳು ಕೆಲವು ವಿಶೇಷ ಸೇವೆಗಳನ್ನು ಒದಗಿಸುತ್ತಿವೆ. ಇದು ಗ್ರಾಹಕರು ಅನೇಕ ಬ್ಯಾಂಕ್ ಖಾತೆಗಳನ್ನು ತೆರೆಯಲು ಕಾರಣವಾಗುತ್ತದೆ.ಆದರೆ ಹೆಚ್ಚು ಖಾತೆ ಹೊಂದಿದ್ದರೆ ಏನಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
- ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ಕೆಲಸಗಳನ್ನು ಬಹಳ ಸುಲಹವಾಗಿ ನಿರ್ವಹಿಸಬಹುದು
- ಡಿಜಿಟಲ್ ರೀತಿಯಲ್ಲಿ ನಿಮಿಷಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬಹುದು.
- ಬ್ಯಾಂಕಿಂಗ್ ಉದ್ಯಮ ಗ್ರಾಹಕರಿಗೆ ಸಾಕಷ್ಟು ಅನುಕೂಲವನ್ನು ಒದಗಿಸುತ್ತಿವೆ

ಬೆಂಗಳೂರು : Multiple Bank Account Rules : ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ಕೆಲಸಗಳನ್ನು ಬಹಳ ಸುಲಭವಾಗಿ ನಿರ್ವಹಿಸಬಹುದು. ಡಿಜಿಟಲ್ ರೀತಿಯಲ್ಲಿ ನಿಮಿಷಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬಹುದು. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಉದ್ಯಮ ಗ್ರಾಹಕರಿಗೆ ಸಾಕಷ್ಟು ಅನುಕೂಲವನ್ನು ಒದಗಿಸುತ್ತಿವೆ. ಎಲ್ಲಿಂದಲಾದರೂ ಯಾರಿಗೆ ಬೇಕಾದರೂ ತಕ್ಷಣ ಹಣ ರವಾನೆ, ಡಿಜಿಟಲ್ ಸೌಲಭ್ಯದ ಮೂಲಕ ಕುಳಿತಲ್ಲಿಂದಲೇ ವ್ಯವಹಾರ, ಆನ್ಲೈನ್ KYC ನೋಂದಣಿ, ಆನ್ಲೈನ್ ಹೊಸ ಬ್ಯಾಂಕ್ ಖಾತೆ ತೆರೆಯುವ ಪ್ರಕ್ರಿಯೆ ಹೀಗೆ ಎಲ್ಲವೂ ಬಹಳ ಸುಲಭವಾಗಿ, ಸರಳವಾಗಿ ನಡೆದು ಹೋಗುತ್ತದೆ.
ಪ್ರಸ್ತುತ ಅನೇಕ ಖಾಸಗಿ ಬ್ಯಾಂಕ್ಗಳು ಕೆಲವು ವಿಶೇಷ ಸೇವೆಗಳನ್ನು ಒದಗಿಸುತ್ತಿವೆ.ಈ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದು ಗ್ರಾಹಕರು ಅನೇಕ ಬ್ಯಾಂಕ್ ಖಾತೆಗಳನ್ನು ತೆರೆಯಲು ಕಾರಣವಾಗುತ್ತದೆ. ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವುದು ತುಂಬಾ ಕಷ್ಟ.ಏಕೆಂದರೆ ಪ್ರತಿಯೊಂದು ಬ್ಯಾಂಕ್ ವಿಭಿನ್ನ ಕಾರ್ಯವಿಧಾನಗಳನ್ನು ಹೊಂದಿದೆ. ಬಹು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಅಪಾಯಗಳು ಯಾವುವು ಮತ್ತು ಅವುಗಳನ್ನು ಹೇಗೆ ನಿವಾರಿಸುವುದು ಎಂಬುದನ್ನು ಇಲ್ಲಿ ನೋಡೋಣ.
ಕನಿಷ್ಠ ಬ್ಯಾಲೆನ್ಸ್ :
ಬಹು ಖಾತೆಗಳನ್ನು ಹೊಂದಿರುವ ಮೊದಲ ಸಮಸ್ಯೆ ಪ್ರತಿ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡುವುದು. ಪ್ರಸ್ತುತ ಹೆಚ್ಚಿನ ಬ್ಯಾಂಕ್ಗಳು ಉಳಿತಾಯ ಖಾತೆಗಳಲ್ಲಿ ಇಡಬೇಕಾದ ಕನಿಷ್ಠ ಮೊತ್ತವನ್ನು ಹೆಚ್ಚಿಸಿವೆ. ಅದನ್ನು ನಿರ್ವಹಿಸುವಲ್ಲಿ ವಿಫಲವಾದರೆ ದಂಡ ವಿಧಿಸುವ ಸಾಧ್ಯತೆಯಿದೆ. ಅಲ್ಲದೆ, ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಆನ್ಲೈನ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಬಹು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ವಂಚನೆಗೆ ಕಾರಣವಾಗಬಹುದು.ಆದ್ದರಿಂದ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವವರು ಹೆಚ್ಚು ಜಾಗರೂಕರಾಗಿರಬೇಕು.
ಬ್ಯಾಂಕ್ ಶುಲ್ಕಗಳು :
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಮತ್ತೊಂದು ಸಮಸ್ಯೆಯೆಂದರೆ ಬ್ಯಾಂಕ್ ಖಾತೆಗಳ ನಿಷ್ಕ್ರಿಯತೆ. ನಾವು ಅನೇಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ, ಅವುಗಳಲ್ಲಿ ಕೆಲವನ್ನು ಮಾತ್ರ ಬಳಸುತ್ತೇವೆ. ಉಳಿದ ಖಾತೆಗಳನ್ನಿ ನಿರ್ಲಕ್ಷಿಸಿ ಬಿಡುತ್ತೇವೆ. ದೀರ್ಘಾವಧಿಯವರೆಗೆ ಯಾವುದೇ ವಹಿವಾಟುಗಳಿಲ್ಲದಿದ್ದಾಗ ಬ್ಯಾಂಕ್ ನಿರ್ದಿಷ್ಟ ಖಾತೆಯನ್ನು ಕ್ಲೋಸ್ ಮಾಡಿಬಿಡಬಹುದು. ಹೀಗಾದಾಗ ಮತ್ತೆ ಆ ಖಾತೆಯನ್ನು ಬಳಸಲು ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ಕಾಲಕಾಲಕ್ಕೆ ಸಣ್ಣ ವಹಿವಾಟುಗಳನ್ನು ಮಾಡಬೇಕಾಗುತ್ತದೆ.
ಬ್ಯಾಂಕಿಂಗ್ ಸೇವೆ :
ಗ್ರಾಹಕರನ್ನು ತಮ್ಮ ಬ್ಯಾಂಕ್ಗೆ ಕರೆತರಲು ಹಲವು ಬ್ಯಾಂಕ್ಗಳು ಸಾಕಷ್ಟು ಉಚಿತ ಯೋಜನೆಗಳನ್ನು ನೀಡುತ್ತಿವೆ.ಇವುಗಳಲ್ಲಿ ಕೆಲವು ಸೇವೆಗಳು ಉಚಿತವಾಗಿದ್ದರೆ, ಕೆಲವು ಸೇವೆಗಳು ಹೆಚ್ಚುವರಿ ಶುಲ್ಕಗಳನ್ನು ಹೊಂದಿರಬಹುದು. ಗ್ರಾಹಕರಿಗೆ ಅವುಗಳ ಬಗ್ಗೆ ತಿಳಿದಿರುವುದಿಲ್ಲ. ಇವುಗಳು ಮೊದಲಿಗೆ ಸಣ್ಣ ಪ್ರಮಾಣದಲ್ಲಿರಬಹುದು,ಆದರೆ ನಂತರ ದೊಡ್ಡ ತಲೆನೋವಾಗಿ ಬದಲಾಗಬಹುದು. ಆದ್ದರಿಂದ ಇದು ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಯಾಗಿದ್ದರೂ ಸಹ ಅವರು ಕೆಲವು ಸೇವಾ ಶುಲ್ಕಗಳನ್ನು ಹೊಂದಿರಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1