ನೀವು ಎಳನೀರು ಪ್ರಿಯರೇ! ಎಳನೀರು ಸೇವನೆಯ ಈ 10 ಅನಾನುಕೂಲಗಳ ಬಗ್ಗೆಯೂ ತಿಳಿಯಿರಿ

Disadvantages Of Tender Coconut:  ಸಾಮಾನ್ಯವಾಗಿ ಎಳನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಸಹ ಎಳನೀರನ್ನು ಕುಡಿಯಬಾರದು ಎಂದು ನಿಮಗೆ ತಿಳಿದಿದೆಯೇ? 

Disadvantages Of Tender Coconut: ಎಳನೀರು ಉತ್ತಮ ಶಕ್ತಿ ವರ್ಧಕ. ಹಾಗಾಗಿಯೇ, ಅನಾರೋಗ್ಯ ಸಮಯದಲ್ಲಿ ಎಳನೀರು ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ, ನಾಣ್ಯಕ್ಕೆ ಎರಡು ಮುಖಗಳಿರುವಂತೆ ಎಳನೀರಿನಲ್ಲಿ ಒಳ್ಳೆಯದ ಅಂಶಗಳ ಜೊತೆಗೆ ಕೆಲವು ಕೆಟ್ಟ ಅಂಶಗಳು ಇವೇ. ಉತ್ತಮ ಆರೋಗ್ಯಕ್ಕೆ ಎಳನೀರು ಒಳ್ಳೆಯದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಎಳೆನೀರು ಸೇವನೆಯಿಂದ ಸಮಸ್ಯೆ ಉಲ್ಬಣಿಸಬಹುದು ಎಂದು ಹೇಳಲಾಗುತ್ತದೆ. 

ಹೌದು, ಆರೋಗ್ಯ ತಜ್ಞರ ಪ್ರಕಾರ, ಎಳನೀರಿನಿಂದ ಅನುಕೂಲತೆಗಳ ಜೊತೆಗೆ ಅನಾನುಕೂಲತೆಯೂ ಇದೆ. ಹಾಗಿದ್ದರೆ, ಎಳನೀರಿನಿಂದ ಉಂಟಾಗುವ 10 ಅನಾನುಕೂಲಗಳು ಯಾವುವು. ಯಾವ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಎಳನೀರು ಒಳ್ಳೆಯದಲ್ಲ ಎಂದು ತಿಳಿಯೋಣ… 

ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಎಳನೀರು ಕುಡಿಯಲೇಬಾರದು: 
* ಅತಿಸಾರ: 

 ಎಳನೀರು  ಜೀರ್ಣಾಂಗ ವ್ಯವಸ್ಥೆಯ ಮೇಲೆ ವಿರೇಚಕ ಪರಿಣಾಮವನ್ನು ಉಂಟು ಮಾಡಬಹುದು. ಹಾಗಾಗಿ, ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಎಳನೀರು ಸೇವನೆಯನ್ನು ತಪ್ಪಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. 

* ವ್ಯಾಯಾಮದ ಬಳಿಕ ಎಳನೀರು ಕುಡಿಯಬೇಡಿ: 
ನಮ್ಮಲ್ಲಿ ಕೆಲವರು ವಾಕಿಂಗ್, ವ್ಯಾಯಾಮದ ಬಳಿಕ ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ. ಆದರೆ, ತಾಲೀಮು ಮುಗಿದ ನಂತರ ಎಳನೀರಿನ ಬದಲಿಗೆ ಸರಳವಾದ ಪಾನೀಯ ಉತ್ತಮವಾಗಿದೆ. 

* ಅಲರ್ಜಿ: 
ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಲರ್ಜಿ ಸಮಸ್ಯೆ ಇರುತ್ತದೆ. ಮರದ ಕಾಯಿ ಅಲರ್ಜಿ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಎಳನೀರನ್ನು ಕುಡಿಯಬಾರದು. 

* ಮೂತ್ರವರ್ಧಕ: 
ಎಳನೀರಿನ ಮೂತ್ರವರ್ಧಕವಾಗಿದೆ. ಹಾಗಾಗಿ, ಇದರ ಅತಿಯಾದ ಸೇವನೆಯು ನಿಮ್ಮ ಲಿವರ್ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. 

* ಎಲೆಕ್ಟ್ರೋಲೈಟ್: 
ಎಳನೀರಿನಲ್ಲಿರುವ ಪೊಟ್ಯಾಸಿಯಮ್ ಅಂಶವೂ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ, ಅತಿಯಾಗಿ ಎಳನೀರಿನ ಸೇವನೆಯನ್ನು ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ. 

* ಹೈ ಶುಗರ್: 
ಮಧುಮೇಹಿಗಳಿಗೆ ಎಳನೀರು ಒಳ್ಳೆಯದಲ್ಲ. ಅದರಲ್ಲೂ ನೀವು ಹೈ ಶುಗರ್ ಸಮಸ್ಯೆ ಹೊಂದಿದ್ದರೆ ಯಾವುದೇ ಕಾರಣಕ್ಕೂ ಎಳನೀರನ್ನು ಸೇವಿಸಲೇಬಾರದು. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. 

* ಲೋ ಬಿಪಿ: 
ಇನ್ನೂ ಲೋ ಬಿಪಿ ಸಮಸ್ಯೆ ಇರುವವರು ಸಹ ಎಳನೀರನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ವಾಸ್ತವವಾಗಿ ಎಳನೀರಿನ ಸೇವನೆಯಿಂದ ರಕ್ತದೊತ್ತಡ ಕಡಿಮೆ ಆಗುವುದರಿಂದ ಲೋ ಬಿಪಿ ಇರುವವರು ಇದರಿಂದ ದೂರ ಉಳಿಯಿರಿ. 

* ಮೂತ್ರಪಿಂಡದ ಕಾಯಿಲೆ : 
ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಎಳನೀರು ಉತ್ತಮವಲ್ಲ ಎಂದು ಹೇಳಲಾಗುತ್ತದೆ. 

* ಪಾರ್ಶ್ವವಾಯು: 
ಎಳನೀರನ್ನು ಅತಿಯಾಗಿ ಸೇವಿಸುವುದರಿಂದ ವಯಸ್ಸಾದ ರೋಗಿಯಲ್ಲಿ ತೀವ್ರವಾದ ಮಂದವಾದ ಪಾರ್ಶ್ವವಾಯು ಉಂಟಾಗುತ್ತದೆ ಎಂದು ವರದಿಯೊಂದರಿಂದ ಬಹಿರಂಗಗೊಂಡಿದೆ. 

* ಮಾರಣಾಂತಿಕ 3-ನೈಟ್ರೊಪ್ರೊಪಿಯೊನಿಕ್:
ಎಳನೀರು ಆರ್ಥ್ರಿನಿಯಮ್ ಸ್ಯಾಕರಿಕೋಲಾ ಎಂಬ ಶಿಲೀಂಧ್ರದಿಂದ ಕಲುಷಿತವಾಗಬಹುದು. ಇದು ಕೆಲವೊಮ್ಮೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/health/top-10-disadvantages-of-coconut-water-157701

Leave a Reply

Your email address will not be published. Required fields are marked *