Good Sleep Habit: ಆರೋಗ್ಯವಂತರಾಗಿರಲು ಆಹಾರ-ಪಾನೀಯಗಳಂತೆ ಉತ್ತಮ ನಿದ್ರೆಯೂ ಬಹಳ ಮುಖ್ಯ. ಆದರೆ, ಎಷ್ಟೇ ಕೆಲಸ ಮಾಡಿದರೂ ದೈಹಿಕವಾಗಿ ಆಯಾಸಗೊಂಡಿದ್ದರೂ ಕೆಲವರಿಗೆ ಸರಿಯಾಗಿ ನಿದ್ರೆ ಬರುವುದೇ ಇಲ್ಲ. ಆದರೆ, ಭವಿಷ್ಯದಲ್ಲಿ ಇದು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಬಹುದು ಏನು ನಿಮಗೆ ತಿಳಿದಿದೆಯೇ?
- ನಮ್ಮ ಕೆಲವು ಅಭ್ಯಾಸಗಳು ನಮ್ಮ ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ
- ಈ ಅಭ್ಯಾಸಗಳು ಉತ್ತಮ ನಿದ್ರೆಯನ್ನು ಪಡೆಯಲು ಅಡಚಣೆ ಉಂಟು ಮಾಡಬಹುದು.
- ಹಾಗಾಗಿ, ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಕೆಲವು ಅಭ್ಯಾಸಗಳನ್ನು ಕಂಟ್ರೋಲ್ ಮಾಡುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

Good Sleep Habit: ಈ ಫಾಸ್ಟ್ ಜೀವನಶೈಲಿಯಲ್ಲಿ ನಿದ್ರಾಹೀನತೆ ಸಮಸ್ಯೆ ನಮ್ಮಲ್ಲಿ ಬಹುತೇಕ ಜನರನ್ನು ಬಾಧಿಸುತ್ತಿರುವ ಸಮಸ್ಯೆ. ಆದರೆ ಈ ನಿದ್ರಾಹೀನತೆ ಸಮಸ್ಯೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ. ನಿತ್ಯ ಸರಿಯಾಗಿ ನಿದ್ರೆ ಮಾಡದೇ ಇರುವುದು ಬೊಜ್ಜು, ಹೃದ್ರೋಗ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ.
ವಿಶ್ವ-ಪ್ರಸಿದ್ಧ ನಿದ್ರೆ ಮತ್ತು ಸಿರ್ಕಾಡಿಯನ್ ರಿದಮ್ ತಜ್ಞ ಪ್ರೊಫೆಸರ್ ರಸ್ಸೆಲ್ ಫೋಸ್ಟರ್ ಅವರ ಪ್ರಕಾರ, ನಿದ್ರಾಹೀನತೆ ಸಮಸ್ಯೆ ಹೊಂದಿರುವವರು ತಮ್ಮ ಅಭ್ಯಾಸಗಳನ್ನು ಅದರಲ್ಲೂ ಮಲಗುವ ಮುನ್ನ ಕೆಲವು ಅಭ್ಯಾಸಗಳನ್ನು ನಿಯಂತ್ರಿಸುವುದರಿಂದ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ನಮ್ಮ ಕೆಲವು ಅಭ್ಯಾಸಗಳು ನಮ್ಮ ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರಿಂದ ಉತ್ತಮ ನಿದ್ರೆಯನ್ನು ಪಡೆಯಲು ಅಡಚಣೆ ಉಂಟಾಗಬಹುದು. ಹಾಗಾಗಿ, ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಕೆಲವು ಅಭ್ಯಾಸಗಳನ್ನು ಕಂಟ್ರೋಲ್ ಮಾಡುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು ಎನ್ನಲಾಗುತ್ತದೆ.
ಮಲಗುವ ಮುನ್ನ ಈ ಆರು ತಪ್ಪುಗಳನ್ನು ಮಾಡಲೇಬಾರದು:
1. ಅತಿಯಾದ ಆಹಾರ ಸೇವನೆ:
ಕೆಲವರು ರಾತ್ರಿ ವೇಳೆ ಅತಿಯಾಗಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದರಲ್ಲೂ ರಾತ್ರಿ ಊಟ ಮಾಡಿ ತಕ್ಷಣ ಮಲಗುವವರು ಇದ್ದಾರೆ. ಆದರೆ, ಇದು ನಿಮ್ಮ ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದನ್ನು ತಪ್ಪಿಸಲು ರಾತ್ರಿ ಭೋಜನದಲ್ಲಿ ಲಘು ಆಹಾರ ಸೇವಿಸುವುದನ್ನು ಪರಿಗಣಿಸಿ ಮತ್ತು ಮಲಗುವ ಕನಿಷ್ಠ 2 ಗಂಟೆಗಳ ಮೊದಲು ರಾತ್ರಿ ಭೋಜನ ಪೂರ್ಣಗೊಳಿಸಿ.
2. ಪ್ರಖರ ಬೆಳಕು:
ಉತ್ತಮ ನಿದ್ರೆ ಪಡೆಯಲು ಬೆಳಕು ಅಡ್ಡಿಪಡಿಸುತ್ತದೆ. ಅದರಲ್ಲೂ ಸದಾ ಮೊಬೈಲ್, ಇಲ್ಲವೇ ಟಿವಿ ನೋಡುವುದರಿಂದಲೂ ನಿಮ್ಮ ನಿದ್ರೆಗೆ ತೊಂದರೆಯಾಗಬಹುದು. ಉತ್ತಮ ನಿದ್ರೆಯನ್ನು ಪಡೆಯಲು ನೀವು ಮಲಗುವ ಒಂದೆರಡು ಗಂಟೆಗಳ ಮೊದಲು ಮೊಬೈಲ್, ಟಿವಿ ನೋಡುವುದನ್ನು ತಪ್ಪಿಸಿ. ಸಾಧ್ಯವಾದಷ್ಟು ನೀವು ಮಲಗುವ ಕೋಣೆಯಲ್ಲಿ ಮಂದ ಬೆಳಕನ್ನು ಬಳಸಿ.
3. ರಾತ್ರಿ ವ್ಯಾಯಾಮ/ಸಣ್ಣ ವಾಕ್:
ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು. ರಾತ್ರಿ ಮಲಗುವ ಮೊದಲು ವ್ಯಾಯಾಮವನ್ನು ರೂಢಿಸಿಕೊಳ್ಳಿ. ಒಂದೊಮ್ಮೆ ನಿಮಗೆ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಭೋಜನದ ಬಳಿಕ ಒಂದು ಸಣ್ಣ ವಾಕ್ ಆದರೂ ಮಾಡಿ. ಉತ್ತಮ ನಿದ್ರೆ ಹೊಂದಲು ಇದು ನಿಮಗೆ ಸಹಕಾರಿ ಎಂದು ಸಾಬೀತುಪಡಿಸಬಹುದು.
4. ಫೋನ್ ಬಳಕೆ ತಪ್ಪಿಸಿ:
ನೀವು ಮಲಗುವ ಮುನ್ನ ಫೋನ್ ಬಳಸುವುದರಿಂದ ಫೋನಿನ ಪ್ರಖರವಾದ ಬೆಳಕು ನಿಮ್ಮ ನಿದ್ರೆಗೆ ಅಡ್ಡಿಪಡಿಸಬಹುದು. ಇದನ್ನು ತಪ್ಪಿಸಲು ಮಲಗುವ ಕೋಣೆಯಿಂದ ಫೋನ್‌ಗಳನ್ನು ದೂರವಿಡಿ. ಇದರ ಬದಲಿಗೆ ಮಲಗುವ ಮೊದಲು ಪುಸ್ತಕವನ್ನು ಓದುವುದು ಅಥವಾ ಧ್ಯಾನ ಮಾಡುವುದು ಮುಂತಾದ ಶಾಂತ ಚಟುವಟಿಕೆಗಳನ್ನು ರೂಢಿಸಿಕೊಳ್ಳಿ.
5. ಸಂಜೆ ಕಾಫಿಗೆ ಹೇಳಿ ಗುಡ್ ಬೈ:
ಕೆಫೀನ್‌ನ ಪರಿಣಾಮವು ಗಂಟೆಗಳವರೆಗೆ ಇರುತ್ತದೆ, ಆದ್ದರಿಂದ ಸಂಜೆ ಕಾಫಿ ಅಥವಾ ಚಹಾವನ್ನು ಕುಡಿಯುವುದು ಕೂಡ ನಿದ್ರಾಹೀನತೆ ಸಮಸ್ಯೆಗೆ ಕಾರಣವಾಗಿರಬಹುದು. ಇದನ್ನು ತಪ್ಪಿಸಲು ಸಂಜೆ ವೇಳೆ ನಿಮ್ಮ ಕಾಫಿ/ಚಹಾ ಸೇವನೆಯನ್ನು ತಪ್ಪಿಸಿದರೆ ಒಳಿತು ಎಂದು ಹೇಳಲಾಗುತ್ತದೆ.
6. ಆಲ್ಕೋಹಾಲ್‌ನಿಂದ ದೂರವಿರಿ:
ಆಲ್ಕೋಹಾಲ್ ಸೇವನೆಯೂ ಸಹ ನಿದ್ರಾಹೀನತೆಯನ್ನು ಉಂಟುಮಾಡಬಹುದು. ಇಲ್ಲವೇ ನಿತ್ಯ ಆಲ್ಕೋಹಾಲ್ ಸೇವಿಸುವುದರಿಂದ ಇದು ನಿಮ್ಮನ್ನು ಆಳವಾದ ನಿದ್ರೆಗೆ ಹೋಗದಂತೆ ತಡೆಯುತ್ತದೆ. ಇದನ್ನು ತಪ್ಪಿಸಲು, ಉತ್ತಮ ನಿದ್ರೆಯನ್ನು ಪಡೆಯಲು ಆಲ್ಕೋಹಾಲ್‌ನಿಂದ ದೂರವಿರುವುದನ್ನು ಪರಿಗಣಿಸಿ.
ಗಮನಿಸಿ: ಈ ಸಲಹೆಗಳನ್ನು ಅನುಸರಿಸಿಯೂ ನಿಮಗೆ ನಿದ್ರಾಹೀನತೆ ಸಮಸ್ಯೆಯಿಂದ ಪರಿಹಾರ ದೊರೆಯದಿದ್ದರೆ ತಡಮಾಡದೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1