ಹಿಂಗೆ ಬೈಕ್ ಓಡಿಸಿದರೆ ಮುಗೀತು ಕಥೆ: ಹಂಚಿನ ಮನೆ ಮೇಲೆ ಗಾಡಿ ಎಗರಿಸಿದ ಹುಡುಗಿಯರು!

ಬೈಕ್ ಓಡಿಸೋದು ಎಷ್ಟೋ ಜನರ ಕನಸು, ಹಾಗೇ ತಮ್ಮ ಕನಸಿನ ಬೈಕ್‌ಗಳನ್ನ ತಗೊಂಡು ರಸ್ತೆಯಲ್ಲಿ ಒಂದು ಪೋಸ್ ಕೊಡಬೇಕು ಗುರೂ ಅಂತಾನೂ ಯುವಕರು ಕನಸು ಕಟ್ಟಿಕೊಳ್ತಾರೆ. ಆದ್ರೆ ಇಲ್ಲಿ ಇಬ್ಬರು ಹುಡುಗಿಯರು ತಮ್ಮ ಕನಸಿನ ಬೈಕ್ ಅನ್ನೇ ಮನೆಯ ಮೇಲೆ ಎಗರಿಸಿ ಕೂರಿಸಿದ್ದಾರೆ.

ತಾವು ಸಂಕಷ್ಟಕ್ಕೆ ಸಿಲುಕುವುದಲ್ಲದೆ, ರಸ್ತೆ ಪಕ್ಕದಲ್ಲಿ ಮನೆ ಮಾಡಿದ್ದವರಿಗು ಜೀವ ಬಾಯಿಗೆ ಬರುವಂತೆ ಮಾಡಿದ್ದಾರೆ. ಹಾಗಾದ್ರೆ ಈ ಇಬ್ಬರು ಹುಡುಗಿಯರ ಬೈಕ್ ಹಿಂಗೆ ಆಕ್ಸಿಡೆಂಟ್ ಆಗಿದ್ದೇಕೆ? ವಿಡಿಯೋ ನೋಡಲು ಮುಂದೆ ಓದಿ.ಹುಡುಗಿಯರು ಬೈಕ್ ಓಡಿಸುವ ಬಗ್ಗೆ ಹುಡುಗರು ಜೋಕ್ ಮಾಡೋದು ಮಾಮೂಲಿಯೇ ಸರಿ. ಅದ್ರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರು ಬೈಕ್ ಓಡಿಸುವ ವಿಚಾರ ದೊಡ್ಡ ಚರ್ಚೆಗೂ ವೇದಿಕೆ ಒದಗಿಸುತ್ತದೆ.

ಹೀಗಿದ್ದಾಗ ಇಲ್ಲಿಬ್ಬರು ಹುಡುಗಿಯರು ಇಂತಹ ಟ್ರೋಲ್ ಮಾಡುವವರಿಗೆ ಆಹಾರ ಆಗಿದ್ದಾರೆ. ರಸ್ತೆಯಲ್ಲಿ ಸುಮ್ಮನೆ ಹೋಗುವುದು ಬಿಟ್ಟು, ರಸ್ತೆ ಪಕ್ಕದಲ್ಲಿ ಇದ್ದ ಮನೆಯ ಮಹಡಿ ಮೇಲೆ ಬೈಕ್ ಎಗರಿಸಿದ್ದಾರೆ! ಅರೆರೆ ಏನಾಯ್ತಪ್ಪಾ ಅವರಿಗೆ ಅಂದ್ರಾ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಹಾಗೇ ಆ ಹುಡುಗಿಯರ ಬೈಕ್ ಮನೆ ಮಹಡಿ ಹತ್ತಿರುವ ವಿಡಿಯೋ ಕೂಡ ನೋಡೋಣ. ಮನೆ ಮೇಲೆ ಕೂತಿದೆ ಬೈಕ್!ಅಷ್ಟಕ್ಕೂ ಇದು ಆಧುನಿಕ ಸಮಾಜ, ಇಲ್ಲಿ ಮಹಿಳೆ ಕೂಡ ಪುರಷನಿಗೆ ಸಮಾನವಾಗಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಕೆಲವು ಹುಡುಗಿಯರ ಕೈಗೆ ಗಾಡಿ ಸಿಕ್ಕ ನಂತರ, ಅವರು ಮಾಡಿದ್ದೇ ರೂಲ್ಸ್ ಎನ್ನುವಂತೆ ಆಗುತ್ತೆ. ಇದೇ ರೀತಿ ಇಲ್ಲಿ ಇಬ್ಬರು ಹುಡುಗಿಯರು, ಮನಸ್ಸಿಗೆ ಬಂದಂತೆ ರಸ್ತೆಯಲ್ಲಿ ಗಾಡಿ ಓಡಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

ವೇಗವಾಗಿ ಸ್ಕೂಟರ್ ಓಡಿಸಿಕೊಂಡು ಬಂದ ಇಬ್ಬರು ಯುವತಿಯರು, ತಮ್ಮ ಗಾಡಿ ಬ್ಯಾಲೆನ್ಸ್ ತಪ್ಪಿ ಸೀದಾ ಸೀದಾ ಮನೆ ಒಂದರ ಛಾವಣೆ ಅಂದ್ರೆ ಹಂಚಿನ ಮನೆಯ ಮೇಲ್ಭಾಗದ ಮೇಲೆ ಬಿದ್ದಿದ್ದಾರೆ. ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಹಾಗಾದ್ರೆ ಈ ಘಟನೆಗೆ ಕಾರಣ ಏನು? ಆ ವಿಡಿಯೋ ನೀವು ನೋಡಿದ್ರಾ?

ಸಂಪೂರ್ಣ ಮಾಹಿತಿಗೆ ಮುಂದೆ ಓದಿ.ನಮ್ಮ ಜೀವ ಉಳಿಸಿರಪ್ಪಾ ಪ್ಲೀಸ್…ಮೊದಲೇ ಹೇಳಿದಂತೆ ಈ ಘಟನೆ ನಡೆದಿರುವುದು ಭಾರತದ ನೆರೆಯ ರಾಷ್ಟ್ರ ಇಂಡೋನೇಷ್ಯಾ ದೇಶದಲ್ಲಿ. ಅಷ್ಟಕ್ಕೂ ರಸ್ತೆ ಮೇಲೆ ಇಬ್ಬರು ಹುಡುಗಿಯರು ವೇಗವಾಗಿ ಹೋಗ್ತಿದ್ದಾಗ, ಅವರ ಬೈಕ್ ಬ್ರೇಕ್​ ಫೇಲ್ಯೂರ್​ ಆಗಿದೆ. ಅದರ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಸೀದಾ ಹೋಗಿ ಮನೆ ಛಾವಣಿಗೆ ಎಗರಿ ಕೂತಿದೆ. ಆಗ ಇಬ್ಬರೂ ಯುವತಿಯರು ತಮ್ಮ ಬೈಕ್ ಮೇಲೆ ಕೂತು ರಸ್ತೆಯಲ್ಲಿ ಹೋಗುತ್ತಿದ್ದ ಜನರನ್ನು ಕೂಗಿದ್ದಾರೆ.

ಇವರು ಹೀಗೆ ಬೈಕ್ ಎಗರಿಸಿದ್ದ ಕಾರಣ, ಮನೆಯ ಹಂಚು ಕೂಡ ಪೀಸ್ ಪೀಸ್ ಆಗಿತ್ತು. ಕೊನೆಗೆ ಸ್ಥಳೀಯರು ಸಹಾಯ ಮಾಡಿದ್ದು ಯುವತಿಯರು ಜೀವ ಉಳಿಸಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ. ಒಟ್ನಲ್ಲಿ ಈ ಇಬ್ಬರೂ ಯುವತಿಯರ ಸಾಧನೆ ಕಂಡು ಇದೀಗ ಸೋಷಿಯಲ್ ಮೀಡಿಯಾದ ಮಂದಿ ಮುಸಿ ಮುಸಿ ನಗುತ್ತಿದ್ದಾರೆ.

ಹಾಗೆಯೇ ಇದರ ಜೊತೆಗೆ ಇವರಿಗೆ ಡ್ರೈವಿಂಗ್ ಲೈಸೆನ್ಸ್​ ಕೊಟ್ಟಿದ್ದು ಯಾರು ಗುರೂ? ಅಂತಾ ಪ್ರಶ್ನೆ ಕೂಡ ಮಾಡುತ್ತಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಲ್ಲೂ ಫುಲ್ ವೈರಲ್ ಆಗುತ್ತಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಯಾರು ಗುಡ್ ಡ್ರೈವರ್ಸ್? ಹುಡುಗಿಯರಾ ಅಥವಾ ಹುಡುಗರಾ? ಎಂಬ ಬಗ್ಗೆ ಕೂಡ ಬಿಸಿ ಬಿಸಿ ಚರ್ಚೆಗೆ ಈ ವಿಡಿಯೋ ಕಾರಣವಾಗುತ್ತಿದೆ.

Source:https://m.dailyhunt.in/news/india/kannada/oneindiakannada-epaper-thatskannada/hinge+baik+odisidare+mugitu+kathe+hanchina+mane+mele+gaadi+egarisidha+hudugiyaru+-newsid-n591216120?listname=topicsList&topic=for%20you&index=25&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *