JAGGERY HEALTH BENEFITS : ಬೆಲ್ಲದ ಚಿಕ್ಕದೊಂದು ಪೀಸ್ನಿಂದ ಬಿಪಿ, ರಕ್ತಹೀನತೆ, ಅಜೀರ್ಣ ಮತ್ತು ಮುಟ್ಟಿನ ಸಮಸ್ಯೆಗಳಿಗೆ ದೂರವಾಗಿಸಲು ಒಳ್ಳೆಯದು. ಇದರಲ್ಲಿ ಜೀವಸತ್ವಗಳು ಹಾಗೂ ಅನೇಕ ಖನಿಜಗಳಿಂದ ಸಮೃದ್ಧವಾಗಿವೆ.

Jaggery Health Benefits: ನೀವು ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದರೆ, ನೀವು ಬೆಲ್ಲವನ್ನು ತಿನ್ನಲೇಬೇಕು. ನೀವು ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಅದಕ್ಕೆ ಬೆಲ್ಲವೇ ಉತ್ತಮ ಪರಿಹಾರವಾಗಿದೆ. ನೀವು ಮುಟ್ಟಿನ ಸಮಯದಲ್ಲಿ ಅಶಕ್ತಿಯಿಂದ ಬಳಲುತ್ತಿದ್ದೀರಾ? ಇವೆಲ್ಲಕ್ಕೂ ಬೆಲ್ಲ ತಿನ್ನುವುದರಿಂದ ಕೆಲವು ಅನಾರೋಗ್ಯದ ತೊಂದರೆಗಳು ದೂರವಾಗುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಬೆಲ್ಲವನ್ನು ನೇರವಾಗಿ ತೆಗೆದುಕೊಳ್ಳುವ ಬದಲು ಕೆಲವು ಪದಾರ್ಥಗಳೊಂದಿಗೆ ಬೆರೆಸಿದರೆ, ಅದರ ಪ್ರಯೋಜನಕಾರಿ ಗುಣಗಳು ಮತ್ತಷ್ಟು ಹೆಚ್ಚಾಗುತ್ತವೆ. ಪರಿಣಾಮವಾಗಿ ಬೆಲ್ಲವು ಈ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಅಜೀರ್ಣದಿಂದ ಹಿಡಿದು ಹಸಿವು ನಿಯಂತ್ರಿಸುವುದು, ಮುಟ್ಟಿನ ಸಮಸ್ಯೆಗಳನ್ನು ಕಡಿಮೆ ಮಾಡುವುದರಿಂದ ಹಿಡಿದು ಹಾಲು ಉತ್ಪಾದಿಸುವುದು ಸೇರಿದಂತೆ ಎಲ್ಲವೂ ಬೆಲ್ಲದೊಂದಿಗೆ ಸಂಬಂಧಿಸಿದೆ. ಬೆಲ್ಲವನ್ನು ಇತರ ಪದಾರ್ಥಗಳೊಂದಿಗೆ ಸೇರಿಸಿದರೆ ಯಾವ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ತಿಳಿಯೋಣ.

ಬೆಲ್ಲದ ಆರೋಗ್ಯದ ಪ್ರಯೋಜನಗಳು: ಬೆಲ್ಲದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಹಾಗೂ ಪೊಟ್ಯಾಸಿಯಮ್‌ನಂತಹ ಅನೇಕ ಖನಿಜಗಳಿವೆ. ಬಿ – ಕಾಂಪ್ಲೆಕ್ಸ್, ಸಿ, ಡಿ2 ಮತ್ತು ಇ ನಂತಹ ಜೀವಸತ್ವಗಳಿಂದ ತುಂಬಿರುವ ಬೆಲ್ಲವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ರಕ್ತದೊತ್ತಡ ನಿಯಂತ್ರಿಸಲು, ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸಲು, ಮುಟ್ಟಿನ ಸೆಳೆತ ನಿವಾರಿಸಲು ಮತ್ತು ರಕ್ತಹೀನತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

2017ರಲ್ಲಿ ಜರ್ನಲ್ ಆಫ್ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ (Journal of Food Science and Technology) ಪ್ರಕಟವಾದ ‘ಬೆಲ್ಲದ ಪೌಷ್ಟಿಕಾಂಶ ಹಾಗೂ ಫೈಟೊಕೆಮಿಕಲ್ ವಿಶ್ಲೇಷಣೆ ಹಾಗೂ ಅದರ ಸಂಭಾವ್ಯ ಆರೋಗ್ಯ ಪ್ರಯೋಜನಗಳು’ (Nutritional and Phytochemical Analysis of Jaggery and Its Potential Health Benefits) ಎಂಬ ಅಧ್ಯಯನದಲ್ಲಿ ಈ ವಿಷಯವು ಬಹಿರಂಗವಾಗಿದೆ.

ಬೆಲ್ಲ ಹೀಗೆ ಸೇವಿಸೋದು ಉತ್ತಮ?
ಬೆಲ್ಲ + ತುಪ್ಪ: ಬೆಲ್ಲ + ತುಪ್ಪ ಒಟ್ಟಿಗೆ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಬೆಲ್ಲ + ಕೊತ್ತಂಬರಿ ಸೊಪ್ಪು: ಇದನ್ನು ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ ಹಾಗೂ ನೋವು ನಿವಾರಣೆಯಾಗುತ್ತದೆ. ಜೊತೆಗೆ ಇತರೆ ಮುಟ್ಟುನ ಸಮಸ್ಯೆಗಳು ಪರಿಹಾರ ಆಗುತ್ತವೆ.
ಬೆಲ್ಲ + ಸೋಂಪು: ಇದು ಬಾಯಿಯ ದುರ್ವಾಸನೆ ನಿವಾರಿಸುತ್ತದೆ. ಇದಲ್ಲದೇ, ಇದು ಹಲ್ಲುಗಳ ಮೇಲೆ ಪ್ಲೇಕ್ ಸಂಗ್ರಹವಾಗುವುದನ್ನು ತಡೆಯಬಹುದು.
ಬೆಲ್ಲ + ಮೆಂತ್ಯ: ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ನಿಮ್ಮ ಕೂದಲಿನ ಆರೋಗ್ಯ ದ್ವಿಗುಣಗೊಳ್ಳುತ್ತದೆ. ನಿಮ್ಮ ಕೂದಲು ಬಲವಾಗುವುದು ಮಾತ್ರವಲ್ಲದೇ, ಬೂದು ಕೂದಲನ್ನು ತಡೆಯುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಬೆಲ್ಲ + ಅಂಟು: ಈ ಆಹಾರ ಸಂಯೋಜನೆಯು ಮೂಳೆಗಳನ್ನು ಬಲಪಡಿಸುವಲ್ಲಿ ಬಹಳ ಪರಿಣಾಮಕಾರಿ. ಹಾಲುಣಿಸುವ ತಾಯಂದಿರು ಇದನ್ನು ಸೇವಿಸಿದರೆ ಅವರಿಗೆ ಹೇರಳವಾದ ಹಾಲು ಉತ್ಪತ್ತಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಬೆಲ್ಲ + ಆಲಿವ್ ಬೀಜಗಳು (ಹಮೀಮ್ ಬೀಜ): ಈ ಆಹಾರ ಸಂಯೋಜನೆಯು ನಾವು ಸೇವಿಸುವ ಆಹಾರದಲ್ಲಿರುವ ಫೋಲಿಕ್ ಆಮ್ಲ ಮತ್ತು ಕಬ್ಬಿಣವನ್ನು ದೇಹವು ತ್ವರಿತವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚರ್ಮದ ಮೇಲಿನ ವರ್ಣದ್ರವ್ಯ ಕಡಿಮೆ ಮಾಡುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಜ್ಞರು ವಿವರಿಸುತ್ತಾರೆ.

ಬೆಲ್ಲ + ಎಳ್ಳು: ಈ ಎರಡನ್ನು ಒಟ್ಟಿಗೆ ತಿನ್ನುವುದರಿಂದ ಕೆಮ್ಮು, ಶೀತ ಮತ್ತು ಜ್ವರವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ಬೆಲ್ಲ + ಒಣದ್ರಾಕ್ಷಿ: ಈ ಆಹಾರ ಸಂಯೋಜನೆಯು ದೇಹದಲ್ಲಿ ತ್ರಾಣವನ್ನು ಹೆಚ್ಚಿಸಲು, ಹಸಿವನ್ನು ನಿಯಂತ್ರಿಸಲು ಹಾಗೂ ಆಹಾರದ ಹಂಬಲವನ್ನು ಕಡಿಮೆ ಮಾಡಲು ಅದ್ಭುತಗಳನ್ನು ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಬೆಲ್ಲ + ಅರಿಶಿನ: ಈ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಬೆಲ್ಲ + ಶುಂಠಿ ಪುಡಿ: ಇವುಗಳನ್ನು ಒಟ್ಟಿಗೆ ತಿನ್ನುವುದರಿಂದ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಬಹುದು. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.