ವೈಟ್, ಬ್ರೌನ್ ಅಲ್ಲ.. ಈ ಅಕ್ಕಿಯನ್ನು ಸೇವಿಸಿದರೆ ಮಧುಮೇಹ ಮೂಲದಿಂದಲೇ ಗುಣವಾಗುತ್ತೆ!

Best rice for diabetes patient: ಮಧುಮೇಹಿಗಳಿಗೆ ಅನ್ನ ಸೇವನೆ ಉತ್ತಮವಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಮಧುಮೇಹಿಗಳಿಗೂ ಅನ್ನ ಸೇವಿಸಬೇಕೆಂದು ಆಸೆ ಇರುತ್ತದೆ. ಹೀಗಿರುವಾಗಿ ನಾವಿಂದು ವಿಶೇಷ ಅಕ್ಕಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಒಂದು ಅಕ್ಕಿಯನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

Best rice for diabetes patient: ಭಾರತದ ಜನರ ದೈನಂದಿನ ಆಹಾರದಲ್ಲಿ ಅಕ್ಕಿ ಪ್ರಮುಖ ಭಾಗವಾಗಿದೆ. ಅಕ್ಕಿಯಿಂದಲೇ ಬಿರಿಯಾನಿ, ಪುಲಾವ್, ಖಿಚಡಿ ಅಥವಾ ದಾಲ್-ರೈಸ್ ಇತ್ಯಾದಿಗಳನ್ನು ತಯಾರಿಸುತ್ತಾರೆ ಮತ್ತು ತಿನ್ನುತ್ತಾರೆ. ಆದರೆ ಮಧುಮೇಹ ರೋಗಿಗಳಿಗೆ ಅಕ್ಕಿ ತುಂಬಾ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಬಿಳಿ ಅಕ್ಕಿಯು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಕಾರ್ಬೋಹೈಡ್ರೇಟ್‌ ಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ, ಇದರ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಮಧುಮೇಹಿಗಳಿಗೆ ಅನ್ನ ಸೇವನೆ ಉತ್ತಮವಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಮಧುಮೇಹಿಗಳಿಗೂ ಅನ್ನ ಸೇವಿಸಬೇಕೆಂದು ಆಸೆ ಇರುತ್ತದೆ. ಹೀಗಿರುವಾಗಿ ನಾವಿಂದು ವಿಶೇಷ ಅಕ್ಕಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಒಂದು ಅಕ್ಕಿಯನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಇತ್ತೀಚೆಗೆ, ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ ಅಧ್ಯಯನವನ್ನು ನಡೆಸಿತು. ಈ ಅಧ್ಯಯನದಲ್ಲಿ ಅಸ್ಸಾಂನಲ್ಲಿ ಬೆಳೆಯುವ ಜೋಹಾ ಅಕ್ಕಿಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ ಎಂದು ತಿಳಿದುಬಂದಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡುವ ಈ ಜೋಹಾ ಅಕ್ಕಿಯನ್ನು ಅಸ್ಸಾಂನ ಗಾರೋ ಬೆಟ್ಟಗಳಲ್ಲಿ ಬೆಳೆಯಲಾಗುತ್ತದೆ.

ಜೋಹಾ ಅಕ್ಕಿಯ ಪ್ರಯೋಜನಗಳು:

ಜೋಹಾ ಅಕ್ಕಿಯ ಸೇವನೆಯಿಂದ ಸಕ್ಕರೆ ಮಟ್ಟ ಮತ್ತು ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಚಳಿಗಾಲದಲ್ಲಿ ಅಸ್ಸಾಂನಲ್ಲಿ ಈ ಅಕ್ಕಿಯನ್ನು ಬೆಳೆಯುವ ಅನೇಕ ಜನರು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಅಧ್ಯಯನವು ಜೋಹಾ ಅಕ್ಕಿಯ ಪೌಷ್ಟಿಕಾಂಶದ ಗುಣಲಕ್ಷಣಗಳನ್ನು ಸಹ ವಿಶ್ಲೇಷಿಸಿದೆ. ಜೋಹಾ ಅಕ್ಕಿಯಲ್ಲಿ ಕಂಡುಬರುವ ಅಪರ್ಯಾಪ್ತ ಕೊಬ್ಬಿನಾಮ್ಲಗಳು ಅಂದರೆ ಒಮೆಗಾ-6 ಮತ್ತು ಒಮೆಗಾ-3  ಅನೇಕ ಶಾರೀರಿಕ ಪರಿಸ್ಥಿತಿಗಳನ್ನು ಗುಣಪಡಿಸುತ್ತದೆ. ಈ ಅಕ್ಕಿಯ ಹೊಟ್ಟುಗಳಿಂದ ಎಣ್ಣೆಯನ್ನು ಸಹ ತಯಾರಿಸಲಾಗುತ್ತದೆ.

ಜೋಹಾ ಅಕ್ಕಿ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿ:

ಜೋಹಾ ಅಕ್ಕಿ ಬಾಸ್ಮತಿ ಅಕ್ಕಿಗೆ ಸಮನಾಗಿರುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ಜಿಐ ಟ್ಯಾಗ್ ನೀಡಲಾಗಿದೆ. ಇದರ ಸುವಾಸನೆಯು ಬಾಸ್ಮತಿ ಅಕ್ಕಿಯಂತಲ್ಲ. ಇದು ತನ್ನ ವಿಶಿಷ್ಟ ರುಚಿ ಮತ್ತು ಪರಿಮಳಕ್ಕಾಗಿ ಭಾರತದಾದ್ಯಂತ ಪ್ರಸಿದ್ಧವಾಗಿದೆ. ಇದು ಸಸ್ಯಾಹಾರಿಗಳಿಗೆ ಸಸ್ಯ ಆಧಾರಿತ ಪ್ರೋಟೀನ್‌ ನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

Source : https://zeenews.india.com/kannada/health/assam-rice-best-rice-for-diabetes-patient-eat-this-type-of-rice-diabetes-will-be-cured-from-the-root-143086

Leave a Reply

Your email address will not be published. Required fields are marked *