ತತ್ಕಾಲ್ ಟ್ರೈನ್ ಟಿಕೆಟ್ ಬುಕಿಂಗ್‌ನಲ್ಲಿ ಈ ಟಿಪ್ಸ್ ಅನುಸರಿಸಿದರೆ ಕನ್ಫರ್ಮ್ ಟಿಕೆಟ್ ಸಿಗೋದು ಪಕ್ಕಾ!

Tatkal Ticket Booking Tips For Confirmed Train Ticket: ನೀವು ರೈಲಿನಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡುತ್ತಿದ್ದರೆ ಕೆಲವು ಸುಲಭ ಟಿಪ್ಸ್ ಅನುಸರಿಸಿದರೆ ದೃಢೀಕೃತ ಟಿಕೆಟ್ ಪಡೆಯಬಹುದು. 

ಭಾರತೀಯ ರೈಲ್ವೆ  ಸುಖಕರ, ಆನಂದದಾಯಕ ಪ್ರಯಾಣಕ್ಕೆ ಹೆಸರುವಾಸಿ ಆಗಿದೆ. ಆದರೆ, ಹಬ್ಬಗಳ ಋತುವಿನಲ್ಲಿ ದೂರದ ಊರುಗಳಿಗೆ ಪ್ರಯಾಣಿಸಲು ಕನ್ಫರ್ಮ್ ಟಿಕೆಟ್ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ. 

ಆಕಸ್ಮಿಕ ಅಥವಾ ತಕ್ಷಣದ ಪ್ರಯಾಣಕ್ಕಾಗಿ ರೈಲಿನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ ಅವಕಾಶವಿದೆ. ಆದರೂ, ಇದರಲ್ಲಿಯೂ ದೃಢೀಕೃತ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿರುವುದಿಲ್ಲ. 

ಆದಾಗ್ಯೂ, ನೀವು ತತ್ಕಾಲ್ ಟಿಕೆಟ್ ಬುಕಿಂಗ್ ವೇಳೆ ಕೆಲವು ಟಿಪ್ಸ್ ಅನುಸರಿಸಿದರೆ ಸುಲಭವಾಗಿ ಕನ್ಫರ್ಮ್ ರೈಲು ಟಿಕೆಟ್ ಪಡೆಯಬಹುದು. 

ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ:  ನೀವು ರೈಲು ಪ್ರಯಾಣಕ್ಕಾಗಿ ತತ್ಕಾಲ್ ಟಿಕೆಟ್ ಕಾಯ್ದಿರಿಸುವ ಮೊದಲು,  ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಬೇಕು. ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಹೆಚ್ಚು ದ ಸಮಯ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ನಿಮ್ಮ ಇಂಟರ್ನೆಟ್ ಸಂಪರ್ಕದಿಂದಾಗಿ ಅಡ್ಡಿಯಾದರೆ ಕನ್ಫರ್ಮ್ ಟಿಕೆಟ್ ಪಡೆಯುವುದು ಕಷ್ಟಕರವಾಗುತ್ತದೆ.

 ಲಾಗಿನ್ ಮಾಡಲು ಸರಿಯಾದ ಸಮಯ ಯಾವುದು? ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಸರಿಯಾದ ಸಮಯಕ್ಕೆ ಲಾಗಿನ್ ಆಗುವುದು ಅತ್ಯಗತ್ಯ. ಎಸಿ ಕೋಚ್‌ಗಳಿಗೆ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಮತ್ತು ಸ್ಲೀಪರ್ ಕೋಚ್‌ಗಳಿಗೆ ಬೆಳಿಗ್ಗೆ 11 ಗಂಟೆಗೆ ತತ್ಕಾಲ್ ಬುಕಿಂಗ್ ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬುಕಿಂಗ್ ಪ್ರಾರಂಭವಾಗುವ 2-3 ನಿಮಿಷಗಳ ಮೊದಲು ನೀವು ಲಾಗಿನ್ ಆಗಬೇಕು.

 ಯುಪಿಐ ಪಾವತಿ:  ನೀವು ರೈಲಿನ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯದಲ್ಲಿ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬದಲಿಗೆ ಯುಪಿಐ ಪಾವತಿ ಮಾಡುವುದರಿಂದ ಶೀಘ್ರದಲ್ಲೇ ಟಿಕೆಟ್ ಬುಕ್ ಆಗುತ್ತದೆ.  ಇದರಿಂದ ದೃಢೀಕೃತ ಟಿಕೆಟ್ ಪಡೆಯಬಹುದು. 

ಆಯ್ಕೆಗಳ ಅನ್ವೇಷಣೆ:    ನೀವು ಎರಡು ನಗರಗಳ ನಡುವೆ ಪ್ರಯಾಣಿಸಬೇಕಾದರೆ, ದೀರ್ಘ ಪ್ರಯಾಣದ ರೈಲುಗಳ ಬದಲಿಗೆ ಈ ನಿಲ್ದಾಣಗಳ ನಡುವಿನ ರೈಲುಗಳಲ್ಲಿ ಟಿಕೆಟ್ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಬುಕಿಂಗ್ ಮಾಡುವ ಮೊದಲು, ನೀವು ತತ್ಕಾಲ್ ಟಿಕೆಟ್‌ಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿರುವ ರೈಲುಗಳನ್ನು ಆಯ್ಕೆ ಮಾಡಬೇಕು. ಇದರಿಂದ ಖಂಡಿತವಾಗಿಯೂ ನೀವು ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವಾಗ ದೃಢೀಕೃತ ಟಿಕೆಟ್ ಪಡೆಯಬಹುದು. 

Source : https://zeenews.india.com/kannada/photo-gallery/follow-these-tips-while-booking-tatkal-ticket-to-get-confirmed-train-ticket-236354/%E0%B2%86%E0%B2%AF%E0%B3%8D%E0%B2%95%E0%B3%86%E0%B2%97%E0%B2%B3-%E0%B2%85%E0%B2%A8%E0%B3%8D%E0%B2%B5%E0%B3%87%E0%B2%B7%E0%B2%A3%E0%B3%86-236355

Leave a Reply

Your email address will not be published. Required fields are marked *