ಮಳೆಗಾಲದಲ್ಲಿ ಹೆಚ್ಚಾಗಿ ಕೂದಲು ಉದುರುತ್ತಿದೆಯೇ..? ಈ ಒಂದು ಜ್ಯೂಸ್‌ ನಿಮ್ಮ ಕೇಶವನ್ನು ಗಟ್ಟಿಮುಟ್ಟಾಗಿಸುತ್ತದೆ…

  • ವಿಶೇಷವಾಗಿ ಮಳೆಗಾಲದಲ್ಲಂತೂ ಕೂದಲು ಉದುರುವುದು ಸಾಮಾನ್ಯ.
  • ಆಮ್ಲಾ ಸೇವನೆಯ ಸಹಾಯದಿಂದ ನಿಮ್ಮ ಕೂದಲನ್ನು ಹೇಗೆ ಸ್ಟ್ರಾಂಗ್ ಮತ್ತು ಆರೋಗ್ಯಕರವಾಗಿ ಮಾಡಬಹುದು .
  • ಆಮ್ಲಾ ಕೂದಲನ್ನು ಬಲಪಡಿಸಿ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Amla shot for healthy hair: ಹಲವು ಕಾರಣಗಳಿಂದ ಕೂದಲು ಉದುರುತ್ತದೆ. ವಿಶೇಷವಾಗಿ ಮಳೆಗಾಲದಲ್ಲಂತೂ ಕೂದಲು ಉದುರುವುದು ಸಾಮಾನ್ಯ. ನೀವು ನಿಮ್ಮ ಕೂದಲಿಗೆ ಹೇರ್‌ ಕಲರ್‌ ಮಾಡಿಸಿದರೆ ಅಥವಾ ವಿವಿಧ ರೀತಿಯ ಸ್ಟೈಲಿಂಗ್ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕೂದಲು ಉದುರುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಯಮಿತವಾದ ಕೂದಲ ರಕ್ಷಣೆಯ ಜೊತೆಗೆ ನಿಮ್ಮ ಆಹಾರದಲ್ಲಿ ಆರೋಗ್ಯಕರ ಪೋಷಕಾಂಶಗಳನ್ನು ಸೇರಿಸುವುದು ಬಹಳ ಮುಖ್ಯ. ಆಮ್ಲಾ ಸೇವನೆಯ ಸಹಾಯದಿಂದ ನಿಮ್ಮ ಕೂದಲನ್ನು ಹೇಗೆ ಸ್ಟ್ರಾಂಗ್ ಮತ್ತು ಆರೋಗ್ಯಕರವಾಗಿ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಈ ಸ್ಟೋರಿ ಓದಿ…

ಆಮ್ಲಾವು ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಸಿ, ಕಬ್ಬಿಣ ಅಂಸಗಳು ಹೆಚ್ಚಾಗಿ ಕಂಡು ಬರುತ್ತದೆ. ಇದು ಕೂದಲನ್ನು ಬಲಪಡಿಸಿ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಪ್ರತಿದಿನ ಆಮ್ಲಾದಿಂದ ಜ್ಯೂಸ್‌ ಮಾಡಿ ಕುಡಿಯಿರಿ.

ಬೇಕಾಗುವ ಸಾಮಾಗ್ರಿಗಳು:
ಆಮ್ಲಾ 3-4
ಶುಂಠಿ 1 ಇಂಚ್‌
ಮೆಂತೆ 1 ಹಿಡಿ
ಬೆಲ್ಲ 1-2 ಸ್ಪೂನ್‌
ಜೀರಿಗೆ ಪುಡಿ 1/2 ಸ್ಪೂನ್‌
ನೀರು 1 ಲೋಟ

ತಯಾರಿಸುವ ವಿಧಾನ :
ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಬೀಜಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ.
ಶುಂಠಿಯನ್ನು ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಸ್ಟ್ರೈನರ್ ಸಹಾಯದಿಂದ, ಅದನ್ನು ಸಂಪೂರ್ಣವಾಗಿ ಫಿಲ್ಟರ್ ಮಾಡಿ ಮತ್ತು ರಸವನ್ನು ಹೊರತೆಗೆಯಿರಿ. ನಂತರ ಅದಕ್ಕೆ ಮೆಂತೆ, ಬೆಲ್ಲ, ಜೀರಿಗೆ ಪುಡಿ ನೀರು ಸೇರಿಸಿ ಕುಡಿಯಿರಿ.

ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

Source : https://zeenews.india.com/kannada/health/how-to-strengthen-your-hair-with-amla-during-monsoon-season-228895

Leave a Reply

Your email address will not be published. Required fields are marked *