Tech: ತಂತ್ರಜ್ಞಾನ ಹೆಚ್ಚಾದಂತೆಯೇ ಅದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಡಿಜಿಟಲ್ ಸಾಧನಕ್ಕೆ ಹೆಚ್ಚು ಅವಲಂಬಿತ ವಾಗುತ್ತಿರುವುದರಿಂದ ಸಣ್ಣ ವಯಸ್ಸಿನಲೇ ಮಕ್ಕಳ ಆರೋಗ್ಯ ಕೆಡುವುದರ ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಕನ್ನಡಕ ಧರಿಸುವಂತಾಗಿದೆ.

ತಂತ್ರಜ್ಞಾನ ಹೆಚ್ಚಾದಂತೆಯೇ ಅದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಚಂದ ಮಾಮನನ್ನು ತೋರಿಸಿ ಊಟ ಮಾಡಿಸುವ ಕಾಲದ ಬದಲಾಗಿ ಫೋನ್ ತೋರಿಸಿ ಊಟ ಮಾಡಿಸು ತಾಯಿಯಂದರ ಸಂಖ್ಯೆ ಹೆಚ್ಚು.. ಅದರ ಪರಿಣಾಮ ಮಕ್ಕಳು ಇತ್ತಿಚೇಗೆ ಡಿಜಿಟಲ್ ಸಾಧನಕ್ಕೆ ಅವಲಂಬಿತವಾಗುತ್ತಾರೆ. ಮನೆಯಿಂದ ಹೊರಗಡೆ ಬಂದು ಆಟ ಆಡುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.
ಡಿಜಿಟಲ್ ಸಾಧನಕ್ಕೆ ಹೆಚ್ಚು ಅವಲಂಬಿತವಾಗುತ್ತಿರುವುದರಿಂದ ಸಣ್ಣ ವಯಸ್ಸಿನಲೇ ಮಕ್ಕಳ ಆರೋಗ್ಯ ಕೆಡುವುದರ ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಕನ್ನಡಕ ಧರಿಸುವಂತಾಗಿದೆ. ಸಂಶೋಧನೆ ಪ್ರಕಾರ ಮಕ್ಕಳು ಕೋವಿಡ್ -19 ಬಂದ ಬಳಿಕ ಆನ್ ಲೈನ್ ಶಿಕ್ಷಣ ಮಕ್ಕಳ ಅವಲಂಬನೆ ಹೆಚ್ಚಾಗುತ್ತಿದ್ದು, ಮಕ್ಕಳು ಈಗ ಕಂಪ್ಯೂಟರ್, ಟ್ಯಾಬ್ಲೆಟ್, ಟಿವಿ ಮತ್ತು ಸ್ಮಾಟ್ ಫೋನ್ಗಳಂತಹ ಡಿಜಿಟಲ್ ಪರದೆಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ ಎಂದು ವರದಿ ತಿಳಿಸಿದೆ.
ಅತಿಯಾದ ಡಿಜಿಟಲ್ ಬಳಕೆಯ ಪರಿಣಾಮ
ಚಿಕ್ಕ ವಯಸ್ಸಿನಲ್ಲಿ ಮಾನಸಿಕ ಒತ್ತಡಗಳನ್ನು ಎದುರಿಸಬೇಕಾಗುತ್ತದೆ.
ಕಣ್ಣಿನ ಸಮಸ್ಯೆ ಬರಬಹುದು
ಪೋನ್ ಬಳಕೆ ಅಥವಾ ಡಿಜಿಟಲ್ ಸಾಧನವನ್ನು ಅತೀಯಾಗಿ ಬಳಸುವುದರಿಂದ ಬೇಗನೆ ಕನ್ನಡಕವನ್ನು ಧರಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ತಲೆ ನೋವು ಬರುತ್ತದೆ. ಮಸುಕಾದ ದೃಷ್ಟಿ ಹೊಂದುವ ಸಾಧ್ಯತೆ ಹೆಚ್ಚು.
ಡಿಜಿಟಲ್ ಮಾಧ್ಯಮ ತಪ್ಪಿಸಲು ಸಲಹೆಗಳು
*ಸಾಧ್ಯವಾದಷ್ಟು ಮಕ್ಕಳನ್ನು ಡಿಜಿಟಲ್ ಮಾಧ್ಯಮ ದಿಂದ ದೂರ ಇರಿಸಲು ಪ್ರಯತ್ನಿಸಿ
*ಪರಿಸರ, ಪ್ರಕೃತಿ ಜೊತೆ ಹೆಚ್ಚೆಚ್ಚು ಒಡನಾಟ ಕಲ್ಪಿಸಿಕೊಡಿ
*ಒಂದು ವೇಳೆ ಫೋನ್ ನಲ್ಲಿ ಆನ್ ಲೈನ್ ಶಿಕ್ಷಣ ಕಡ್ಡಾಯವಾಗಿದ್ದರೇ ಅಂಥಹ ಸಮಯದಲ್ಲಿ 20 ನಿಮಿಷ ಆರಾಮ ನೀಡಿ, ಮಕ್ಕಳ ಕಣ್ಣಿನ ಆರೋಗ್ಯದ ದೃಷ್ಠಿಯಿಂದ ಫೋನಿನ ಬ್ರೈಟ್ನೈಸ್ ಗಳ ಹೆಚ್ಚು ಇಡದೇ ಮಕ್ಕಳಿಗೆ ಎಷ್ಟು ಅಗತ್ಯವೋ ಅಷ್ಟಕ್ಕೆ ಸೀಮೀತವಾಗಿರಿಸಿ.
*ಆಗಾಗ ಮಕ್ಕಳ ಕಣ್ಣಿನ ಆರೋಗ್ಯ ಪರೀಕ್ಷಿಸಿ ಇದರಿಂದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ತಡೆಯಬಹುದು.