How To Boost Calcium Level: ಮೂಳೆಗಳು ಆರೋಗ್ಯವಾಗಿರಲು ದೇಹಕ್ಕೆ ಕ್ಯಾಲ್ಸಿಯಂ ತುಂಬಾ ಮುಖ್ಯ. ಹಾಲಿನಲ್ಲಿ ಮತ್ತು ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಆದರೆ, ಕೆಲವರು ಡೈರಿ ಉತ್ಪನ್ನಗಳನ್ನು ಇಷ್ಟಪಡುವುದಿಲ್ಲ.
ನಮ್ಮ ಮೂಳೆಗಳು ಗಟ್ಟಿಯಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯ. ದೈನಂದಿನ ಕ್ಯಾಲ್ಸಿಯಂ ಅಗತ್ಯವು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ. ಸಾಮಾನ್ಯವಾಗಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವರಿಗೆ ಡೈರಿ ಉತ್ಪನ್ನಗಳು ಇಷ್ಟವಾಗುವುದಿಲ್ಲ. ನೀವು ಅಂತಹವರಲ್ಲಿ ಒಬ್ಬರಾಗಿದ್ದರೆ ಡೈರಿ ಉತ್ಪನ್ನಗಳನ್ನು ಹೊರತುಪಡಿಸಿ ಕ್ಯಾಲ್ಸಿಯಂ-ಸಮೃದ್ಧವಾದ ಪರ್ಯಾಯ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಬಿಳಿ ಎಳ್ಳಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಫರಸ್ ಹೇರಳವಾಗಿ ಕಂಡು ಬರುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಇದನ್ನು ಬಳಸುವುದರಿಂದ ಮೂಳೆಗಳು ಬಲಿಷ್ಠವಾಗುತ್ತವೆ
ಪ್ರೋಟೀನ್ ನ ಉತ್ತಮ ಮೂಲವಾಗಿರುವ ಸೋಯಾಬೀನ್ ನಲ್ಲಿಯೂ ಕ್ಯಾಲ್ಸಿಯಂ ಹೇರಳವಾಗಿದೆ. ಉತ್ತಮ ಕ್ಯಾಲ್ಸಿಯಂಗಾಗಿ ಇದನ್ನು ಕೂಡ ಸೂಪರ್ಫುಡ್ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಬ್ರೊಕೊಲಿ ಕೂಡ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ, ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಕೆ ಕೂಡ ಸಮೃದ್ಧವಾಗಿದೆ.
ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಂಶದಿಂದ ಸಮೃದ್ಧವಾಗಿರುವ ರಾಗಿಯನ್ನು ಬಳಸುವುದರಿಂದಲೂ ಮೂಳೆಗಳು ಬಲಗೊಳ್ಳುತ್ತವೆ.
ಪಾಲಕ್ ಸೊಪ್ಪನ್ನು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ನಿಯಮಿತವಾಗಿ ಪಾಲಕ್ ಬಳಸುವುದರಿಂದ ಇದು ಮೂಳೆಗಳಿಗೆ ಅಗತ್ಯ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1