ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಸಾಲ ಕೊಟ್ಟ IMF

ಭಾರತದ ತೀವ್ರ ವಿರೋಧದ ಹೊರತಾಗಿಯೂ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್‌ಗಳ ಸಾಲವನ್ನು ಅನುಮೋದಿಸಿದೆ. ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಎಂಎಫ್ ಹೇಳಿದೆ. ಆದರೆ, ಈ ಸಾಲ ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆಯಾಗಬಹುದು ಎಂಬ ಭಾರತದ ಆತಂಕವನ್ನು ಐಎಂಎಫ್ ನಿರ್ಲಕ್ಷಿಸಿದೆ. ಪಾಕಿಸ್ತಾನದ ಹಿಂದಿನ ಸಾಲಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬುದನ್ನು ಭಾರತ ಒತ್ತಿ ಹೇಳಿದೆ.

ವಾಷಿಂಗ್ಟನ್​, ಮೇ 10: ಭಾರತದ (India) ವಿರೋಧದ ನಡುವೆಯೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ (Pakistan) 19 ಸಾವಿರ ಕೋಟಿ ರೂಪಾಯಿ ಸಾಲ ನೀಡಿದೆ. ಶುಕ್ರವಾರ (ಮೇ.09) ದಂದು ನಡೆದ ಐಎಂಎಫ್​ ಎಕ್ಸಿಕ್ಯೂಟಿವ್​ ಬೋರ್ಡನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭಾರತದ ಮನವಿಯನ್ನು ಧಿಕ್ಕರಿಸಿ ಐಎಂಎಫ್​ ಪಾಕಿಸ್ತಾನಕ್ಕೆ ಸಾಲ ನೀಡಿದೆ.

ಐಎಂಎಫ್​ ಕಾರ್ಯಕಾರಿ ಮಂಡಳಿಯು ತನ್ನ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಪಾಕಿಸ್ತಾನಕ್ಕೆ 1 ಬಿಲಿಯನ್​ ಡಾಲರಗಳ ಎರಡನೇ ಸಾಲದ ಕಂತನ್ನು ವಿತರಿಸಲು ತೀರ್ಮಾನಿಸಿದೆ. ಆದರೆ, ಪಾಕಿಸ್ತಾನ ಪ್ರಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಹಣ ದುರಪಯೋಗಪಡಿಸಿಕೊಳ್ಳಬಹುದು ಎಂದು ಭಾರತ ಹೇಳಿದೆ. ಅಲ್ಲದೇ, ನಿರ್ಣಾಯಕ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಭೆಯಲ್ಲಿ ಮತದಾನದಿಂದ ದೂರ ಉಳಿದಿದೆ.

ಪುನರಾವರ್ತಿತ ಆರ್ಥಿಕ ಬಿಕ್ಕಟ್ಟುಗಳು ಮತ್ತು ಹಿಂದಿನ ಐಎಂಎಫ್​ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಕಳಪೆ ದಾಖಲೆ ಇದ್ದರೂ ಪಾಕಿಸ್ತಾನದ ಪ್ರಗತಿಯನ್ನು ಐಎಂಎಫ್​ ಪರಿಶೀಲಿಸಿದ ನಂತರ ಈ ಅನುಮೋದನೆ ನೀಡಿದೆ.

ಟ್ವಿಟರ್ ಪೋಸ್ಟ್​

ಇನ್ನು, ಹಿಂದಿನ ಐಎಂಎಫ್​ ಸಾಲಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ಪಾಕಿಸ್ತಾನದ ನಿರಂತರ ವೈಫಲ್ಯದ ಬಗ್ಗೆ ಭಾರತ ಎಚ್ಚರಿಕೆ ನೀಡಿತ್ತು. ನಿಧಿಯ ಕಾರ್ಯಕ್ರಮ ವಿನ್ಯಾಸಗಳು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳು ದೇಶದ ಆರ್ಥಿಕ ಮತ್ತು ರಾಜಕೀಯ ವಾಸ್ತವಗಳಿಗೆ ಹೊಂದಿಕೊಳ್ಳುತ್ತವೆಯೇ ಎಂದು ಭಾರತ ಪ್ರಶ್ನಿಸಿತ್ತು.

ಟ್ವೀಟ್​ ಮಾಡಿ ಸಾಲ ಕೇಳಿದ್ದ ಪಾಕ್​

ಎರಡು ದಿನಗಳಿಂದ ಭಾರತ ನೀಡುತ್ತಿರುವ ತಿರುಗೇಟು ಸಹಿಸಲು ಕಷ್ಟ ಪಡುತ್ತಿರುವ ಪಾಕಿಸ್ತಾನವು ಟ್ವೀಟ್​ ಮೂಲಕ ಭಾರಿ ನಷ್ಟವಾಗಿದೆ ಎಂದು ಉಲ್ಲೇಖಿಸಿ ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗವು ತನ್ನ ಅಂತಾಷ್ಟ್ರೀಯ ಪಾಲುದಾರರಿಂದ ದೊಡ್ಡ ಪರಿಹಾರವನ್ನು ಕೇಳಿತ್ತು.

TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *