Healthy Breakfast: ಬೆಳಗ್ಗಿನ ಉಪಹಾರವು ದಿನವಿಡೀ ಚುರುಕಾಗಿರಲು ಮುಖ್ಯವಾಗಿದೆ. ಪೌಷ್ಟಿಕ ಉಪಹಾರವು ಗ್ಲೂಕೋಸ್ ಪೂರೈಕೆ, ಶಕ್ತಿಯ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ. ರೇಣುಕಾ ಮಲಿಕ್ 10 ಸಮತೋಲಿತ ಉಪಹಾರ ಪಟ್ಟಿ ನೀಡಿದ್ದಾರೆ.

ಬೆಳಗ್ಗಿನ ಉಪಹಾರವೆಂಬುದು (Morning Breakfast) ದಿನಪೂರ್ತಿ ನಮ್ಮನ್ನು ಚೇತೋಹಾರಿಯನ್ನಾಗಿ ಮಾಡುತ್ತದೆ. ಸರಿಯಾದ ಪೋಷಣೆಯೊಂದಿಗೆ ದಿನವನ್ನು ಆರಂಭಿಸುವುದು ದಿನವಿಡೀ ನಮ್ಮನ್ನು ಚುರುಕಾಗಿಸಿರುತ್ತದೆ. ದಿನವಿಡೀ ನಮ್ಮನ್ನು ಚುರುಕಾಗಿರಿಸಲು ಬೆಳಗ್ಗಿನ ಉಪಹಾರ ಅತಿ ಮುಖ್ಯವಾಗಿದೆ. ಉಪಹಾರವು ಶಕ್ತಿಯ ಮಟ್ಟ ಮತ್ತು ಜಾಗರೂಕತೆಯನ್ನು ಹೆಚ್ಚಿಸಲು ಗ್ಲೂಕೋಸ್ (Glucose) ಪೂರೈಕೆಯನ್ನು ಪುನಃ ತುಂಬಿಸುತ್ತದೆ ಮತ್ತು ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಇತರ ಅಗತ್ಯ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.
ಬೆಳಗ್ಗಿನ ಉಪಹಾರ ಏಕೆ ಮುಖ್ಯ?
ಹೆಚ್ಚಿನವರು ತೂಕ ಇಳಿಸಬೇಕೆಂಬ ನಿಟ್ಟಿನಲ್ಲಿ ಬೆಳಗ್ಗಿನ ಉಪಹಾರ ಸ್ಕಿಪ್ ಮಾಡುತ್ತಾರೆ ಹಾಗೂ ಖಾಲಿ ಹೊಟ್ಟೆಯಲ್ಲಿಯೇ ದಿನಗಳೆಯುತ್ತಾರೆ. ಇದರಿಂದ ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರ ಉಂಟಾಗುವುದು ಒಂದೆಡೆಯಾದರೆ ಉಪಹಾರ ಸೇವಿಸದಿರುವುದು ಹಸಿವಿನ ತೀವ್ರತೆಯನ್ನು ಹೆಚ್ಚಿಸುತ್ತದೆ ಇದರಿಂದ ನೀವು ಅತಿಯಾಗಿ ಸೇವಿಸಬಹುದು ಎಂದು ತಜ್ಞರು ತಿಳಿಸುತ್ತಾರೆ.
ಹಾಗಾಗಿ ಸಮತೋಲಿತವಾದ ಬೆಳಗ್ಗಿನ ತಿಂಡಿ ದಿನವನ್ನು ಆರಂಭಿಸಲು ಅತಿಮುಖ್ಯವಾಗಿದೆ. ಬರೇ ಕಾರ್ಬ್ಸ್ ಕೂಡ ನಮ್ಮ ತಿಂಡಿಯಾಗಿದ್ದರೆ ಅದೊಂದು ಸಮತೋಲಿತ ಆಹಾರವಾಗಿರುವುದಿಲ್ಲ. ಬೆಳಗ್ಗಿನ ಉಪಹಾರ ಹೇಗಿರಬೇಕು ಎಂಬುದನ್ನು ಆಹಾರ ತರಬೇತುದಾರರಾದ ರೇಣುಕಾ ಮಲಿಕ್ ತಿಳಿಸಿದ್ದಾರೆ.
ಫಿಟ್‌ನೆಸ್ ಮತ್ತು ಆಹಾರ ತರಬೇತುದಾರರಾದ ರೇಣುಕಾ ಮಲಿಕ್ ಕೂಡ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನಿಂದ ಸಮೃದ್ಧವಾಗಿರುವ 10 ಸಮತೋಲಿತ ಭಾರತೀಯ ಉಪಹಾರಗಳನ್ನು ಪಟ್ಟಿ ಮಾಡಿದ್ದಾರೆ. ಅದು ನಿಮ್ಮ ದಿನವನ್ನು ಪೌಷ್ಟಿಕ ಮತ್ತು ಆರೋಗ್ಯಕರವಾಗಿ ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂಬುದು ರೇಣುಕಾ ಮಾತಾಗಿದೆ. ಈ ಉಪಹಾರಗಳಲ್ಲಿ ಪ್ರೊಟೀನ್, ಕಾರ್ಬೋ, ಫ್ಯಾಟ್ಸ್ ಎಲ್ಲವೂ ಇದೆ ಹಾಗಾಗಿ ಇದೊಂದು ಆರೋಗ್ಯಕರ, ಸಮತೋಲಿತ ಉಪಹಾರ ಆಯ್ಕೆಗಳಾಗಿವೆ ಎಂಬುದು ರೇಣುಕಾ ಮಾತಾಗಿದೆ.
ಹಾಗಿದ್ದರೆ ಆ ಉಪಹಾರಗಳಾವುವು ತಿಳಿಯೋಣ
ಹೆಸರು ಬೇಳೆ ಚೀಲಾ, ಪುದೀನಾ ಚಟ್ನಿ ಹಾಗೂ ಮೊಸರು
ಪ್ರೊಟೀನ್: ಹೆಸರು ಬೇಳೆ, ಮೊಸರು
ಕಾರ್ಬ್ಸ್: ದಾಲ್, ಚಟ್ನಿ
ಫ್ಯಾಟ್ಸ್: ತುಪ್ಪ ಅಥವಾ ಎಣ್ಣೆ
ಎರಡು ಬೇಯಿಸಿದ ಮೊಟ್ಟೆ, ಮಲ್ಟಿಗ್ರೈನ್ ರೋಟಿ, ತರಕಾರಿ
ಪ್ರೊಟೀನ್:ಮೊಟ್ಟೆ
ಕಾರ್ಬ್ಸ್: ರೋಟಿ, ತರಕಾರಿ
ಫ್ಯಾಟ್ಸ್: ತುಪ್ಪ ಅಥವಾ ಎಣ್ಣೆ
ಓಟ್ಸ್ ಪೋರಿಡ್ಜ್, ಹಾಲು, ಚಿಯಾ ಸೀಡ್ಸ್, ಹಣ್ಣು
ಪ್ರೊಟೀನ್: ಹಾಲು, ಚಿಯಾ
ಕಾರ್ಬ್ಸ್: ಓಟ್ಸ್, ಹಣ್ಣು
ಫ್ಯಾಟ್ಸ್: ಚಿಯಾ ಅಥವಾ ಪೀನಟ್ ಬಟರ್
ಪನೀರ್ ಸ್ಟಫ್ಡ್ ಮೂಂಗ್ ದಾಲ್ ದೋಸೆ ಹಾಗೂ ತೆಂಗಿನ ಕಾಯಿ ಚಟ್ನಿ
ಪ್ರೊಟೀನ್: ಪನೀರ್, ದಾಲ್
ಕಾರ್ಬ್ಸ್: ದೋಸೆ
ಫ್ಯಾಟ್ಸ್: ಚಟ್ನಿ ಹಾಗೂ ಎಣ್ಣೆ
ಗ್ರೀಕ್ ಯೋಗರ್ಟ್, ಹಣ್ಣುಗಳು ಹಾಗೂ ಸೀಡ್ಸ್/ನಟ್ಸ್
ಪ್ರೊಟೀನ್: ಯೋಗರ್ಟ್
ಕಾರ್ಬ್ಸ್: ಹಣ್ಣುಗಳು
ಫ್ಯಾಟ್ಸ್: ನಟ್ಸ್, ಸೀಡ್ಸ್
ಬೇಸನ್ ಚಿಲ್ಲಾ, ತರಕಾರಿ, ಮೊಸರು
ಪ್ರೊಟೀನ್: ಕಡಲೆ ಹಿಟ್ಟು, ಮೊಸರು
ಕಾರ್ಬ್ಸ್: ಕಡಲೆ ಹಿಟ್ಟು, ತರಕಾರಿ
ಫ್ಯಾಟ್ಸ್: ತುಪ್ಪ ಅಥವಾ ಎಣ್ಣೆ
ತರಕಾರಿ ಉಪ್ಮಾ ಹಾಗೂ ಬೇಯಿಸಿದ ಮೊಟ್ಟೆ, ಮೊಸರು
ಪ್ರೊಟೀನ್: ಮೊಟ್ಟೆ/ಪನೀರ್
ಕಾರ್ಬ್ಸ್: ರವೆ
ಫ್ಯಾಟ್ಸ್: ಒಗ್ಗರಣೆ ಎಣ್ಣೆ
ಪೋಹಾ, ಹುರಿದ ನೆಲಗಡಲೆ ಹಾಗೂ ಬೇಯಿಸಿದ ಮೊಟ್ಟೆ
ಪ್ರೊಟೀನ್: ಮೊಟ್ಟೆ, ನೆಲಗಡಲೆ
ಕಾರ್ಬ್ಸ್: ಪೋಹಾ
ಫ್ಯಾಟ್ಸ್: ನೆಲಗಡಲೆ, ಎಣ್ಣೆ
ರಾಗಿ ದೋಸೆ, ನೆಲಗಡಲೆ ಚಟ್ನಿ ಹಾಗೂ ಮೊಟ್ಟೆ
ಪ್ರೊಟೀನ್: ಮೊಟ್ಟೆ ಹಾಗೂ ನೆಲಗಡಲೆ
ಕಾರ್ಬ್ಸ್: ರಾಗಿ
ಫ್ಯಾಟ್ಸ್: ಚಟ್ನಿ ಹಾಗೂ ಎಣ್ಣೆ
ಸ್ಪ್ರೌಟ್ಸ್ ಸಲಾಡ್, ಪನೀರ್ ಹಾಗೂ ಆಲೀವ್ ಆಯಿಲ್
ಪ್ರೊಟೀನ್: ಸ್ಪ್ರೌಟ್ಸ್, ಪನೀರ್
ಕಾರ್ಬ್ಸ್: ತರಕಾರಿ, ಸ್ಪ್ರೌಟ್ಸ್
ಫ್ಯಾಟ್ಸ್: ಆಲೀವ್ ಆಯಿಲ್
ಬೆಳಗ್ಗಿನ ಉಪಹಾರ ಏಕೆ ಮುಖ್ಯ?
ದಿನವನ್ನು ಸರಿಯಾಗಿ ಅತ್ಯುತ್ತಮವಾಗಿ ಆರಂಭಿಸಲು ಪೌಷ್ಟಿಕ ಉಪಹಾರವನ್ನು ಸೇವಿಸುವುದು ಕಡ್ಡಾಯವಾಗಿದೆ. ಆಹಾರ ತಜ್ಞರಾದ ರಿಧಿಮಾ ಖಮರ್ಸಾ ಪ್ರಕಾರ, ಉಪಹಾರದಿಂದ ದಿನವನ್ನು ಆರಂಭಿಸುವುದು ನಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಹಾಗೂ ನಮ್ಮ ದಿನವನ್ನು ಅತ್ಯಂತ ರೋಮಾಂಚಕವಾಗಿಸುತ್ತದೆ.
ಎಲ್ಲಾ ಮ್ಯಾಕ್ರೋಗಳಲ್ಲಿ ಸಂಪೂರ್ಣವಾದ ಸಮತೋಲಿತ ಆಹಾರವನ್ನು ಸೇವಿಸುವುದು ನಮ್ಮ ದಿನವನ್ನು ಆರೋಗ್ಯಕರವಾಗಿ ಮತ್ತು ಶಕ್ತಿಯುತವಾಗಿರಿಸುತ್ತದೆ. ಹಾಗಿದ್ದರೆ ಈ ಆರೋಗ್ಯಕರ ಬ್ರೇಕ್‌ಫಾಸ್ಟ್‌ಗಳನ್ನು ತಯಾರಿಸಿ ದಿನವನ್ನು ಆರಂಭಿಸಿ.
Source : News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0