ಮನುಷ್ಯನ ದೇಹದ ಈ ಭಾಗದಲ್ಲಿ ಒಂದೇ ಒಂದು ಹನಿಯೂ ರಕ್ತ ಇರುವುದಿಲ್ಲ; ಯಾವ ಅಂಗ ಗೊತ್ತೇ?

Health: Which part of the body does not have blood supply: ಇನ್ನು ನಮ್ಮ ದೇಹಕ್ಕೆ ರಕ್ತ ಅತ್ಯಂತ ಮುಖ್ಯ. ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸುವ ಏಕೈಕ  ಅಂಶವೇ ರಕ್ತ. ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ರಕ್ತವು ಕಣ್ಣುಗಳ ಮೇಲಿನ ಪದರವಾದ ಕಾರ್ನಿಯಾವನ್ನು ತಲುಪುವುದಿಲ್ಲ. ಇದಕ್ಕೆ ಕಾರಣ ಕಾರ್ನಿಯಾದಲ್ಲಿ ಯಾವುದೇ ರಕ್ತನಾಳಗಳಿಲ್ಲ. ಬದಲಾಗಿ ಅದು ನರಗಳ ಜಾಲವನ್ನು ಒಳಗೊಂಡಿದೆ.

  • ದೇಹದಲ್ಲಿ ರಕ್ತ ತಲುಪದ ಒಂದು ಅಂಗ ಇದೆ
  • ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸುವ ಏಕೈಕ ಅಂಶವೇ ರಕ್ತ
  • ರಕ್ತವು ಕಣ್ಣುಗಳ ಮೇಲಿನ ಪದರವಾದ ಕಾರ್ನಿಯಾವನ್ನು ತಲುಪುವುದಿಲ್ಲ

Which part of the body does not have blood supply: ದೇಹದಲ್ಲಿ ರಕ್ತವಿಲ್ಲದೆ ಜೀವನ ಸಾಧ್ಯವಿಲ್ಲ. ಆದರೆ ದೇಹದಲ್ಲಿ ರಕ್ತ ತಲುಪದ ಒಂದು ಅಂಗವೂ ಇದೆ. ಆ ಅಂಗ ಯಾವುದು ಗೊತ್ತಾ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಕಾರ್ನಿಯಾವು ಕಣ್ಣುಗಳ ಮೇಲಿನ ಪದರವಾಗಿದೆ. ಕಾರ್ನಿಯಾ ದೇಹದ ಒಂದು ಪ್ರಮುಖ ಭಾಗವಾಗಿದ್ದು, ಕಾರ್ನಿಯಾ ಇಲ್ಲದೆ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ.

ಇನ್ನು ನಮ್ಮ ದೇಹಕ್ಕೆ ರಕ್ತ ಅತ್ಯಂತ ಮುಖ್ಯ. ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸುವ ಏಕೈಕ  ಅಂಶವೇ ರಕ್ತ. ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ರಕ್ತವು ಕಣ್ಣುಗಳ ಮೇಲಿನ ಪದರವಾದ ಕಾರ್ನಿಯಾವನ್ನು ತಲುಪುವುದಿಲ್ಲ. ಇದಕ್ಕೆ ಕಾರಣ ಕಾರ್ನಿಯಾದಲ್ಲಿ ಯಾವುದೇ ರಕ್ತನಾಳಗಳಿಲ್ಲ. ಬದಲಾಗಿ ಅದು ನರಗಳ ಜಾಲವನ್ನು ಒಳಗೊಂಡಿದೆ.

ಕಾರ್ನಿಯಾ ಪೋಷಣೆಯನ್ನು ಹೇಗೆ ಪಡೆಯುತ್ತದೆ?
ಈಗ ರಕ್ತವು ಕಾರ್ನಿಯಾವನ್ನು ತಲುಪದಿದ್ದರೆ, ಅದು ಪೋಷಣೆಯನ್ನು ಹೇಗೆ ಪಡೆಯುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕಾರ್ನಿಯಾವನ್ನು ಪೋಷಿಸುವ ದ್ರವಗಳು ಅಲ್ಲಿಯೇ ಇರುತ್ತವೆ. ಕಾರ್ನಿಯಾ ಗಾಳಿಯಿಂದ ಆಮ್ಲಜನಕವನ್ನು ಪಡೆಯುತ್ತದೆ.

ಕಣ್ಣುಗಳಿಲ್ಲದ ಈ ದೇಹವನ್ನು ಊಹಿಸಿಕೊಳ್ಳುವುದು ಕಷ್ಟ. ಏಕೆಂದರೆ ಕಣ್ಣುಗಳು ನಮ್ಮ ದೇಹದ ಅಂಗವಾಗಿದ್ದು, ಅದರ ಮೂಲಕ ನಾವು ಈ ಜಗತ್ತನ್ನು ನೋಡಬಹುದು. ಕಣ್ಣಿನ ಮೇಲ್ಭಾಗವಾದ ಕಾರ್ನಿಯಾ ಎಷ್ಟು ಮುಖ್ಯವೆಂದರೆ, ಅದು ಇಲ್ಲದೆ ವ್ಯಕ್ತಿಯು ನೋಡಲು ಸಾಧ್ಯವಿಲ್ಲ. ಕಾರ್ನಿಯಾ ಗಾಯಗೊಂಡರೆ ವ್ಯಕ್ತಿಯು ದೃಷ್ಟಿ ಕಳೆದುಕೊಳ್ಳಬಹುದು.

Source: https://zeenews.india.com/kannada/health/which-part-of-the-body-does-not-have-blood-supply-284458

Leave a Reply

Your email address will not be published. Required fields are marked *