CET–NEET ತರಬೇತಿ ಉದ್ಘಾಟನೆ: ವಿದ್ಯಾರ್ಥಿಗಳು ಗುರಿ ಸಾಧನೆಗೆ ಶ್ರದ್ಧೆ–ಪರಿಶ್ರಮ ಅಗತ್ಯ.

ಚಿತ್ರದುರ್ಗ ನ. 16

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ಎನ್‍ಇಇಟಿ ಅತಿ ಮುಖ್ಯವಾದ ಘಟ್ಟಗಳಾಗಿವೆ. ಇವು ನಿಮ್ಮ ಮುಂದಿನ ಜೀವನವನ್ನು ನಿರ್ಧಾರ ಮಾಡುವಂತ ತಿರುವುಗಳಾಗಿವೆ, ಇದರಲ್ಲಿ ಸರಿಯಾದ ರೀತಿಯಲ್ಲಿ ಶ್ರದ್ದೆಯಿಂದ ಅಭ್ಯಾಸವನ್ನು ಮಾಡಿ ತರಗತಿಗಳಿಗೆ ಗೈರು ಹಾಜರಾಗದಂತೆ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದ ವಿಷಯವನ್ನು ಚನ್ನಾಗಿ ಅರಿತು ಪರೀಕ್ಷೆಯನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ಟಿ. ತಿಮ್ಮಯ್ಯ ಕರೆ ನೀಡಿದರು.


ಚಿತ್ರದುರ್ಗ ನಗರದ ಗಾರೆಹಟ್ಟಿಯಲ್ಲಿನ ಎಸ್.ಜೆ.ಎಂ ವಿದ್ಯಾಪೀಠ, ಶಾಲಾ ಶಿಕ್ಷಣ ಇಲಾಖೆ, ಶ್ರೀ ಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಲೇಜಿನ ಪ್ರಥಮ ಮತ್ತು ದ್ವೀತೀಯ ಪಿಯು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಿಇಟಿ ಹಾಗೂ ಎನ್.ಇ.ಇ.ಟಿ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಎರಡು ವರ್ಷ ನೀವುಗಳು ಕಷ್ಟವನ್ನು ಪಟ್ಟರೆ ಮುಂದಿನ ಜಿವನ ಪೂರ್ತಿಯಾಗಿ ಆರಾಮಾಗಿ ಇರಬಹುದಾಗಿದೆ ಆದರೆ ಈ ಎರಡು ವರ್ಷ ಮೋಜಿನಲ್ಲಿ ಕಳೆದರೆ ಮುಂದಿನ  ನಿಮ್ಮ ಜೀವನ ಕಷ್ಟ ಪಡಬೇಕಾಗುತ್ತದೆ ಕಲಿಯುವ ಶ್ರದ್ದೆಯಿಂದ ಕಲಿಯವುದನ್ನು ಮಾತ್ರ ಮಾಡಿ ಬೇರೆದಕ್ಕೆ ಅವಕಾಶವನ್ನು ನೀಡಬೇಡಿ, ಕಠಿಣವಾದ ಪರಿಶ್ರಮದಿಂದ ಮಾತ್ರ ಸಾಧನೆಯನ್ನು ಮಾಡಲು ಸಾಧ್ಯವಿದೆ, ಪರಿಶ್ರಮ ಇರದಿದ್ದರೆ ಏನನ್ನು ಸಹಾ ಸಾಧನೆ ಮಾಡಲು ಆಗುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.


ನಾವುಗಳು ಕೆಲವೊಂದು ಸಮಯದಲ್ಲಿ ಕಿವುಡರಾಗಬೇಕಿದೆ ಬೇರೆಯವರ ಮಾತುಗಳಿಗೆ ಬೆಲೆಯನ್ನು ನೀಡದೆ ನಮ್ಮ ಗುರಿಯನ್ನು ಮುಟ್ಟುವಂತ ಧಾವಿಸಬೇಕಿದೆ, ಕಷ್ಟ, ಬಡತನ ನಿಮ್ಮ ಸಾಧನೆಗೆ ದಾರಿ ದೀಪಗಳಾಗಬೇಕಿದೆ ನಮ್ಮಲ್ಲಿ ಸಾಶಧನೆ ಮಾಡಿರುವವರು ಬಹುತೇಕ ಬಡತನದಿಂದ ಬಂದವರೆ ಆಗಿದ್ದಾರೆ, ಬಡತನದಲ್ಲಿ ಹಸಿವಿನಲ್ಲಿ ಸಾಧನೆಯನ್ನು ಮಾಡುವ ಮನಸ್ಸು ಇರುತ್ತದೆ, ಅದರ ಸದುಪಯೋಗ ಆಗಬೇಕಿದೆ, ಶಿಕ್ಷಣದಿಂದ ಮಾತ್ರ ಏನನ್ನಾದರೂ ಸಾಧನೆಯನ್ನು ಮಾಡಲು ಸಾಧ್ಯವಿದೆ, ಅಕ್ಷರ ಕಲಿತವನಿಗೆ ಸಮಾಜದಲ್ಲಿ ಗೌರವ ಇರುತ್ತದೆ.

ಸಮಯವನ್ನು ವ್ಯರ್ಥ ಮಾಡಬೇಡಿ ಸದುಯೋಗವನ್ನು ಪಡಿಸಿಕೊಳ್ಳಿ, ಸಾಧ್ಯವಾದಷ್ಟು ನಿಮ್ಮ ಮೊಬೈಲ್‍ಗಳಿಂದ ದೂರ ಇರಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡಿ ಮಿಕ್ಕ ಸಮಯವನ್ನು ಅಭ್ಯಾಸದಲ್ಲಿ ತಲ್ಲಿನರಾಗಿ, ಪುಸ್ತಕ ಓದುವುದರಿಂದ ನಮ್ಮ ಜ್ಞಾನ ಹೆಚ್ಚಾಗುತ್ತದೆ ಮೊಬೈಲ್ ನೋಡುವುದರಿಂದ ನಮಗೆ ಏನು ಸಹಾ ಉಪಯೋಗವಾಗುವುದಿಲ್ಲ ಎಂದು ತಿಳಿಸಿದರು.


ಎಸ್.ಜೆ.ಎಂ.ಐ.ಟಿಯ ಉಪ ಪ್ರಾಂಶುಪಾಲರಾದ ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಬಿಇ ಮತ್ತು ಎಂಬಿಬಿಎಸ್ ಮಾಡಲು ಸಿಇಟಿ ಮತ್ತು ಎನ್.ಇ.ಇ.ಟಿ ಉಪಯೋಗವಾಗುತ್ತದೆ, ನಿಮ್ಮ ಶಾಲೆಯಲ್ಲಿ ಇದರ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ ಇದರ ಸದುಪಯೋಗವನ್ನು ಪಡಿಸಿಕೊಳ್ಳಿ, ಇಲ್ಲಿ ವಿದ್ಯಾರ್ಥಿಗಳಿಗೆ ಹೂರೆಯಾಗದ ರೀತಿಯಲ್ಲಿ ತರಬೇತಿಯನ್ನು ನೀಡಲಾಗುತ್ತದೆ, ಸಿಇಟಿ ಮತ್ತು ಎನ್.ಇ.ಇ.ಟಿ ಪರೀಕ್ಷೆಯ ರ್ಯಾಂಕಿಂಗ್‍ನಲ್ಲಿ 1 ಲಕ್ಷದೊಳಗೆ ಬಂದರೆ ರಾಜ್ಯದಲ್ಲಿ ಉತ್ತಮವಾದ ಕಾಲೇಜುಗಳು ಸಿಗಲು ಸಾಧ್ಯವಿದೆ, ಇದನ್ನು ಮನದಲ್ಲಿ ಇಟ್ಟುಕೊಂಡು ಅಭ್ಯಾಸವನ್ನು ಮಾಡಿ ಎಂದರು.
, ಶ್ರೀ ಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಎಂ.ಜಿ.ರಾಜೇಶ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಕಡಿಮೆ ಪ್ರಮಾಣದಲ್ಲಿ ಶುಲ್ಕವನ್ನು ಪಡೆಯುವುದರ ಮೂಲಕ ವಿದ್ಯಾರ್ಥಿಗಳಿಗೆ ಭೋದನೆಯನ್ನು ಮಾಡಲಾಗುತ್ತದೆ ಹಲವಾರು ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಸಿಇಟಿ ಹಾಗೂ ಎನ್.ಇ.ಇ.ಟಿ ತರಬೇತಿಯನ್ನು ನಿಲ್ಲಿಸಲಾಗಿತ್ತು ಆಗ ಪೋಷಕರು ನಿಮ್ಮ ಕಾಲೇಜಿನಲ್ಲಿ ಸಿಇಟಿ ಹಾಗೂ ಎನ್.ಇ.ಇ.ಟಿ ತರಬೇತಿ ಇದ್ದೇಯೇ ಎಂದು ಪ್ರಶ್ನೆ ಮಾಡಿದರು, ಇದು ಇಲ್ಲದಿದ್ದರೆ ನಮ್ಮ ಕಾಲೇಜಿನಲ್ಲಿ ಪ್ರವೇಶಗಳು ಕಡಿಮೆಯಾಗುತ್ತಿದ್ದವು ಇದರಿಂದ ನಮ್ಮ ಕಾಲೇಜಿನಲ್ಲಿ ಈ ಸಾಲಿನಿಂದ ಮತ್ತೇ ಸಿಇಟಿ ಹಾಗೂ ಎನ್.ಇ.ಇ.ಟಿ ತರಬೇತಿಯನ್ನು ಪ್ರಾರಂಭ ಮಾಡಲಾಗಿದೆ ಈ ತರಬೇತಿಯ ಜೋತೆಗೆ ಸಮಾಣ್ಯ ಪರೀಕ್ಷೆಗೂ ಸಹಾ ವಿದ್ಯಾರ್ಥಿಗಳನ್ನು ತಯಾರಿ ಮಾಡಬೇಕಿದೆ ಎಂದರು.


ಕಾರ್ಯಕ್ರಮದಲ್ಲಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಮೋಹನ್, ಇಂಡಿಪೆಂಡೆಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ, ಪೋಷಕರಾದ ರವಿ, ಸಂಪನ್ಮೂಲ ವ್ಯಕ್ತಿಗಳಾದ ನಯನರಾಣಿ, ಅನೂಪ್ ಗೌಡ ಭಾಗವಹಿಸಿದ್ದರು.


ಉಪನ್ಯಾಸಕರಾದ ಶ್ರೀಮತಿ ಮಾಲಾ ಪ್ರಾರ್ಥಿಸಿದರೆ, ರಾಜೇಶ್ ಸ್ವಾಗತಿಸಿದರು, ಉಪನ್ಯಾಸಕರಾದ ಶ್ರೀಮತಿ ರವಿಕಲಾ ಎಲ್.ಆರ್. ವಂದಿಸಿದರು, ಉಪನ್ಯಾಸಕರಾದ ಶ್ರೀಮತಿ ಬಿ.ಕೆ. ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *