
ಚಿತ್ರದುರ್ಗ : ಡಾ.ಹರ್ಷ ಅಡ್ವಾನ್ಸ್ಡ್ ಡೆಂಟಲ್ ಮತ್ತು ಕಾಸ್ಮೆಟಿಕ್ ಕೇರ್ ನ ಉದ್ಘಾಟನಾ ಸಮಾರಂಭವು ದಿನಾಂಕ 26.11.2023 ರಂದು ಬೆಳಿಗ್ಗೆ 9.30 ಕ್ಕೆ ಜಿಲ್ಲಾ ಒಕ್ಕಲಿಗರ ಸಂಘದ ಕಟ್ಟಡದ ಕಾಂಪೆಕ್ಸ್ ನಲ್ಲಿ ಜರುಗಲಿದೆ.
ಚಿಕಿತ್ಸಾಲಯದ ಉದ್ಘಾಟನೆಯನ್ನು ದಾವಣಗೆರೆ ಸ್ನಾತಕೋತ್ತರ ಬಾಪೂಜಿ ಡೆಂಟಲ್ ಕಾಲೇಜಿನ ಪೆರಿಯೋದಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ತ್ರಿವೇಣಿ. ಎಂ. ಜಿ. ಅವರು ನೆರವೇರಿಸುವರು. ಹಾಗೂ ಅದೇ ಕಾಲೇಜಿನ ಡಾ.ಗಾಯತ್ರಿ ಜಿ.ವಿ ಅವರು ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಉದ್ಘಾಟಿಸುವರು..
ಬಾಪೂಜಿ ಸ್ನಾತಕೋತ್ತರ ದಂತ ವೈದ್ಯಕೀಯ ಕಾಲೇಜಿನ ಡಾ.ಸೌಮ್ಯ ಎನ್. ಕೆ. ಅವರು ಹಾಗೂ ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಜೆ.ಯಾದವರೆಡ್ಡಿ, ಕಾರ್ಯದರ್ಶಿ ಕೆ. ರಾಜಕುಮಾರ್, ಖಜಾಂಚಿ ಕೆ. ರಾಮಪ್ಪ, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ. ಎಂ. ಶಿವಸ್ವಾಮಿ, ನಿವೃತ್ತ ಶಿಕ್ಷಣಾಧಿಕಾರಿಗಳಾದ ಎಂ. ಆರ್. ನಾರಾಯಣಪ್ಪ, ಚಿತ್ರದುರ್ಗ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ. ಪಿ. ಚೇತನ್, ಕಾರ್ಯದರ್ಶಿ ಜಗನ್ನಾಥ್,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗಭೂಷಣ್, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಸಂಪತ್ ಕುಮಾರ್, ವಕೀಲರಾದ ಕೆ. ಎಸ್. ವಿಜಯ್, ಡಾ. ದೇವರಾಜ್, ECO ಎಂ. ಆರ್. ನಾಗರಾಜ್, ,ಡಾ. ಹರ್ಷ ಮತ್ತಿತರರು ಉಪಸ್ಥಿತರಿರುವರು.
ಡಾ. ಹರ್ಷ ಅಡ್ವಾನ್ಸ್ಡ್ ಡೆಂಟಲ್ ಮತ್ತು ಕಾಸ್ಮೆಟಿಕ್ ಕೇರ್ ನಲ್ಲಿ ದೊರೆಯುವ ಸೌಲಭ್ಯಗಳು :
ಡಾ. ಹರ್ಷ ಅಡ್ವಾನ್ಸ್ಡ್ ಡೆಂಟಲ್ ಮತ್ತು ಕಾಸ್ಮೆಟಿಕ್ ಕೇರ್ ನಲ್ಲಿ ಬಾಯಿ ಶಸ್ತ್ರ ಚಿಕಿತ್ಸೆ, ರೋಗ ಪೀಡಿತ ಹಲ್ಲು ಕೀಳುವುದು, ಹಲ್ಲಿನ ಗುಳಿ ತುಂಬುವುದು, ಹಲ್ಲು ಸ್ವಚ್ಛಗೊಳಿಸುವುದು, ಹಲ್ಲುಗಳಿಗೆ ಕ್ಲಿಪ್ ಹಾಕುವುದು, ಮಕ್ಕಳ ಹಲ್ಲಿನ ಚಿಕಿತ್ಸೆ, ಕೃತಕ ಹಲ್ಲುಗಳ ಜೋಡಣೆ, ಹಲ್ಲುಗಳಿಗೆ ಕ್ಯಾಪ್ ಹಾಕುವುದು, ವಸಡಿನ ಚಿಕಿತ್ಸೆ ಹೊಸ ಹಲ್ಲು ಕೂರಿಸುವುದು, ಡೆಂಟಲ್ ಇಂಪ್ಲಾಂಟ್ ಡೆಂಟಲ್ ಕಾಸ್ಮೆಟಿಕ್ ಕೇರ್ ನಲ್ಲಿ ಇವೆಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂದು ಚಿಕಿತ್ಸಾಲಯದ ಮುಖ್ಯಸ್ಥರಾದ ಡಾ. ಹರ್ಷ ಅವರು ತಿಳಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1