ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಮಾ. 07
ಪಂಡಿತ್ ದೀನದಯಾಳ್ ಉಪಾಧ್ಯಾಯರ ‘ಅಂತ್ಯೋದಯ’ ತತ್ವ ಮತ್ತು ಪಕ್ಷದ ಸಿದ್ಧಾಂತಗಳನ್ನು ತಳಮಟ್ಟದ ಕಾರ್ಯಕರ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಪ್ರಶಿಕ್ಷಣ ವರ್ಗವು ಅತ್ಯಂತ ಮಹತ್ವದ್ದಾಗಿದೆ. ಕಾರ್ಯಕರ್ತರ ಬೌದ್ಧಿಕ ವಿಕಸನ ಮತ್ತು ಸಂಘಟನಾತ್ಮಕ ಚಟುವಟಿಕೆಗಳಿಗೆ ವೇಗ ನೀಡಲು ಈ ಕಾರ್ಯಗಾರವು ಪೂರಕವಾಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಸಂಸದರಾದ ಗೋವಿಂದ ಕಾರಜೋಳ ತಿಳಿಸಿದರು.

ಚಿತ್ರದುರ್ಗ ನಗರದ ಜಗಳೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026″ರ ದಾವಣಗೆರೆ ವಿಭಾಗ ವಿಷಯ ಪ್ರಮುಖರ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪಕ್ಷ ತತ್ವ ಸಿದ್ದಾಂತದ ಮೇಲೆ ನಡೆಯುತ್ತಿದೆ, ಕೇವಲ ಒಂದು ಸ್ಥಾನದಿಂದ ಪ್ರಾರಂಭವಾದ ನಮ್ಮ ಪಕ್ಷ ಈಗ ಸರ್ಕಾರವನ್ನು ರಚನೆ ಮಾಡುವಷ್ಟು ಸದಸ್ಯರನ್ನು ಹೊಂದಿದೆ, ಹಲವಾರು ಜನರ ಕಠಿಣವಾದ ಪರಿಶ್ರಮದ ಫಲವಾಗಿ ಇಂದು ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರವನ್ನು ನಡೆಸುತ್ತಿದೆ. ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಗಳಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಕಾರ್ಯಕರ್ತರು ತಮ್ಮ ಜೀವನವನ್ನು ಈ ಪಕ್ಷದ ಏಳ್ಗೆಗಾಗಿ ಮುಡುಪಾಗಿ ಇಟ್ಟಿದ್ದಾರೆ. ನಮ್ಮ ಪಕ್ಷಕ್ಕೂ ಬೇರೆ ಪಕ್ಷಕ್ಕೂ ಹಲವಾರು ರೀತಿಯಲ್ಲಿ ವ್ಯತ್ಯಾಸ ಇದೆ ನಮ್ಮಲ್ಲಿ ಸಂಘದ ನಿರ್ದೆಶನದ ಮೇರೆಗೆ ಪಕ್ಷÀ ನಡೆಯುತ್ತದೆ ಹೊರೆತು ಯಾವುದೇ ವ್ಯಕ್ತಿಯ ಮೇಲೆ ಅಲ್ಲ, ರಾಜ್ಯದಲ್ಲಿಯೂ ಸಹಾ ಒಂದರಿಂದ ಪ್ರಾರಂಭವಾದ ನಮ್ಮ ಪಕ್ಷದ ಶಾಸದರ ಸಂಖ್ಯಾ ಬಲ ಅಂತಿಮವಾಗಿ ಸರ್ಕಾರವನ್ನು ರಚನೆ ಮಾಡಿ ಅಧಿಕಾರವನ್ನು ನಡೆಸಿದೆ. ಪಕ್ಷದಲ್ಲಿ ನಿಷ್ಠಾವಂತರಾಗಿ ಪ್ರಮಾಣಿಕರಾಗಿ ಸೇವೆಯನ್ನು ಸಲ್ಲಿಸಿದವರಿಗೆ ಮುಂದಿನ ದಿನಮಾನದಲ್ಲಿ ಅಧಿಕಾರಿ ಸಿಗಲಿದೆ ಎಂಬುದಕ್ಕೆ ಮೋದಿಯವರು ಸಾಕ್ಷಿಯಾಗಿದ್ದಾರೆ ಇದ್ದಲ್ಲದೆ ಪಕ್ಷ ಅಧಿಕಾರಕ್ಕೆ ಬರಲು ಪಕ್ಷದ ಕಾರ್ಯಕರ್ತರು ಕಾರಣರಾಗಿದ್ದಾರೆ ದೇಶ ನಮಗೆ ಏನು ಮಾಡಿದೆ ಎನ್ನುವ ಬದಲು ದೇಶಕ್ಕೆ ನಾವು ಏನು ಮಾಡಿದ್ದೇವೆ ಎಂಬುದು ತಿಳಿಯ ಬೇಕಿದೆ, ನಮಗೆ ದೇಶ ಮೊದಲು ತದ ನಂತರ ಅಧಿಕಾರ ಪಕ್ಷ ಎನ್ನುವವರು ನಾವು ಎಂದು ಗೋವಿಂದ ಕಾರಜೋಳ ತಿಳಿಸಿದರು.
ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ ಎಲ್ಲಾ ಜನತೆಯಿಂದಲೂ ಸಹಾ ವಿರೋಧವನ್ನು ಕಟ್ಟಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿರುವುದು ನಮ್ಮ ರ್ದೌಭಾಗ್ಯವಾಗಿದೆ. ದಿನದಿಂದ ದಿನಕ್ಕೆ ದರಗಳನ್ನು ಏರಿಕೆ ಮಾಡುವುದರ ಮೂಲಕ ಜನತೆಗೆ ಬೆಲೆ ಏರಿಕೆಯ ಬಿಸಿಯನ್ನು ನೀಡುತ್ತಿದೆ. ಕೇಂದ್ರ ಸರ್ಕಾರದ ಅಕ್ಕಿಯನ್ನು ರಾಜ್ಯ ಸರ್ಕಾರ ತನ್ನ ಚೀಲದಲ್ಲಿ ಹಾಕಿ ಅದಕ್ಕೆ ತನ್ನ ಹೆಸರನ್ನು ಹೇಳುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಪುಡಿ ರಾಜಕಾರಣಿಗಳಿಗೆ ಗ್ಯಾರೆಂಟಿಯ ಹೆಸರಿನಲ್ಲಿ ಉದ್ಯೋಗವನ್ನು ನೀಡುವುದರ ಮೂಲಕ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುತ್ತಿದೆ. ಕೇಂದ್ರದಿಂದ ಜಿಲ್ಲೆಗೆ ಹಲವಾರು ರೀತಿಯಲ್ಲಿ ಅರ್ಥಿಕ ನೆರವು ಬಂದಿದೆಇದರ ಬಗ್ಗೆ ಕಾರ್ಯಕರ್ತರು ಬೇರೆಯವರಿಗೆ ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯರು, ಪ್ರಶಿಕ್ಷಣ ವರ್ಗದ ಪ್ರಭಾರಿಗಳಾದ ಡಾ.ಶಿವಯೋಗಿ ಸ್ವಾಮಿ ಮಾತನಾಡಿ, ಪಕ್ಷದ ಕಾರ್ಯಕರ್ತರಿಗೆ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದ ದೀನ ದಯಾಳ್ ಉಪಾಧ್ಯಾಯರು 1956ರಲ್ಲಿ ಜನ ಸಂಘದಲ್ಲಿ ಇದ್ದಾಗಲೇ ಇದನ್ನು ಪ್ರಾರಂಭ ಮಾಡಿದರು, ಅಲ್ಲಿದ್ದ ಇಲ್ಲಿಯವರೆಗೂ ಸಹಾ ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. 11 ಜನರಿಂದ ಪ್ರಾರಂಭವಾದ ಜನ ಸಂಘ ತದ ನಂತರ ಬಿಜೆಪಿಯಾಗಿ ಮಾರ್ಪಟ್ಟು ಈಗ ಪ್ರಪಂಚದಲ್ಲಿಯೇ ನಂ1 ಪಾರ್ಟಿಯಾಗಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷವಾಗಿ ಹೊರ ಹೊಮ್ಮಿದೆ. ಈ ಕಾರ್ಯಾಗಾರದಲ್ಲಿ ನಡೆಯುವ ವಿಷಯಗಳನ್ನು ಪ್ರತಿಯೊಬ್ಬ ಕಾರ್ಯಕರ್ತರು ಸಹಾ ಬೂತ್ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಮತದಾ ರರಿಗೆ ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ ಎಂದರು.
ದೇಶದಲ್ಲಿ 9 ಲಕ್ಷ ಬೂತ್ ಹಾಗೂ 17,756 ಮಂಡಲಗಳ ಕಾರ್ಯಕರ್ತರಿಗೆ ಈ ಪೃಶಿಕ್ಷಣದ ಮೂಲಕ ಪಕ್ಷದ ಧೇಯ ಉದ್ದೇಶಗಳನ್ನು ತಿಳಿಸಲಾಗಿದೆ. ಮಾ. 7 ರಿಂದ ಪ್ರಾರಂಭವಾಗಿರುವ ಈ ಪೃಶಿಕ್ಷಣ ಕಾರ್ಯ ಗಾರಗಳು ಏ.14 ರ ಒಳಗೆ ಪೂರ್ಣವಾಗಬೇಕಿದೆ ಪ್ರತಿ ಜಿಲ್ಲೆಯಲ್ಲಿ 3 ಕಾರ್ಯಗಾರಗಳು ನಡೆಯಬೇಕಿದೆ, ಇದಕ್ಕೆ ಬೇಕಾದ ಸಿದ್ದತೆಯನ್ನು ಸಹಾ ಮಾಡಲಾಗಿದೆ ಎಂದು ಡಾ.ಶಿವಯೋಗಿ ಸ್ವಾಮಿ ತಿಳಿಸಿದರು,
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರು, ರಾಜ್ಯ ಬಿಜೆಪಿ ಕಾರ್ಯದರ್ಶೀ, ಪ್ರಶಿಕ್ಷಣ ವರ್ಗದ ವಿಭಾಗ ಸಂಯೋಜಕರಾಧ ಆರುಣ್, ದಾವಣಗೆರೆ ವಿಭಾಗದ ಪ್ರಭಾರಿ ಗಳಾದ ಮೇಘರಾಜ್, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ರಾಜ್ಯ ಎಸ್.ಟಿ. ಮೋರ್ಚಾದ ಅಧ್ಯಕ್ಷರಾದ ಬಂಗಾರು ಹನುಮಂತು, ವಿಭಾಗದ ಸಹ ಪ್ರಬಾರಿ ಎ.ಮುರಳಿ, ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.
ಶ್ರೀಮತಿ ಮೀನಾಕ್ಷಿ ಭಟ್ ವಂದೇ ಮಾತರಂ ಹಾಡಿದರೆ, ಮೋಹನ್ ಕಾರ್ಯಕ್ರಮ ನಿರೂಪಿಸಿದರು ಪಂಪ್ ವಂದಿಸಿದರು.
