ವೈರಲ್ ಸೋಂಕಗಳ ವಿರುದ್ಧದ ರಕ್ಷಣೆಗಾಗಿ ನಿಮ್ಮ ಆಹಾರದಲ್ಲಿರಲಿ ಈ ಮಸಾಲೆಗಳು

Spices For Viral Infections: ಭಾರತೀಯ ಮಸಾಲೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಖಾದ್ಯಗಳ ರುಚಿಯನ್ನು ಹೆಚ್ಚಿಸಬಲ್ಲ ಈ ಮಸಾಲೆಗಳು ಆರೋಗ್ಯ ವರ್ಧಕವೂ ಹೌದು.

ಆಯುರ್ವೇದ ತಜ್ಞರ ಪ್ರಕಾರ, ಕೆಲವು ಮಸಾಲೆ ಪದಾರ್ಥಗಳನ್ನು ನಮ್ಮ ದಿನ ನಿತ್ಯದ ಆಹಾರದಲ್ಲಿ ಬಳಸುವುದರಿಂದ ವೈರಲ್ ಸೋಂಕುಗಳ ವಿರುದ್ಧ ರಕ್ಷಣೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ. 

ನೀವು ಜ್ವರ, ಶೀತ, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಂತಹ ಸಂದರ್ಭದಲ್ಲಿ ಈ ಕೆಲವು ಮಾಸಲೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. 

ಅಡುಗೆ ಮನೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳಲ್ಲಿ ಉತ್ಕರ್ಷಣ ನಿರೋಧಕ, ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಕಂಡು ಬರುತ್ತವೆ. ಈ ಮಸಾಲೆಗಳನ್ನು ಯಾವುದೇ ಆಯುರ್ವೇದ ಔಷಧಗಳಿಗಿಂತ ಕಡಿಮೆ ಇಲ್ಲ ಎಂದು ಹೇಳಲಾಗುತ್ತದೆ. ಅಂತಹ ಪ್ರಮುಖ ಮಸಾಲೆಗಳೆಂದರೆ… 

ಮಳೆಗಾಲದಲ್ಲಿ, ಚಳಿಗಾಲದಲ್ಲಿ ಕೆಲವರು ಶುಂಠಿ ಚಹಾ ಸೇವಿಸಲು ಬಯಸುತ್ತಾರೆ. ಇದಲ್ಲದೆ, ನೀವು ತಯಾರಿಸುವ ಖಾದ್ಯಗಳಲ್ಲಿಯೂ ಶುಂಠಿ ಬಳಸುವುದರಿಂದ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು. 

ಪುಲಾವ್ ತಯಾರಿಕೆಯಲ್ಲಿ ಪ್ರಮುಖ ಮಸಾಲೆ ಆಗಿರುವ ದಾಲ್ಚಿನ್ನಿಯಲ್ಲಿ ಪಾಲಿಫಿನಾಲ್‌ಗಳು ಮತ್ತು ಪ್ರೊಆಂಥೋಸಯಾನಿಡಿನ್‌ಗಳು ಕಂಡು ಬರುತ್ತವೆ. ಇದರಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಸಮೃದ್ಧವಾಗಿದ್ದು ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. 

ಸಾಮಾನ್ಯವಾಗಿ ಅಜೀರ್ಣ ಸಮಸ್ಯೆಯಿಂದ ಪರಿಹಾರ ಪಡೆಯಲು ಬಳಸಲ್ಪಡುವ ಅಜ್ವೈನ್ ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದಲೂ ಪರಿಹಾರ ನೀಡಬಲ್ಲ ಅತ್ಯುತ್ತಮ ಮಸಾಲೆ ಆಗಿದೆ. 

ಕರಿ ಮೆಣಸಿನಲ್ಲಿ ಉತ್ಕರ್ಷಣ ನಿರೋಧಕಗಳ ಜೊತೆಗೆ, ಕರಿಮೆಣಸು ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳು ಕಂಡು ಬರುತ್ತವೆ. ಇದರಲ್ಲಿರುವ  ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡಬಲ್ಲ ಸಾಮರ್ಥ್ಯವನ್ನು ಹೊಂದಿವೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/photo-gallery/include-these-spices-in-your-diet-for-protection-against-viral-infections-159645/%E0%B2%B6%E0%B3%81%E0%B2%82%E0%B2%A0%E0%B2%BF-159649

Leave a Reply

Your email address will not be published. Required fields are marked *