IND vs AUS: ಅಶ್ವಿನ್​ಗೆ 6 ವಿಕೆಟ್​; ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ

IND vs AUS 4th Test Match Day 2 Highlights Report Scorecard ahmedabad ind vs aus in Kannada

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಮೊದಲ 3 ಟೆಸ್ಟ್ ಪಂದ್ಯಗಳು ಕೇವಲ ಎರಡು ಎರಡೂವರೆ ದಿನಗಳಿಗೆ ಅಂತ್ಯವಾಗಿದ್ದವು. ಹೀಗಾಗಿ ಅಂತಿಮ ಟೆಸ್ಟ್ ಕೂಡ ಇದೇ ರೀತಿಯ ಅಂತ್ಯ ಕಾಣುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಪಡೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಹತ್ತಿರತ್ತಿರ 6 ಸೆಷನ್​ಗಳ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಅಂತಿಮವಾಗಿ 480 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಮೊದಲ ದಿನ ಅದ್ಭುತ ಶತಕ ಸಿಡಿಸಿದ್ದ ಉಸ್ಮಾನ್ ಖವಾಜಾ ದ್ವಿಶತಕ ವಂಚಿತವಾದರೆ, ಕ್ಯಾಮರೂನ್ ಗ್ರೀನ್ ವೃತ್ತಿಜೀವನದ ಮೊದಲ ಶತಕ ಬಾರಿಸಿದರು.

4 ವಿಕೆಟ್‌ಗೆ 255 ರನ್ ಗಳಿಸಿ ಮೊದಲ ದಿನದಾಟ ಮುಗಿಸಿದ್ದ ಆಸೀಸ್ ಇಲ್ಲಿಂದ ತನ್ನ ಎರಡನೇ ದಿನದಾಟ ಆರಂಭಿಸಿತು. ಬಳಿಕ ಎರಡನೇ ದಿನದಾಟದ ಮೂರನೇ ಸೆಷನ್‌ನ ಒಂದೂವರೆ ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ 480 ರನ್‌ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು. ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಉಳಿದ 6 ವಿಕೆಟ್‌ ಕಳೆದುಕೊಂಡ ಆಸ್ಟ್ರೇಲಿಯಾ ತನ್ನ ಖಾತೆಗೆ ಒಟ್ಟು 225 ರನ್ ಸೇರಿಸಿತು. ಅದರಲ್ಲೂ ಆಸೀಸ್ ಕೆಳ ಕ್ರಮಾಂಕ 71 ರನ್ ಸೇರಿಸಿ ಟೀಂ ಇಂಡಿಯಾವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತು. ಇಷ್ಟೆಲ್ಲಾ ಹೋರಾಟದ ನಡುವೆಯೂ ಟೀಂ ಇಂಡಿಯಾ ಪರ ಮಿಂಚಿದ ರವಿಚಂದ್ರನ್ ಅಶ್ವಿನ್ 6 ವಿಕೆಟ್ ಪಡೆದು ಮಿಂಚಿದರು.

source https://tv9kannada.com/sports/cricket-news/ind-vs-aus-4th-test-match-day-2-highlights-report-scorecard-ahmedabad-ind-vs-aus-in-kannada-psr-au14-534208.html

Leave a Reply

Your email address will not be published. Required fields are marked *