IND vs ENG ಮೊದಲ ಟಿ20 ಪಂದ್ಯ ಎಷ್ಟು ಗಂಟೆಗೆ ಶುರು? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

India vs England T20I: ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿ ಬುಧವಾರದಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದರೆ, ಇಂಗ್ಲೆಂಡ್ ತಂಡದ ನಾಯಕರಾಗಿ ಜೋಸ್ ಬಟ್ಲರ್ ಕಾಣಿಸಿಕೊಳ್ಳಲಿದ್ದಾರೆ. ಉಭಯ ತಂಡಗಳಲ್ಲಿ ಬಲಿಷ್ಠ ದಾಂಡಿಗರ ದಂಡೇ ಇದ್ದು, ಹೀಗಾಗಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯು ನಾಳೆಯಿಂದ (ಜ.22) ಆರಂಭವಾಗಲಿದೆ. 5 ಮ್ಯಾಚ್​​ಗಳ ಈ ಸರಣಿಯ ಮೊದಲ ಪಂದ್ಯವು ಕೊಲ್ಕತ್ತಾದಲ್ಲಿ ನಡೆದರೆ, ದ್ವಿತೀಯ ಪಂದ್ಯಕ್ಕೆ ಚೆನ್ನೈ ಆತಿಥ್ಯವಹಿಸಲಿದೆ. ಇನ್ನು ಮೂರನೇ ಪಂದ್ಯವು ರಾಜ್​ಕೋಟ್​ನಲ್ಲಿ ಜರುಗಲಿದ್ದು, ನಾಲ್ಕನೇ ಮ್ಯಾಚ್ ಅನ್ನು ಪುಣೆಯಲ್ಲಿ ಆಡಲಾಗುತ್ತದೆ. ಇನ್ನು ಸರಣಿಯ ಕೊನೆಯ ಮ್ಯಾಚ್​ಗೆ ಮುಂಬೈ ಆತಿಥ್ಯವಹಿಸಲಿದೆ. ಈ ಸರಣಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ…

ಭಾರತ vs ಇಂಗ್ಲೆಂಡ್ ಸರಣಿ ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಸರಣಿಯ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ನಲ್ಲಿ ನೇರ ಪ್ರಸಾರವಾಗಲಿದೆ. ಹಾಗೆಯೇ ಡಿಸ್ನಿ ಹಾಟ್ ಸ್ಟಾರ್ ಆ್ಯಪ್ ಹಾಗೂ ವೆಬ್​ಸೈಟ್​ಗಳಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.

ಭಾರತ vs ಇಂಗ್ಲೆಂಡ್ ಟಿ20 ಪಂದ್ಯ ಎಷ್ಟು ಗಂಟೆಗೆ ಶುರು?

ಐದು  ಪಂದ್ಯಗಳ  ಟಿ20 ಸರಣಿಯ ಎಲ್ಲಾ ಮ್ಯಾಚ್​​ಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಇದಕ್ಕೂ ಮುನ್ನ ರಾತ್ರಿ 6.30 ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಭಾರತ vs ಇಂಗ್ಲೆಂಡ್ ಟಿ20 ಸರಣಿ ವೇಳಾಪಟ್ಟಿ:

ತಂಡಗಳುದಿನಾಂಕಸಮಯಸ್ಥಳ
1ನೇ ಟಿ20, ಭಾರತ vs ಇಂಗ್ಲೆಂಡ್ಬುಧವಾರ, 22 ಜನವರಿ 20257 PMಕೊಲ್ಕತ್ತಾ
2ನೇ ಟಿ20, ಭಾರತ vs ಇಂಗ್ಲೆಂಡ್ಶನಿವಾರ, 25 ಜನವರಿ 20257 PMಚೆನ್ನೈ
3ನೇ ಟಿ20, ಭಾರತ vs ಇಂಗ್ಲೆಂಡ್ಮಂಗಳವಾರ, 28 ಜನವರಿ 20257 PMರಾಜ್​ಕೋಟ್
4ನೇ ಟಿ20, ಭಾರತ vs ಇಂಗ್ಲೆಂಡ್ಶುಕ್ರವಾರ, 31 ಜನವರಿ 20257 PMಪುಣೆ
5ನೇ ಟಿ20, ಭಾರತ vs ಇಂಗ್ಲೆಂಡ್ಭಾನುವಾರ, 2 ಫೆಬ್ರವರಿ 20257 PMಮುಂಬೈ

ಉಭಯ ತಂಡಗಳು:

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪಾನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೇಲ್ (ವಿಕೆಟ್ ಕೀಪರ್).

ಇಂಗ್ಲೆಂಡ್ ಟಿ20 ತಂಡ: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪನಾಯಕ), ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜಾಮಿ ಸ್ಮಿತ್, ಲಿಯಾಮ್ ಲಿವಿಂಗ್​ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

Source: https://tv9kannada.com/sports/cricket-news/india-vs-england-1st-t20i-free-live-streaming-when-and-where-to-watch-zp-967188.html

Leave a Reply

Your email address will not be published. Required fields are marked *