IND vs NZ: ಟಾಸ್ ಗೆದ್ದ ಬಳಿಕ ಏನು ಮಾಡಬೇಕು ಎಂಬುದನ್ನೇ ಮರೆತ ನಾಯಕ ರೋಹಿತ್; ವಿಡಿಯೋ ನೋಡಿ

IND vs NZ 2nd odi Rohit Sharma forgotten what to do after won toss vs newzealand

ಭಾರತ ಮತ್ತು ನ್ಯೂಜಿಲೆಂಡ್ (India Vs New Zealand) ನಡುವಿನ ಎರಡನೇ ಏಕದಿನ ಪಂದ್ಯ ರಾಯ್‌ಪುರದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಆದರೆ ಇದೇ ವೇಳೆ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಏನು ಮಾಡಬೇಕು ಎಂಬುದನ್ನು ಮರೆತ ಘಟನೆಯೂ ನಡೆಯಿತು. ವಾಸ್ತವವಾಗಿ ಟಾಸ್ ಗೆದ್ದ ರೋಹಿತ್, ತಮ್ಮ ನಿರ್ಣಯ ಯಾವುದು ಎಂದು ಹೇಳಲು ಕೆಲ ಹೊತ್ತು ಗೊಂದಲಕ್ಕೀಡಾದರು. ಸ್ವಲ್ಪ ಹೊತ್ತು ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ (Tom Latham) ಮತ್ತು ಕಾಮೆಂಟೇಟರ್ ರವಿಶಾಸ್ತ್ರಿ (Ravi Shastri) ಅವರ ಮುಖವನ್ನು ನೋಡಲಾರಂಭಿಸಿದ ರೋಹಿತ್, ನಂತರ ನಾವು ಮೊದಲು ಬೌಲ್ ಮಾಡುವುದಾಗಿ ಹೇಳಿದರು. ಬಳಿಕ ಟಾಸ್ ಗೆದ್ದ ನಂತರ ನಾನು ಏಕೆ ನನ್ನ ನಿರ್ಧಾರ ತೆಗೆದುಕೊಳ್ಳಲು ಸಮಯ ತೆಗೆದುಕೊಂಡೆ ಎಂಬುದನ್ನು ರೋಹಿತ್ ಬಹಿರಂಗಪಡಿಸಿದ್ದಾರೆ.

ಟಾಸ್​ ಗೆದ್ದ ಬಳಿಕ ಈ ಬಗ್ಗೆ ಮಾತನಾಡಿದ ರೋಹಿತ್​, ತಂಡದಲ್ಲಿ ಟಾಸ್ ಗೆದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಹೀಗಾಗಿ ಒಂದು ನಿಮಿಷ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಮರೆತಿರುವುದಾಗಿ ರೋಹಿತ್ ಹೇಳಿಕೊಂಡಿದ್ದಾರೆ. ಇನ್ನ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್ ಕುರಿತು ಮಾತನಾಡಿದ ನಾಯಕ, ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದಿದ್ದಾರೆ.

ರೋಹಿತ್‌ ನೋಡಿ ನಕ್ಕ ಚಹಾಲ್‌

ಇದೀಗ ಟಾಸ್​ ವೇಳೆ ಗೊಂದಲಕ್ಕೀಡಾದ ರೋಹಿತ್ ಅವರ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದೇ ವೇಳೆ ಮೈದಾನದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದ ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಅವರಿಗೂ ನಗುವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದೇ ವೇಳೆ ರೋಹಿತ್ ಪಜೀತಿಯನ್ನು ನೋಡಿದ ಪ್ರೇಕ್ಷಕರು ಕೂಡ ರೋಹಿತ್​ರನ್ನು ಗಜಿನಿ ಎಂದು ಕರೆಯಲಾರಂಭಿಸಿದರು.
IND vs NZ 2nd ODI: ಇಂದು ದ್ವಿತೀಯ ಏಕದಿನ: ರಾಯ್​ಪುರದಲ್ಲಿ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ

ಭಾರತದ ತಂಡ: ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್

ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲೇಥಮ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-nz-2nd-odi-rohit-sharma-forgotten-what-to-do-after-won-toss-vs-newzealand-psr-au14-505594.html

Leave a Reply

Your email address will not be published. Required fields are marked *