IND vs SL: ಅರ್ಧ ದಿನ ರಜೆ ಘೋಷಣೆ! ಭಾರತ-ಲಂಕಾ ಏಕದಿನ ಪಂದ್ಯಕ್ಕೆ ಅಸ್ಸಾಂ ಸರ್ಕಾರದ ಮಹತ್ವದ ನಿರ್ಧಾರ

IND vs SL assam government declared a half day holiday in guwahati for India Sri Lanka 1st ODI

ಭಾರತ ಮತ್ತು ಶ್ರೀಲಂಕಾ (India Vs Sri Lanka) ನಡುವಿನ 3 ಏಕದಿನ ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಜನವರಿ 10 ರಂದು ಗುವಾಹಟಿಯಲ್ಲಿ ನಡೆಯಲಿದೆ. ಅಸ್ಸಾಂ ಕ್ರಿಕೆಟ್ ಸಂಸ್ಥೆ (Cricket Association of Assam) ಮತ್ತು ಅಲ್ಲಿನ ಸರ್ಕಾರ ಈ ಪಂದ್ಯಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ. ಅಲ್ಲದೆ ಈ ಪಂದ್ಯದ ರೋಚಕತೆಯನ್ನು ಹೆಚ್ಚಿಸುವ ಸಲುವಾಗಿ ಅಸ್ಸಾಂ ಸರ್ಕಾರ (Assam government) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ವಾಸ್ತವವಾಗಿ ಈ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ. ಇದಕ್ಕೂ ಮುನ್ನ 2018ರಲ್ಲಿ ಇಲ್ಲಿ ಮೊದಲ ಏಕದಿನ ಪಂದ್ಯ ನಡೆದಿತ್ತು. 4 ವರ್ಷಗಳ ಬಳಿಕ ಗುವಾಹಟಿಯ ಬರ್ಸಾಪರಾದಲ್ಲಿ ಮತ್ತೆ ಏಕದಿನ ಪಂದ್ಯ ನಡೆಯುತ್ತಿದೆ. ಹೀಗಾಗಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಾವುದೇ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರ, ಪಂದ್ಯದ ದಿನದಂದು ಕಾಮ್ರೂಪ್ ಜಿಲ್ಲೆಯ ಸರ್ಕಾರಿ ಕಛೇರಿ ಹಾಗೂ ಶಾಲಾ ಕಾಲೇಜುಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೂ ಅರ್ಧ ದಿನ ರಜೆ ಘೋಷಣೆ ಮಾಡಿದೆ.

ಜನವರಿ 10 ರಂದು ಅರ್ಧ ದಿನದ ರಜೆ

ದಿ ಗುವಾಹಟಿ ಟೈಮ್ಸ್ ವರದಿ ಪ್ರಕಾರ, ಅಸ್ಸಾಂ ಸರ್ಕಾರವು ಪಂದ್ಯದ ದಿನವಾದ ಜನವರಿ 10 ರಂದು ಅರ್ಧ ದಿನ ರಜೆಯನ್ನು ಘೋಷಿಸಿದೆ. ಆದರೆ, ಬರ್ಸಾಪರಾ ಸ್ಟೇಡಿಯಂ ಇರುವ ಕಾಮ್ರೂಪ್ ಜಿಲ್ಲೆಗೆ ಮಾತ್ರ ಈ ರಜೆ ಅನ್ವಯವಾಗಲಿದೆ. ಕಾಮ್ರೂಪ್ ಜಿಲ್ಲೆಯಲ್ಲಿ ಪಂದ್ಯದ ದಿನದಂದು ಮಧ್ಯಾಹ್ನ 1 ಗಂಟೆಯ ನಂತರ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಕೆಲಸದ ಸ್ಥಳಗಳನ್ನು ಮುಚ್ಚಲಾಗುತ್ತದೆ.

IND vs SL, 1st ODI, LIVE Streaming: ಗುವಾಹಟಿಯಲ್ಲಿ ಮೊದಲ ಏಕದಿನ ಪಂದ್ಯ; ಯಾವ ಚಾನೆಲ್​ನಲ್ಲಿ ಎಷ್ಟು ಗಂಟೆಗೆ ಆರಂಭ?

ಸಿದ್ಧತೆಗಳ ಪರಿಶೀಲನೆ ನಡೆಸಿದ ಸಿಎಂ

ಅರ್ಧ ದಿನದ ರಜೆ ಘೋಷಿಸುವ ಮುನ್ನ ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಅವರು ಬರ್ಸಾಪರಾ ಕ್ರೀಡಾಂಗಣವನ್ನು ಖುದ್ದು ಪರಿಶೀಲನೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದರು. ಸಂಪೂರ್ಣ ವ್ಯವಸ್ಥೆ ಕುರಿತು ಅವರು ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತನಾಡಿದರು. ಇದಕ್ಕೂ ಮುನ್ನ, ಜನವರಿ 7 ರಂದು ಗುವಾಹಟಿ ಪೊಲೀಸರು ಪಂದ್ಯದ ದಿನದ ಸಂಚಾರ ನಿಯಮಗಳ ಬಗ್ಗೆ ವಿಶೇಷ ಮಾರ್ಗಸೂಚಿಯನ್ನು ಸಹ ಹೊರಡಿಸಿದ್ದಾರೆ.

ರೋಹಿತ್ ಮತ್ತು ಕೊಹ್ಲಿಯ ಬೃಹತ್ ಪೋಸ್ಟರ್‌

ಇನ್ನು ಭಾರತ-ಶ್ರೀಲಂಕಾ ನಡುವಿನ ಏಕದಿನ ಪಂದ್ಯಕ್ಕೆ ಮತ್ತಷ್ಟು ರೋಚಕತೆ ಹೆಚ್ಚಿಸಲು ಅಲ್ಲಿನ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಬೃಹತ್ ಪೋಸ್ಟರ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ಮೈದಾನದ ಸುತ್ತಮುತ್ತ ಹಾಕಿದ್ದಾರೆ. ಇದಕ್ಕೆ ಕಾರಣವೂ ಇದ್ದು, ಇಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ ಮತ್ತು ವಿರಾಟ್ ಶತಕ ಸಿಡಿಸಿದ್ದರು. ಈ ಬಾರಿ ರೋಹಿತ್-ವಿರಾಟ್ ಹೊರತಾಗಿ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾದುಕುಳಿತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-sl-assam-government-declared-a-half-day-holiday-in-guwahati-for-india-sri-lanka-1st-odi-psr-au14-497949.html

Leave a Reply

Your email address will not be published. Required fields are marked *