IND vs WI, Cricket News in Kannada: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಮಾಡಿದ ಆ ತಪ್ಪಿನಿಂದಾಗಿ ಭಾರತ ಗೆಲ್ಲುವ ಪಂದ್ಯವನ್ನು ಕೂಡ ಸೋಲಬೇಕಾಯಿತು.

IND vs WI, 1st T20: ವೆಸ್ಟ್ ಇಂಡೀಸ್ ವಿರುದ್ಧ ಗುರುವಾರ ನಡೆದ ಮೊದಲ T20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ 4 ರನ್’ಗಳ ಅಂತರದ ಸೋಲು ಕಂಡಿದೆ. ಐದು ಪಂದ್ಯಗಳ ಈ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ವಿರುದ್ಧ ವೆಸ್ಟ್ ಇಂಡೀಸ್ 0-1 ಅಂತರದ ಮುನ್ನಡೆ ಸಾಧಿಸಿದೆ.
ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಮಾಡಿದ ಆ ತಪ್ಪಿನಿಂದಾಗಿ ಭಾರತ ಗೆಲ್ಲುವ ಪಂದ್ಯವನ್ನು ಕೂಡ ಸೋಲಬೇಕಾಯಿತು ಎಂದು ಹೇಳಲಾಗುತ್ತದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಒಂದು ತಪ್ಪು ಮಾಡಿದ್ದಾರೆ. ತಂಡದಲ್ಲಿ ತಮ್ಮ ಬೌಲರ್ ಗಳನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಯುಜ್ವೇಂದ್ರ ಚಹಾಲ್ ಉತ್ತಮ ಫಾರ್ಮ್ ನಲ್ಲಿ ಕಂಡುಬಂದಿದ್ದಲ್ಲದೆ, ತಮ್ಮ ಮೊದಲ ಓವರ್ ನಲ್ಲಿಯೇ 2 ವಿಕೆಟ್ ಪಡೆದಿದ್ದರು.
ಯುಜ್ವೇಂದ್ರ ಚಹಾಲ್ ತನ್ನ ಕೋಟಾದ ಪೂರ್ಣ 4 ಓವರ್ ಗಳನ್ನು ಬೌಲ್ ಮಾಡಿದ್ದರೆ, ವೆಸ್ಟ್ ಇಂಡೀಸ್ ಸ್ಕೋರ್ 149 ರನ್ ತಲುಪುತ್ತಿರಲಿಲ್ಲ ಮತ್ತು ಟೀಮ್ ಇಂಡಿಯಾ 4 ರನ್ ಗಳಿಂದ ಪಂದ್ಯವನ್ನು ಕಳೆದುಕೊಳ್ಳುತ್ತಿರಲಿಲ್ಲ. ಜೇಸನ್ ಹೋಲ್ಡರ್ ನೇತೃತ್ವದ ವೆಸ್ಟ್ ಇಂಡೀಸ್ ಬೌಲರ್ ಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ಭಾರತವನ್ನು ನಾಲ್ಕು ರನ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ವೆಸ್ಟ್ ಇಂಡೀಸ್ ನೀಡಿದ 150 ರನ್ ಗುರಿ ಬೆನ್ನಟ್ಟಿದ ಭಾರತ ತಂಡ ಹೋಲ್ಡರ್ (2 ವಿಕೆಟ್), ಓಬೆಡ್ ಮೆಕಾಯ್ (2 ವಿಕೆಟ್) ಮತ್ತು ರೊಮಾರಿಯೊ ಶೆಪರ್ಡ್ (2 ವಿಕೆಟ್) ಅವರ ತೀಕ್ಷ್ಣ ಬೌಲಿಂಗ್ ಮುಂದೆ 9 ವಿಕೆಟ್’ಗೆ 145 ರನ್ ಗಳಿಸಲಷ್ಟೇ ಶಕ್ತವಾಯಿತು.
ತಿಲಕ್ ವರ್ಮಾ ಗರಿಷ್ಠ ರನ್!
ಭಾರತ ಪರ ಪದಾರ್ಪಣೆ ಮಾಡಿದ ತಿಲಕ್ ವರ್ಮಾ ಗರಿಷ್ಠ 39 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ (21) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (19) ಉತ್ತಮ ಆರಂಭದ ಲಾಭ ಪಡೆಯಲು ವಿಫಲರಾದರು. ನಾಯಕ ರೋವ್ಮನ್ ಪೊವೆಲ್ (32 ಎಸೆತಗಳಲ್ಲಿ 48 ರನ್, ಮೂರು ಬೌಂಡರಿ, 3 ಸಿಕ್ಸರ್) ಮತ್ತು ನಿಕೋಲಸ್ ಪೂರನ್ (34 ಎಸೆತಗಳಲ್ಲಿ 41 ರನ್, ಎರಡು ಬೌಂಡರಿ, 2 ಸಿಕ್ಸರ್) ಅವರ ಉತ್ತಮ ಇನ್ನಿಂಗ್ಸ್’ನಿಂದ ವೆಸ್ಟ್ ಇಂಡೀಸ್ ಆರು ವಿಕೆಟ್’ಗೆ 149 ರನ್ ಗಳಿಸಿತು. ಇವರಿಬ್ಬರೂ ನಾಲ್ಕನೇ ವಿಕೆಟ್’ಗೆ 38 ರನ್ ಸೇರಿಸಿದರು. ಪೊವೆಲ್ ಅವರು ಶಿಮ್ರಾನ್ ಹೆಟ್ಮೆಯರ್ (10) ಅವರೊಂದಿಗೆ ಐದನೇ ವಿಕೆಟ್’ಗೆ 38 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.