ಭಾರತ–ಆಸ್ಟ್ರೇಲಿಯಾ 4ನೇ ಟಿ20 ನಿರ್ಣಾಯಕ ಹೋರಾಟ : ಬಲಿಷ್ಠ ಪ್ಲೇಯಿಂಗ್ 11 !

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟಿ20 ಪಂದ್ಯ (ನ.6) ನಡೆಯಲಿದೆ. ಗೋಲ್ಡ್​ ಕೋಸ್ಟ್​ನ ಬಿಲ್ ಪಿಪ್ಪನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಏಕೆಂದರೆ ಈ ಮ್ಯಾಚ್ ಭಾರತದ ಪಾಲಿಗೆ ನಿರ್ಣಾಯಕ.

ಅಂದರೆ ಐದು ಪಂದ್ಯಗಳ ಸರಣಿಯ ಮೊದಲ ಮ್ಯಾಚ್​ ರದ್ದಾಗಿರುವ ಕಾರಣ ಇದೀಗ ಉಭಯ ತಂಡಗಳು ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದೆ. ಇದೀಗ ನಾಲ್ಕನೇ ಮ್ಯಾಚ್​ನಲ್ಲಿ ಗೆದ್ದರೆ ಸರಣಿ ಸೋಲನ್ನು ತಪ್ಪಿಸಿಕೊಳ್ಳಬಹುದು. ಅಲ್ಲದೆ ಕೊನೆಯ ಪಂದ್ಯದಲ್ಲಿ ಜಯಗಳಿಸಿ ಸರಣಿಯನ್ನು ಜಯಿಸಬಹುದು. ಹೀಗಾಗಿ ನಾಳಿನ ಪಂದ್ಯವು ಉಭಯ ತಂಡಗಳ ಪಾಲಿಗೆ ಸರಣಿ ನಿರ್ಣಾಯಕವಾಗಿದೆ.


ಈ ನಿರ್ಣಾಯಕ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಕಳೆದ ಮ್ಯಾಚ್​ನಲ್ಲಿ ಕಣಕ್ಕಿಳಿದ ಬಳಗವನ್ನೇ ಮತ್ತೆ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಹೋಬಾರ್ಟ್​ನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್​ಗಳ ಜಯ ಸಾಧಿಸಿತ್ತು. ಹೀಗಾಗಿ ಇದೇ ಬಳಗವನ್ನೇ ಗೋಲ್ಡ್​ ಕೋಸ್ಟ್​ನಲ್ಲೂ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.


ಇದರಿಂದಾಗಿ 4ನೇ ಟಿ20 ಪಂದ್ಯದಿಂದ ಸಂಜು ಸ್ಯಾಮ್ಸನ್ ಹಾಗೂ ಹರ್ಷಿತ್ ರಾಣಾ ಹೊರಗುಳಿಯಬೇಕಾಗಿ ಬರಬಹುದು. ಏಕೆಂದರೆ ಈ ಇಬ್ಬರನ್ನು 3ನೇ ಟಿ20 ಪಂದ್ಯದಿಂದ ಹೊರಗಿಡಲಾಗಿತ್ತು. ಇವರ ಬದಲಿಗೆ ಜಿತೇಶ್ ಶರ್ಮಾ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ಕಣಕ್ಕಿಳಿಸಲಾಗಿತ್ತು. ಇವರನ್ನೇ 4ನೇ ಟಿ20 ಪಂದ್ಯದಲ್ಲೂ ಮುಂದುವರೆಸುವ ಸಾಧ್ಯತೆ ಹೆಚ್ಚು. ಅದರಂತೆ  ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…


ಭಾರತ ಪ್ಲೇಯಿಂಗ್ 11: ಶುಭ್​​ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್) ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್.


ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ್ ರಾಣಾ.

Views: 16

Leave a Reply

Your email address will not be published. Required fields are marked *