Sports News: ಈಡನ್ ಗಾರ್ಡನ್‌ನ ಪಿಚ್ ಬ್ಯಾಟರ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಟಕೀಯ ತಿರುವುಗಳು ಎರಡನೇ ದಿನವೇ ಸಾಕಷ್ಟು ಕಂಡುಬಂದವು. ಎರಡನೇ ದಿನ 15 ವಿಕೆಟ್‌ಗಳು ಪತನಗೊಂಡಿದ್ದು, ಪಂದ್ಯ ಮೂರನೇ ದಿನದೊಳಗೆ ಅಂತ್ಯಗೊಳ್ಳುವ ಸಾಧ್ಯತೆ ಸ್ಪಷ್ಟವಾಗಿದೆ.
ದಕ್ಷಿಣ ಆಫ್ರಿಕಾದ 159 ರನ್‌ಗಳಿಗೆ ಭಾರತ 189 ರನ್ ಗಳಿಸಿ 30 ರನ್‌ಗಳ ಮುನ್ನಡೆ ಸಾಧಿಸಿತು. ದಿನಾಂತ್ಯಕ್ಕೆ ಪ್ರವಾಸಿ ತಂಡ 7 ವಿಕೆಟ್‌ಗೆ 93 ರನ್ ಗಳಿಸಿ ಕೇವಲ 63 ರನ್‌ಗಳ ಮುನ್ನಡೆ ಹೊಂದಿ ಸಂಕಷ್ಟದಲ್ಲಿತ್ತು. ಪಿಚ್‌ನ ಅನಿಶ್ಚಿತ ಬೌನ್ಸ್ ಹಾಗೂ ತೀವ್ರ ಟರ್ನ್ ಬ್ಯಾಟರ್‌ಗಳಿಗೆ ಒಗಟಾಗಿ ಪರಿಣಮಿಸಿತು.
ಭಾರತದ ಪರ ಆಲ್‌ರೌಂಡರ್ ರವೀಂದ್ರ ಜಡೇಜ ಪ್ರಮುಖ ಪಾತ್ರ ವಹಿಸಿದರು. 27 ರನ್‌ಗಳ ಅಮೂಲ್ಯ ಬ್ಯಾಟಿಂಗ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 13 ಓವರ್ ನಲ್ಲಿ 4/29 ಬೌಲಿಂಗ್ ಮಾಡಿ ಪಂದ್ಯ ಭಾರತ ಕಡೆ ವಾಲುವಂತೆ ಮಾಡಿದರು. ಕೆ.ಎಲ್. ರಾಹುಲ್ (39) ಮತ್ತು ವಾಷಿಂಗ್ಟನ್ ಸುಂದರ್ (29) ಅವರು ಮುಂಜಾನೆ ಉತ್ತಮ ಜೊತೆಯಾಟ ನೀಡಿದರೂ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು.
ದಕ್ಷಿಣ ಆಫ್ರಿಕಾ ಪರ ಸಿಮೋನ್ ಹಾರ್ಮರ್ (4/30) ಅಪರೂಪದ ಸ್ಪೆಲ್‌ಬೌಲಿಂಗ್ ಮಾಡಿ ಭಾರತವನ್ನು ಕಡಿಮೆ ಮೊತ್ತಕ್ಕೆ ತಳ್ಳುವಲ್ಲಿ ನೆರವಾದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜ ದಾಳಿಗೆ ಹರಿಣಗಳ ಬಳಗ ಮತ್ತೊಮ್ಮೆ ಕುಸಿಯಿತು. ನಾಯಕ ತೆಂಬಾ ಬವುಮಾ ಅಜೇಯ 29 ರನ್‌ಗಳೊಂದಿಗೆ ಹೋರಾಟ ಮುಂದುವರೆಸಿದ್ದು, ಪ್ರವಾಸಿ ತಂಡ ಕನಿಷ್ಠ 100+ ಗುರಿಯನ್ನಾಗಲಿ ಭಾರತಕ್ಕೆ ನೀಡುವ ಆಶೆಯಲ್ಲಿದೆ.
ಪಂದ್ಯದ ಗತಿಯನ್ನೋಡಿದರೆ, ಮೂರನೇ ದಿನವೇ ಫಲಿತಾಂಶ ನಿರ್ಣಾಯಕವಾಗುವ ಸಾಧ್ಯತೆ ಜೋರಾಗಿದೆ.
Views: 14