India Squad for WI: ವಡಸ ವರದಧದ ಟ20 ಸರಣಗ ಐಪಎಲನ ಈ 5 ಸಟರ ಪಲಯರಸ ಆಯಕ ಖಚತ

ಭಾರತ ಕ್ರಿಕೆಟ್ ತಂಡ ಸದ್ಯ ವಿಶ್ರಾಂತಿಯಲ್ಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಸೋಲುಂಡ ಬಳಿಕ ತವರಿಗೆ ಮರಳಿರುವ ಟೀಮ್ ಇಂಡಿಯಾ ಆಟಗಾರರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಭಾರತ ತನ್ನ ಮುಂದಿನ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಲಿರುವ ಟೀಮ್ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಜೂನ್ 27ಕ್ಕೆ ಈ ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ. ಇದರಲ್ಲಿ ಟಿ20 ಸರಣಿಗೆ ಐಪಿಎಲ್ 2023 ರಲ್ಲಿ ಮಿಂಚಿದ ಆಟಗಾರರು ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.ಯಶಸ್ವಿ ಜೈಸ್ವಾಲ್: ಐಪಿಎಲ್ 2023 ರಲ್ಲಿ ಆರೆಂಜ್ ಕ್ಯಾಪ್ ಹತ್ತಿರವಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗುವುದು ಬಹುತೇಕ ಖಚಿತ. ಇವರು ಈ ಬಾರಿಯ ಐಪಿಎಲ್​ನಲ್ಲಿ ಆಡಿದ 14 ಪಂದ್ಯಗಳಲ್ಲಿ 625 ರನ್ ಸಿಡಿಸಿದ್ದರು. ಒಂದು ಶತಕ ಕೂಡ ಬಂದಿದೆ.ರಿಂಕು ಸಿಂಗ್: ಈ ಬಾರಿಯ ಐಪಿಎಲ್​ನಲ್ಲಿ ಕ್ರಿಕೆಟ್ ಪಂಡಿತರ ಲೆಕ್ಕಚಾರವನ್ನೇ ತಲೆಕೆಳಗಾಗಿಸಿದ್ದು ರಿಂಕು ಸಿಂಗ್. 20ನೇ ಓವರ್​ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಕೆಕೆಆರ್ ತಂಡಕ್ಕೆ ಜಯ ತಂದುಕೊಟ್ಟ ರಿಂಕುಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಬೇಕು ಎಂಬ ಕೂಗು ಕೂಡ ಜೋರಾಗಿದೆ. ಹೀಗಾಗಿ ಇವರು ಫಿನಿಶರ್ ಜವಾಬ್ದಾರಿ ಹೊರುವ ಸಾಧ್ಯತೆ ಇದೆ.ಮೋಹಿತ್ ಶರ್ಮಾ: ಐಪಿಎಲ್ 2023 ರಲ್ಲಿ ಸದ್ದಿಲ್ಲದೆ ಭರ್ಜರಿ ಕಮ್​ಬ್ಯಾಕ್ ಮಾಡಿದ ಪ್ಲೇಯರ್ ಮೋಹಿತ್ ಶರ್ಮಾ. ಜಿಟಿ ತಂಡದ ಪರ ವಿಕೆಟ್ ಟೇಕರ್ ಬೌಲರ್ ಆಗಿ ಕಾಣಿಸಿಕೊಂಡ ಇವರು 14 ಪಂದ್ಯಗಳಿಂದ 27 ವಿಕೆಟ್ ಕಬಳಿಸಿದ್ದರು.ವರುಣ್ ಚಕ್ರವರ್ತಿ: ಐಪಿಎಲ್ 2023 ರಲ್ಲಿ ಇಂಜುರಿಯಿಂದ ಭರ್ಜರಿ ಆಗಿ ಕಮ್​ಬ್ಯಾಕ್ ಮಾಡಿರುವ ವರುಣ್ ಚಕ್ರವರ್ತಿ 14 ಪಂದ್ಯಗಳಿಂದ 20 ವಿಕೆಟ್ ಕಿತ್ತಿದ್ದರು. ಈ ಮಿಸ್ಟ್ರಿ ಸ್ಪಿನ್ನರ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗಬಹುದು.ತುಷಾರ್ ದೇಶಪಾಂಡೆ: ಧೋನಿ ಗರಡಿಯಲ್ಲಿ ಬೆಳೆದ ತುಷಾರ್ ದೇಶಪಾಂಡೆ ಈ ಬಾರಿಯ ಐಪಿಎಲ್​ನಲ್ಲಿ ಎಲ್ಲರ ಮೋಡಿ ಮಾಡಿದ್ದರು. 16 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದ ಇವರು ಮಧ್ಯಮ ಓವರ್​ನಲ್ಲಿ ವಿಕೆಟ್ ಟೇಕಿಂಗ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು.

source https://tv9kannada.com/photo-gallery/cricket-photos/bcci-can-look-at-these-five-players-and-include-indian-squad-for-west-indies-series-vb-604294.html

Leave a Reply

Your email address will not be published. Required fields are marked *