ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಮಂಗಳವಾರ ತಿರುವನಂತಪುರದಲ್ಲಿ ನಡೆಯಲಿದೆ. ಈಗಾಗಲೇ ಸರಣಿಯನ್ನು ತನ್ನ ವಶಕ್ಕೆ ಪಡೆದಿರುವ ಭಾರತ ಮಹಿಳಾ ತಂಡ, ಐದನೇ ಪಂದ್ಯವನ್ನು ಗೆದ್ದು ಶ್ರೀಲಂಕಾವನ್ನು 5–0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಇದು ಭಾರತೀಯ ಮಹಿಳಾ ತಂಡದ ಈ ವರ್ಷದ ಕೊನೆಯ ಪಂದ್ಯವಾಗಿರುವುದರಿಂದ, ವರ್ಷವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸುವ ಉತ್ಸಾಹದಲ್ಲಿದೆ.
ಇತ್ತ ಶ್ರೀಲಂಕಾ ಮಹಿಳಾ ತಂಡ, ಸರಣಿಯ ಕೊನೆಯ ಪಂದ್ಯವನ್ನಾದರೂ ಗೆದ್ದು ಗೌರವಯುತ ಅಂತ್ಯ ಕಂಡುಕೊಳ್ಳುವ ಆಶಯ ಹೊಂದಿದೆ. ಸರಣಿಯ ಆರಂಭದಿಂದಲೂ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಪ್ರಾಬಲ್ಯ ಮೆರೆದಿದ್ದು, ಯುವ ಆಟಗಾರ್ತಿಯರ ಪ್ರದರ್ಶನವೂ ತಂಡದ ಶಕ್ತಿಯನ್ನ ಹೆಚ್ಚಿಸಿದೆ.
ವಿಶ್ವಕಪ್ ತಯಾರಿಗೆ ಮಹತ್ವದ ಸರಣಿ
ಭಾರತ–ಶ್ರೀಲಂಕಾ ನಡುವಿನ ಈ ಟಿ20 ಸರಣಿ, ಮುಂದಿನ ವರ್ಷ ಜೂನ್–ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಸಿದ್ಧತೆಯ ಪ್ರಮುಖ ಭಾಗವಾಗಿದೆ. ಈ ಸರಣಿಯ ಬಳಿಕ ಭಾರತ ಮಹಿಳಾ ತಂಡವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ತಲಾ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಪ್ರತಿಯೊಂದು ಪಂದ್ಯವೂ ಆಟಗಾರ್ತಿಯರ ಫಾರ್ಮ್ ಮತ್ತು ಸಂಯೋಜನೆ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಪಂದ್ಯದ ವಿವರಗಳು
ಪಂದ್ಯ: ಭಾರತ ಮಹಿಳಾ ತಂಡ vs ಶ್ರೀಲಂಕಾ ಮಹಿಳಾ ತಂಡ – ಐದನೇ ಟಿ20
ದಿನಾಂಕ: ಡಿಸೆಂಬರ್ 30
ಸ್ಥಳ: ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣ
ಸಮಯ: ಸಂಜೆ 7:00 ಗಂಟೆಗೆ ಪಂದ್ಯ ಆರಂಭ, ಟಾಸ್ ಸಂಜೆ 6:30ಕ್ಕೆ
ನೇರ ಪ್ರಸಾರ ಮಾಹಿತಿ
ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನಲ್ಲಿ ನೇರ ಪ್ರಸಾರವಾಗಿ ವೀಕ್ಷಿಸಬಹುದು. ಮೊಬೈಲ್ ಮತ್ತು ಡಿಜಿಟಲ್ ವೀಕ್ಷಕರಿಗಾಗಿ ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.
ತಂಡಗಳುಭಾರತ ಮಹಿಳಾ ತಂಡ:
ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮಂಜೋತ್ ಕೌರ್, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ರೇಣುಕಾ ಸಿಂಗ್ ಠಾಕೂರ್, ಶ್ರೀ ಚರಣಿ, ಜಿ ಕಮಲಿನಿ, ಹರ್ಲೀನ್ ಡಿಯೋಲ್, ಅರುಂಧಾ ರೆಡ್ಡಿ, ಸ್ನೇಹ್ ರೆಡ್ಡಿ.
ಶ್ರೀಲಂಕಾ ಮಹಿಳಾ ತಂಡ:
ಚಾಮರಿ ಅಟಪಟ್ಟು (ನಾಯಕಿ), ಹಾಸಿನಿ ಪೆರೇರಾ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ನೀಲಾಕ್ಷಿಕಾ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಇಮೇಶಾ ದುಲಾನಿ, ಕೌಶಿನಿ ನುತ್ಯಾಂಗನಾ, ಮಲ್ಶಾ ಶೆಹಾನಿ, ಇನೋಕಾ ರಣವೀರ, ಶಶಿನಿ ಗಿಮ್ಹಾನಿ, ನಿಮೇಶ್ ಮದುಶಾನಿ, ಕಾವ್ಯಾ ಕವಿಂದಿ, ರಶ್ಮಿಕಾ ಸೆವ್ವಂದಿ, ಮಾಲ್ಕಿ ಮಾದರ.
ಒಟ್ಟಿನಲ್ಲಿ, ಕ್ಲೀನ್ ಸ್ವೀಪ್ ಸಾಧಿಸಿ ವಿಶ್ವಕಪ್‌ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಉದ್ದೇಶದಲ್ಲಿ ಭಾರತ ಮಹಿಳಾ ತಂಡ ಕಣಕ್ಕಿಳಿಯಲಿದ್ದು, ಗೌರವಕ್ಕಾಗಿ ಹೋರಾಡುವ ಶ್ರೀಲಂಕಾ ತಂಡದೊಂದಿಗೆ ರೋಚಕ ಪಂದ್ಯ ನಿರೀಕ್ಷಿಸಲಾಗಿದೆ.
Views: 12