
ಗುವಹಾಟಿ: ರವಿವಾರ ಕೊನೆಗೊಂಡ 3-ಪಂದ್ಯಗಳ ಟಿ20ಐ ಸರಣಿಯಲ್ಲಿ (T20I Series) ಪ್ರವಾಸಿ ಶ್ರೀಲಂಕಾ (Sri Lanka) ತಂಡವನ್ನು 2-1 ಅಂತರದ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಮ್ ಇಂಡಿಯಾ ಅದೇ ಗೆಲುವಿನ ಉತ್ಸಾಹ ಮತ್ತು ಹುಮ್ಮಸ್ಸಿನೊಂದಿಗೆ ಇಂದಿನಿಂದ ಗುವಾಹಾಟಿಯಲ್ಲಿ (Guwahati) ಆರಂಭವಾಗಲಿರುವ ಒಂದುದಿನದ ಪಂದ್ಯಗಳ ಸರಣಿಯಲ್ಲಿ ದ್ವೀಪರಾಷ್ಟ್ರದೊಂದಿಗೆ ಸೆಣಸಲಿದೆ. ಟಿ20 ಸರಣಿಯಲ್ಲಿ ಆಡದ ಭಾರತದ ಪ್ರಮುಖ ಆಟಗಾರರಾದ ರೋಹಿತ್ ಶರ್ಮ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ವಾಪಸ್ಸಾಗಿದ್ದು ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದೆ. ಆದರೆ ಈ 50-ಓವರ್ ಪಂದ್ಯಗಳ ಸರಣಿಗೆ ವಾಪಸ್ಸಾಗುವರೆಂದು ನಿರೀಕ್ಷಿಸಲಾಗಿದ್ದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಕಾರಣ ಆಡದಿರಲು ನಿರ್ಧರಿಸಿದ್ದಾರೆ.
ಪಂದ್ಯಕ್ಕೆ ಮುನ್ನ ನಡೆದ ಸುದ್ದಿಗೋಷ್ಟಿಯಲ್ಲಿ ನಾಯಕ ಮತ್ತು ಓಪನಿಂಗ್ ಬ್ಯಾಟ್ ರೋಹಿತ್ ಶರ್ಮ ಅವರು ತನ್ನೊಂದಿಗೆ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಿರುವದರಿಂದ ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ದ ಅಮೋಘ ದ್ವಿಶತಕ ಬಾರಿಸಿದ್ದ ಸ್ಫೋಟಕ ಓಪನರ್ ಇಶಾಂತ್ ಕಿಶನ್ ಆಡುವ ಎಲೆವೆನ್ ನಿಂದ ಹೊರಗುಳಿಯಲಿದ್ದಾರೆ. ಕಿಶನ್ ಅನುಪಸ್ಥಿತಿಯಲ್ಲಿ ರಾಹುಲ್ ವಿಕೆಟ್ ಹಿಂದಿನ ಕಾರ್ಯ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: Kambala 2023: ಕರಾವಳಿ ಭಾಗದ ಜನಪ್ರೀಯ ಕ್ರೀಡೆ ಕಂಬಳ 2022-23 ಏಪ್ರಿಲ್ ವರೆಗೆ ನಿಗದಿಪಡಿಸಲಾಗಿದೆ
ಕೇವಲ ಎರಡು ದಿನಗಳ ಹಿಂದೆ ಲಂಕಾ ವಿರುದ್ಧ ನಡೆದ ಮೂರನೇ ಟಿ20ಐ ಪಂದ್ಯದಲ್ಲಿ ಬಿರುಗಳಿ ವೇಗದ ಶತಕ ಬಾರಿಸಿ ಭಾರತದ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸೂರ್ಯಕುಮಾರ ಯಾದವ್ ಗೂ ಬೆಂಚ್ ಮೇಲೆ ಕೂರುವ ಅನಿವಾರ್ಯತೆ ಎದುರಾಗಲಿದೆ. ಅವರು ತಮ್ಮ ಅವಕಾಶಕ್ಕಾಗಿ ಕಾಯದೆ ವಿಧಿಯಿಲ್ಲ. ಯಾಕೆಂದರೆ ಕಳೆದ ವರ್ಷ ನಡೆದ ಒಂದು ದಿನದ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಾ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಲಿರುವ ಮೊದಲ ಒಡಿಐ ಲೈವ್ ಸ್ಟ್ರೀಮಿಂಗ್ ವಿವರಗಳು ಇಂತಿವೆ:
ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಒಡಿಐ ಪಂದ್ಯ ಎಂದು ನಡೆಯಲಿದೆ?
ಎರಡು ರಾಷ್ಟ್ರಗಳ ನಡುವೆ ಒಡಿಐ ಸರಣಿಯ ಮೊದಲ ಪಂದ್ಯ ಜನೆವರಿ 10ರಂದು (ಮಂಗಳವಾರ) ನಡೆಯಲಿದೆ.
ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಒಡಿಐ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಒಡಿಐ ಪಂದ್ಯ ಗುವಾಹಾಟಿ ನಗರದ ಬರ್ಸಾಪಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಒಡಿಐ ಪಂದ್ಯ ಯಾವ ಸಮಯಕ್ಕೆ ಆರಂಭವಾಗುತ್ತದೆ?
ಮೊದಲ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ 1: 30ಕ್ಕೆ ಆರಂಭವಾಗುತ್ತದೆ. ಟಾಸ್ ಪಂದ್ಯ ಶುರುವಾಗುವ ಅರ್ಧಗಂಟೆ ಮುಂಚೆ ಅಂದರೆ 1:00 ಗಂಟೆಗೆ ಹಾಕಲಾಗುತ್ತದೆ.
ಯಾವ ಟಿವಿ ಚ್ಯಾನೆಲ್ ಗಳು ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಲಿರುವ ಮೊದಲ ಒಡಿಐ ಪಂದ್ಯವನ್ನು ಪ್ರಸಾರ ಮಾಡಲಿವೆ?
ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಒಡಿಐ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ (ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ಹೆಚ್ ಡಿ ಚ್ಯಾನೆಲ್ ಗಳು) ನೇರಪ್ರಸಾರ ಮಾಡಲಿವೆ.
ಇದನ್ನೂಓದಿ: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಖರೀದಿಸಿದ ಸ್ಪೋರ್ಟ್ಸ್ ಕಾರಿನ ಬೆಲೆ ಕೇಳಿದ್ರೆ ದಂಗಾಗ್ತೀರಾ..!
ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಒಡಿಐ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಒಡಿಐ ಪಂದ್ಯದ ಲೈವ್ ಸ್ಟ್ರೀಮಿಂಗ್ ಹಾಟ್ ಸ್ಟಾರ್ ಌಪ್ ನಲ್ಲಿ ಲಭ್ಯವಿದೆ. ಟಿವಿ9 ಡಿಜಿಟಲ್ ನಲ್ಲೂ ನೀವು ಸ್ಕೋರ್ ಅಪ್ಡೇಟ್ ಮತ್ತು ಪ್ರತಿ ಎಸೆತದ ವಿವರಣೆಯನ್ನು ವೀಕ್ಷಿಸಬಹುದು.
ಹೆಚ್ಚಿನ ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ