ಪ್ರಸ್ತುತ ಭಾರತ ಮಹಿಳಾ ತಂಡ ಐದು ಪಂದ್ಯಗಳ ಟಿ20 ಸರಣಿಗಾಗಿ ಇಂಗ್ಲೆಂಡ್ (India Women vs England Women) ಪ್ರವಾಸದಲ್ಲಿದೆ. ಈಗಾಗಲೇ ಉಭಯ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 97 ರನ್ಗಳ ಭಾರಿ ಜಯ ಸಾಧಿಸಿದೆ. ಖಾಯಂ ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಸ್ಮೃತಿ ಮಂಧಾನ (Smriti Mandhana) ಭರ್ಜರಿ ಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದೀಗ ಜುಲೈ 1 ರಂದು ನಡೆಯಲ್ಲಿರುವ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಪ್ರಯತ್ನಿಸಲಿದೆ. ಇತ್ತ, ತವರಿನಲ್ಲಿ ಮುಜುಗರದ ಸೋಲಿಗೆ ಕೊರಳೊಡ್ಡಿರುವ ಇಂಗ್ಲೆಂಡ್ ತಂಡ ಕೂಡ ಮೊದಲ ಪಂದ್ಯದ ಸೋಲಿಗೆ ಸೇರಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.
ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ಪ್ರದರ್ಶನ ನೀಡಿತ್ತು. ಬ್ಯಾಟಿಂಗ್ನಲ್ಲಿ ಮೂವರನ್ನು ಬಿಟ್ಟರೆ ಉಳಿದವರಿಂದ ಹೆಚ್ಚಿನ ಕೊಡುಗೆ ಸಿಗಲಿಲ್ಲ. ಆದಾಗ್ಯೂ ಆಡಿದ ಮೂವರಲ್ಲಿ ಸ್ಮೃತಿ ಮಂಧಾನ ಶತಕ ಸಿಡಿಸಿದ್ದರಿಂದ ತಂಡ ಬೃಹತ್ ಮೊತ್ತ ಕಲೆಹಾಕಿತು. ಆ ಬಳಿಕ ಬೌಲಿಂಗ್ನಲ್ಲಿ ಹಾಗೂ ಫೀಲ್ಡಿಂಗ್ನಲ್ಲಿ ತಂಡ ಸಾಂಘಿಕ ಪ್ರದರ್ಶನ ನೀಡಿ ಆಂಗ್ಲ ತಂಡವನ್ನು ಮಕಾಡೆ ಮಲಗಿಸಿತ್ತು.
ಹರ್ಮನ್ಪ್ರೀತ್ ಕೌರ್ ಆಡ್ತಾರಾ?
ಎರಡನೇ ಟಿ20 ಪಂದ್ಯಕ್ಕೂ ಮುನ್ನ ತಂಡದ ಚಿಂತೆ ಏನೆಂದರೆ ಇಂಜುರಿಯಿಂದಾಗಿ ಮೊದಲ ಟಿ20 ಪಂದ್ಯದಿಂದ ಹೊರಗುಳಿದಿದ್ದ ಹರ್ಮನ್ಪ್ರೀತ್ ಕೌರ್ ಎರಡನೇ ಪಂದ್ಯದಲ್ಲಿ ಆಡುತ್ತಾರಾ ಎಂಬುದು. ಒಂದು ವೇಳೆ ಹರ್ಮನ್ಪ್ರೀತ್ ಇಂಜುರಿಯಿಂದ ಚೇತರಿಸಿಕೊಂಡು ತಂಡಕ್ಕೆ ಎಂಟ್ರಿ ಕೊಟ್ಟರೆ ಬ್ಯಾಟಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ. ಆದಾಗ್ಯೂ ಅವರು ಇಂಜುರಿಯಿಂದ ಚೇತರಿಸಿಕೊಳ್ಳದಿದ್ದರೆ, ಮೊದಲ ಪಂದ್ಯದಂತೆ ಎರಡನೇ ಪಂದ್ಯದಲ್ಲೂ ಸ್ಮೃತಿ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದಂತೆ 2ನೇ ಪಂದ್ಯದ ಬಗ್ಗೆಗಿನ ಸಂಪೂರ್ಣ ವಿವರ ಇಲ್ಲಿದೆ.
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯ ಜುಲೈ 1 ರಂದು ನಡೆಯಲಿದೆ.
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯ ಬ್ರಿಸ್ಟಲ್ನಲ್ಲಿ ನಡೆಯಲಿದೆ.
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭ?
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯ ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಆರಂಭವಾಗಲಿದೆ. ಅಂದರೆ ಈ ಪಂದ್ಯವನ್ನು ವೀಕ್ಷಿಸಬೇಕಾದರೆ ಭಾರತೀಯ ಅಭಿಮಾನಿಗಳು ನಿದ್ರೆ ಇಲ್ಲದೆ ಜಾಗರಣೆ ಮಾಡಬೇಕಾಗುತ್ತದೆ.
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯದ ನೇರಪ್ರಸಾರ ಯಾವ ಚಾನೆಲ್ನಲ್ಲಿ?
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯದ ನೇರಪ್ರಸಾರ ಸೋನಿ ಸ್ಪೋರ್ಟ್ಸ್ 1 ರಲ್ಲಿ ಪ್ರಸಾರವಾಗಲಿದೆ. ಹಾಗೆಯೇ ಸೋನಿ ಲಿವ್ನಲ್ಲೂ ಪಂದ್ಯವನ್ನು ವೀಕ್ಷಿಸಬಹುದು.
ಉಭಯ ತಂಡಗಳು ಇಂತಿವೆ
ಭಾರತ: ಹರ್ಮನ್ ಪ್ರೀತ್ ಕೌರ್ (ನಾಯಕಿ), ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ಜೆಮಿಮಾ ರೊಡ್ರಿಗಸ್, ಶೆಫಾಲಿ ವರ್ಮಾ, ಅಮನ್‌ಜೋತ್ ಕೌರ್, ಸ್ನೇಹ್ ರಾಣಾ, ಸಯಾಲಿ ಸತ್‌ಘರೆ, ದೀಪ್ತಿ ಶರ್ಮಾ, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ಶ್ರೀ ಚರಣಿ, ರಾಧಾ ಯಾದವ್.
ಇಂಗ್ಲೆಂಡ್: ನ್ಯಾಟ್ ಸಿವರ್-ಬ್ರಂಟ್ (ನಾಯಕಿ), ಟ್ಯಾಮಿ ಬ್ಯೂಮಾಂಟ್ (ವಿಕೆಟ್ ಕೀಪರ್), ಸೋಫಿಯಾ ಡಂಕ್ಲಿ, ಆಮಿ ಜೋನ್ಸ್ (ವಿಕೆಟ್ ಕೀಪರ್), ಡ್ಯಾನಿ ವ್ಯಾಟ್-ಹಾಡ್ಜ್, ಆಲಿಸ್ ಕ್ಯಾಪ್ಸಿ, ಚಾರ್ಲಿ ಡೀನ್, ಪೈಜ್ ಸ್ಕೋಲ್‌ಫೀಲ್ಡ್, ಎಂ ಆರ್ಲಾಟ್, ಲಾರೆನ್ ಬೆಲ್, ಸೋಫಿ ಎಕ್ಲೆಸ್ಟೋನ್, ಲಾರೆನ್ ಫಿಲ್ಲರ್, ಲಿನ್ಸೆ ಸ್ಮಿತ್, ಇಸ್ಸಿ ವಾಂಗ್.