
ಭಾರತದಲ್ಲಿ 5೦,೦೦೦ ಕಿ.ಮೀ. ಉದ್ದದ ಸಮುದ್ರದಾಳದ ಕೇಬಲ್ ಅಳವಡಿಸಲು ಮೆಟಾ ಯೋಜನೆ ಹಾಕಿಕೊಂಡಿದೆ. ಈ ಬಗ್ಗೆ ಒಪ್ಪಂದ ಆಗಿದೆ.

2030ರ ವೇಳೆಗೆ ಭಾರತವನ್ನು ಜಾಗತಿಕ ಡಿಜಿಟಲ್ ಮೂಲಸೌಕರ್ಯದ ಜೊತೆಗೆ ಜೋಡಿಸಲು ‘ಪ್ರಾಜೆಕ್ಟ್ ವಾಟರ್‌ವರ್ತ್’ ಎಂಬ ಮೆಗಾ ಯೋಜನೆಯನ್ನು ಮೆಟಾ ಜಾರಿಗೆ ತರಲಿದೆ.
ಭೂಮಿಯ ಸುತ್ತಳತೆಗಿಂತಲೂ ಉದ್ದವಾದ ಈ ಕೇಬಲ್ ಐದು ಖಂಡಗಳನ್ನು ಸಂಪರ್ಕಿಸಲಿದೆ. ಪ್ರಧಾನಿ ಮೋದಿ ಅವರ ಇತ್ತೀಚಿನ ಅಮೆರಿಕ ಭೇಟಿಯ ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಈ ಯೋಜನೆಯು ಭಾರತದ ಡಿಜಿಟಲ್ ಬೆಳವಣಿಗೆಯಲ್ಲಿ ಮೆಟಾದ ಗಮನವನ್ನು ತೋರಿಸುತ್ತದೆ. ಸಮುದ್ರದ ಆಳದಲ್ಲಿ ಹಾನಿಯಾಗದಂತೆ ರಕ್ಷಿಸಲು ಮುಂದುವರಿದ ತಂತ್ರಜ್ಞಾನ ಬಳಸಲಾಗುವುದು ಎಂದು ಮೆಟಾ ಹೇಳಿದೆ.

ಈ ಕೇಬಲ್ ಯೋಜನೆಯಿಂದ ಭಾರತದ ಆರ್ಥಿಕತೆ, ಮೂಲಸೌಕರ್ಯ ಮತ್ತು ಡಿಜಿಟಲ್ ಸೇರ್ಪಡೆಗೆ ಉತ್ತೇಜನ ಸಿಗಲಿದೆ ಎಂದು ಮೆಟಾ ಹೇಳಿದೆ. ದತ್ತಾಂಶ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಈ ಯೋಜನೆ ಸಹಕಾರಿ.

7000 ಮೀಟರ್ ಆಳದಲ್ಲಿ ಕೇಬಲ್‌ಗಳನ್ನು ಅಳವಡಿಸಲಾಗುವುದು. ಸಮುದ್ರ ಜೀವಿಗಳಿಗೆ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಈ ಯೋಜನೆ ರೂಪಿಸಲಾಗಿದೆ.