ಚಿತ್ರದುರ್ಗದಲ್ಲಿ ವಿಶ್ವ ಮಹಿಳಾ ದಿನಾಚರಣೆ: ಪತಂಜಲಿ ಯೋಗ ಸಮಿತಿಯಿಂದ ಸಾಧಕಿಯರಿಗೆ ಸನ್ಮಾನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 09

ಮಾ.8ರ ಭಾನುವಾರದಂದು `ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಗರದ ಸ್ಟೇಡಿಯಂ ರಸ್ತೆಯ ವೀರಸೌಧದಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿ, ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಯುವ ಭಾರತ್, ಪತಂಜಲಿ ಕಿಸಾನ್ ಸೇವಾ ಸಮಿತಿ, ಚಿತ್ರದುರ್ಗ ಹಾಗೂ ಜಿಲ್ಲಾ ಪತಂಜಲಿ ಸಾಮಾಜಿಕ ಜಾಲತಾಣ ಸಮಿತಿಗಳು ಹಾಗೂ ವಿವಿಧ ಬಡಾವಣೆಗಳ ಯೋಗಕೇಂದ್ರಗಳ ಸಹಯೋಗದಲ್ಲಿ ಪತಂಜಲಿ ಮಹಿಳಾ ಯೋಗಸಮಿತಿ ಹಾಗೂ ವೀರಸೌಧ ಯೋಗ ಕೇಂದ್ರದವರು ಶ್ರೀಮತಿ ಹೇಮಾವತಿಯವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ವೇದಿಕೆಯ ಮೇಲೆ ಸ್ವಾತಂತ್ರ್ಯ ಹೋರಾಟಗಾರ್ತಿ ಶ್ರೀಮತಿ ಗೌರಮ್ಮ, ಯೋಗ ಸಾಧಕಿಯರಾದ ಶ್ರೀಮತಿ ಕಮಲಮ್ಮ, ಶ್ರೀಮತಿ ಮಂಜುಳಾ, ಶ್ರೀಮತಿ ಗೀತಮ್ಮ, ಶ್ರೀಮತಿ ಪುಷ್ಪಾರವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಶ್ರೀಮತಿ ಹೇಮಾಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶಶಿಕಲಾ ಹಾಗೂ ಪದ್ಮ ಪ್ರಾರ್ಥಿಸಿದರು, ಶ್ರೀಮತಿ ಗೌತಮಿ ಸ್ವಾಗತಿಸಿದರು, ಶ್ರೀಮತಿ ಶೋಭಾ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಶಶಿಕಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಶ್ರೀಮತಿ ಶಿಲ್ಪಾ ವಂದಿಸಿದರು. ಗುರುಮೂರ್ತಿ,ಶ್ರೀನಿವಾಸ್,ದೇವಾನಂದ್ ನಾಯ್ಕ್,ನಾಗರಾಜ್ ಸಂಗಮ್, ಜಯಣ್ಣ, ತಿಪ್ಪೇಸ್ವಾಮಿ, ನಾಗಭೂಷಣ, ಡಾ ಶಶಿಕಿರಣ್, ಕೃಷ್ಣಮೂರ್ತಿ, ರಾಮ್ ನರೇಶ್, ಲವಕುಮಾರ್, ಕೆಂಚವೀರಪ್ಪ, ಓಬಳೇಶ್, ಹೊರಕೇರಪ್ಪ, ರಾಜಶೇಖರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *