ಅನುಪಮ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಚಿತ್ರದುರ್ಗ: ನಗರದ ಅನುಪಮ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು, ಯೋಗ ಶಿಕ್ಷಕಿ ಕುಮಾರಿ ನೇತ್ರಾವತಿ ನೇತೃತ್ವದಲ್ಲಿ ಶಾಲೆಯ 1ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಯೋಗಾಸನದ ವಿವಿಧ ಭಂಗಿಗಳನ್ನು ಮಾಡಿಸುವುದರ ಮೂಲಕ ಯಶಸ್ವಿಯಾಗಿ ನಡೆಸಿಕೊಟ್ಟರು.


ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಎಸ್. ಭಾಸ್ಕರ್, ಕಾರ್ಯದರ್ಶಿಗಳಾದ ಎಸ್.ಬಿ. ರಕ್ಷಣ್, ಶಾಲೆಯ ಪ್ರಾಚಾರ್ಯರಾದ ಸಿ.ಡಿ. ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಶಾಲೆಯ ಶಿಕ್ಷಕ / ಶಿಕ್ಷಕಿಯರು, ಶಿಕ್ಷಕೇತರ ವರ್ಗದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *