IPL 2023: ಶ್ರೇಯಸ್ ಅಯ್ಯರ್ ಬಳಿಕ ಕೆಕೆಆರ್ ತಂಡದ ಮತ್ತೊಬ್ಬ ಸ್ಟಾರ್ ಆಟಗಾರನಿಗೆ ಇಂಜುರಿ..!

IPL 2023 KKR suffer another blow as Lockie Ferguson injured ahead of IPL

ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಸೀಸನ್ (IPL 2023) ಆರಂಬಕ್ಕೂ ಮೊದಲು ಹಲವಾರು ಫ್ರಾಂಚೈಸಿಗಳಿಗೆ ಆಟಗಾರರ ಇಂಜುರಿ ಸಮಸ್ಯೆ ತಲೆನೋವು ತಂದ್ದೊಡ್ಡಿದೆ. ಸೀಸನ್ ಪ್ರಾರಂಭವಾಗುವ ಮೊದಲೇ ಹಲವಾರು ಪ್ರಮುಖ ಆಟಗಾರರು ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಇದೀಗ ಟೂರ್ನಿ ಆರಂಭಕ್ಕೆ ದಿನಗಳು ಹತ್ತಿರವಾದಂತೆ ದೇಶಿ ಆಟಗಾರರು ಸೇರಿದಂತೆ ಹಲವು ವಿದೇಶಿ ಆಟಗಾರರು ಇಂಜುರಿಗೆ ತುತ್ತಾಗುವುದರೊಂದಿಗೆ ಫ್ರಾಂಚೈಸಿಗಳಿಗೆ ಸಂಕಷ್ಟ ಹೆಚ್ಚಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೆಕೆಆರ್ (KKR) ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಇಂಜುರಿಯಿಂದಾಗಿ ಇಡೀ ಐಪಿಎಲ್​ನಿಂದಲೇ ಹೊರಬಿದ್ದಿದ್ದರು. ಇದೀಗ ಬಂದಿರುವ ಮಾಹಿತಿ ಪ್ರಕಾರ, ತಂಡದ ಸ್ಟಾರ್ ವೇಗದ ಬೌಲರ್ ಲಾಕಿ ಫರ್ಗುಸನ್ (Lockie Ferguson) ಗಾಯಗೊಂಡಿರುವುದು ತಂಡದ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವಾಸ್ತವವಾಗಿ, ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಇಂಜುರಿಗೆ ತುತ್ತಾದರು. ಆದ್ದರಿಂದ, ನಾಲ್ಕನೇ ಟೆಸ್ಟ್‌ನಲ್ಲಿ ಮೊದಲ ದಿನ ಕಣಕ್ಕಿಳಿದಿದ್ದ ಅಯ್ಯರ್, ಆನಂತರ ತಂಡದ ಪರ ಬ್ಯಾಟಿಂಗ್ ಮಾಡಲು ಸಹ ಮೈದಾನಕ್ಕೆ ಬರಲಿಲ್ಲ. ವಾಸ್ತವವಾಗಿ ಶ್ರೇಯಸ್ ಅಯ್ಯರ್ ಬೆನ್ನು ನೋವಿನಿಂದಾಗಿ ನಾಗ್ಪುರದಲ್ಲಿ ನಡೆದ ಈ ಸರಣಿಯ ಮೊದಲ ಟೆಸ್ಟ್‌ನಲ್ಲಿಯೂ ಆಡಿರಲಿಲ್ಲ. ಇದೀಗ ಅವರು ಐಪಿಎಲ್‌ನಿಂದ ಹೊರಬಿದ್ದಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

‘ನಾಯಕತ್ವ ನೀಡುವುದಾಗಿ ನಂಬಿಸಿ ತಂಡದಿಂದ ಹೊರಹಾಕಿದ್ರು’; ಶಾಕಿಂಗ್ ಹೇಳಿಕೆ ನೀಡಿದ ವೀರೇಂದ್ರ ಸೆಹ್ವಾಗ್

ಲಾಕಿ ಫರ್ಗುಸನ್​ಗೆ ಇಂಜುರಿ

ಸೀಸನ್ ಪ್ರಾರಂಭವಾಗುವ ಮೊದಲೇ ತಂಡದ ನಾಯಕ ಶ್ರೇಯಸ್ ಅಯ್ಯರ್ ಅಲಭ್ಯತೆಯ ಶಾಕ್​ಗೆ ಒಳಗಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ, ಇದೀಗ ತಂಡದ ವೇಗದ ಬೌಲರ್ ಲಾಕಿ ಫರ್ಗುಸನ್ ಗಾಯಗೊಂಡಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಫರ್ಗುಸನ್ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದು, ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಇದೀಗ ಇಂಜುರಿಗೆ ತುತ್ತಾಗಿರುವ ಫರ್ಗುಸನ್, ಐಪಿಎಲ್ ಆರಂಭಕ್ಕೂ ಮುನ್ನ ಚೇತರಿಸಿಕೊಳ್ಳದಿದ್ದರೆ, ತಂಡದ ಆರಂಭಿಕ ಕೆಲವು ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತ.

14 ಪಂದ್ಯಗಳಲ್ಲಿ 12 ವಿಕೆಟ್

ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದ ಫರ್ಗುಸನ್ ಅವರನ್ನು ಮಿನಿ ಹರಾಜಿನಲ್ಲಿ ಕೆಕೆಆರ್ ತಂಡ ತನ್ನ ಬತ್ತಳಿಕೆಗೆ ಹಾಕಿಕೊಂಡಿತ್ತು. ಅಲ್ಲದೆ ಕೆಕೆಆರ್ ತಂಡ ಫರ್ಗುಸನ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಏಕೆಂದರೆ ಕಳೆದ ಆವೃತ್ತಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಮತ್ತು ಟಿಮ್ ಸೌಥಿ ಪವರ್‌ಪ್ಲೇಯಲ್ಲಿ ವಿಕೆಟ್ ಪಡೆಯಲು ಹೆಣಗಾಡಿದ್ದರು. ಹೀಗಾಗಿ ಪವರ್​ಪ್ಲೇನಲ್ಲಿ ವಿಕೆಟ್ ಟೇಕರ್ ಎನಿಸಿಕೊಂಡಿರುವ ಫರ್ಗುಸನ್ ಅಲಭ್ಯತೆ ಕೆಕೆಆರ್ ತಂಡಕ್ಕೆ ಹಿನ್ನಡೆಯುಂಟು ಮಾಡಲಿದೆ. ಇನ್ನು ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದ ಫರ್ಗುಸನ್, 14 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-kkr-suffer-another-blow-as-lockie-ferguson-injured-ahead-of-ipl-psr-au14-541561.html

Leave a Reply

Your email address will not be published. Required fields are marked *