IPL 2023: ಸಿಎಸ್​ಕೆ ಡ್ರೆಸಿಂಗ್​​ ರೂಂನಲ್ಲಿ ಕಿಂಗ್ ಕೊಹ್ಲಿ ಗುಣಗಾನ ಮಾಡಿದ ಧೋನಿ! ವಿಡಿಯೋ

IPL 2023: ಸಿಎಸ್​ಕೆ ಡ್ರೆಸಿಂಗ್​​ ರೂಂನಲ್ಲಿ ಕಿಂಗ್ ಕೊಹ್ಲಿ ಗುಣಗಾನ ಮಾಡಿದ ಧೋನಿ! ವಿಡಿಯೋ
IPL 2023 Virat doesnt play like this MS Dhoni cites Kohlis example inside CSK dressing room psr

ಪ್ರಸ್ತುತ ಐಪಿಎಲ್​​ನಲ್ಲಿ (IPL 2023) ಬ್ಯುಸಿಯಾಗಿರುವ ವಿರಾಟ್ ಕೊಹ್ಲಿ (Virat Kohli) ತನ್ನ ಆಟಕ್ಕಿಂತ ಹೆಚ್ಚಾಗಿ ಇತರ ವಿವಾದಗಳಿಂದಲೇ ಹೆಚ್ಚು ಚರ್ಚೆಯಾಗುತ್ತಿದ್ದಾರೆ. ತಾನು ನಾಯಕತ್ವವಹಿಸಿದ ಪಂದ್ಯಗಳಲ್ಲಿ ಎರಡೂ ಬಾರಿ ನಿಧಾನಗತಿಯ ಓವರ್​ ಮಾಡಿದಕ್ಕಾಗಿ ದಂಡಕ್ಕೊಳಗಾಗಿದ್ದ ಕೊಹ್ಲಿ ಆ ಬಳಿಕ ಲಕ್ನೋ ವಿರುದ್ಧದ ಪಂದ್ಯದಲ್ಲಿ ಅಫ್ಘಾನ್ ವೇಗಿ ನವೀನ್ ಉಲ್ ಹಕ್ ಹಾಗೂ ಲಕ್ನೋ ಕೋಚ್ ಗೌತಮ್ ಗಂಬೀರ್ ಜೊತೆಗಿನ ಮಾತಿನ ಗುದ್ದಾಟದಿಂದಾಗಿ ಇದೀಗ ಎಲ್ಲರ ಚರ್ಚೆಯ ವಿಷಯವಾಗಿದ್ದಾರೆ. ಹಲವು ಕ್ರಿಕೆಟ್ ಪಂಡಿತರು ಕೊಹ್ಲಿಯ ಆಕ್ರಮಣಶೀಲತೆಯ ಪ್ರವೃತ್ತಿಯ ಪರವಾಗಿ ವಾಧಿಸುತ್ತಿದ್ದರೆ, ಇನ್ನು ಕೆಲವರು ಕೊಹ್ಲಿ ಇದನ್ನು ಬದಲಿಸಿಕೊಳ್ಳಬೇಕು ಎನ್ನುತ್ತಿದ್ದಾರೆ. ಈ ನಡುವೆ ಐಪಿಎಲ್​​ನಲ್ಲಿ ತನ್ನ ಗೆಲುವಿನ ನಾಗಲೋಟ ಮುಂದುವರೆಸಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಡ್ರೆಸಿಂಗ್ ಕೋಣೆಯಲ್ಲಿ ಕಿಂಗ್ ಕೊಹ್ಲಿಯ ಬಗ್ಗೆ ಚರ್ಚೆ ನಡೆದಿದೆ.

ವಿರಾಟ್ ಬಗ್ಗೆ ಧೋನಿ ಮಾತು

ಈ ಚರ್ಚೆ ಬೇರೆ ಯಾವುದೋ ಆಟಗಾರನಿಂದ ಹುಟ್ಟಿಕೊಂಡಿದ್ದರೆ ಈ ಸುದ್ದಿ ಅಷ್ಟು ಮನ್ನಣೆ ಪಡೆಯುತ್ತಿರಲಿಲ್ಲವೇನೋ. ಆದರೆ ಟೀಂ ಇಂಡಿಯಾದ ಯಶಸ್ವಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಕೊಹ್ಲಿ ಬಗ್ಗೆ ಮಾತನಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ವಾಸ್ತವವಾಗಿ ಮುಂಬೈ ವಿರುದ್ಧದ ಪಂದ್ಯದ ಬಳಿಕ ಸಿಎಸ್​ಕೆ ಆಟಗಾರರು ಡ್ರೆಸಿಂಗ್ ಕೋಣೆಯಲ್ಲಿ ಒಂದೆಡೆ ಸೇರಿದ್ದು, ಇದರಲ್ಲಿ ನಾಯಕ ಧೋನಿ ಯುವ ಆಟಗಾರರಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟಿದ್ದಾರೆ. ಈ ವೇಳೆ ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಕ್ಯಾಪ್ಟನ್ ಕೂಲ್, ವಿರಾಟ್ ಮೊದಲ ಎಸೆತವನ್ನು ಈ ರೀತಿ ಆಡುವುದಿಲ್ಲ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತಿದೆ.

11 ಪಂದ್ಯಗಳಲ್ಲಿ 6 ಗೆಲುವು

ಇನ್ನು ಐಪಿಎಲ್​ನಲ್ಲಿ ಚೆನ್ನೈ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಶನಿವಾರ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 49ನೇ ಪಂದ್ಯದಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ 6 ಗೆಲುವುಗಳಿಂದ 13 ಅಂಕಗಳನ್ನು ಸಂಪಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ODI rankings: 48 ಗಂಟೆಗಳೊಳಗೆ ನಂ.1 ಪಟ್ಟ ಕಳೆದುಕೊಂಡ ಪಾಕಿಸ್ತಾನ; ಭಾರತಕ್ಕೆ ಯಾವ ಸ್ಥಾನ?

ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು

ಇನ್ನು ಆರ್​ಸಿಬಿ ಕಥೆ ಹೇಳುವುದಾದರೆ, ಆಡಿರುವ 10 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಅಂಕ ಗಳಿಸಿ 5ನೇ ಸ್ಥಾನದಲ್ಲಿದೆ. ಹೀಗಾಗಿ ಆರ್​ಸಿಬಿ ನಾಕೌಟ್ ಸುತ್ತಿಗೆ ಎಂಟ್ರಿಕೊಡಬೇಕಾದರೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು. ಗೆಲುವು ಮಾತ್ರವಲ್ಲದೆ ಅತ್ಯಧಿಕ ನೆಟ್ ರನ್​ ರೇಟ್​ನಿಂದ ಗೆಲ್ಲಬೇಕು. ಹೀಗಾದಾಗ ಮಾತ್ರ ಆರ್​ಸಿಬಿ ಕಪ್ ಗೆಲ್ಲುವ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-virat-doesnt-play-like-this-ms-dhoni-cites-kohlis-example-inside-csk-dressing-room-psr-573236.html

Leave a Reply

Your email address will not be published. Required fields are marked *