IPL 2023: ‘ಇದು ಫ್ಯಾಮಿಲಿ ವಿಚಾರ’; ಪಂದ್ಯದ ವೇಳೆ ಒಟ್ಟಿಗೆ ಕಾಣಿಸಿಕೊಂಡ ಗಿಲ್- ಸಚಿನ್ ಮೇಲೆ ಮೀಮ್ಸ್ ಸುರಿಮಳೆ

IPL 2023 Memes Pour In As Shubman Gill Chats With Sachin Tendulkar During GT vs MI match

ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium in Ahmedabad) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಗುಜರಾತ್ ಟೈಟಾನ್ಸ್ 16ನೇ ಆವೃತ್ತಿಯ ಐಪಿಎಲ್​ನ 2ನೇ ಫೈನಲಿಸ್ಟ್ ಆಗಿ ಫೈನಲ್​ಗೆ ಎಂಟ್ರಿಕೊಟ್ಟಿದೆ. ಗುಜರಾತ್​ನ ಈ ಗೆಲುವಿನ ಪ್ರಮುಖ ಪಾತ್ರವಹಿಸಿದ ಆರಂಭಿಕ ಬ್ಯಾಟರ್ ಶುಭ್​ಮನ್ ಗಿಲ್ (Shubman Gill) ಅದ್ಭುತ ಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 50 ಎಸೆತಗಳನ್ನು ಎದುರಿಸಿದ ಗಿಲ್ 7 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಒಳಗೊಂಡಂತೆ 129 ರನ್ ಬಾರಿಸಿದರು. ಇದರೊಂದಿಗೆ ಸೀಸನ್​ನ 3ನೇ ಶತಕವನ್ನು ಪೂರ್ಣಗೊಳಿಸಿದರು. ಸದ್ಯ ಗಿಲ್ ಆಟಕ್ಕೆ ಇಡೀ ಕ್ರಿಕೆಟ್​ ಲೋಕವೇ ಸಲಾಂ ಹೊಡೆಯುತ್ತಿದ್ದು, ಕಿಂಗ್ ಕೊಹ್ಲಿ (Virat Kohli) ಸೇರಿದಂತೆ ಹಲವು ದಿಗ್ಗಜರು ಗಿಲ್ ಆಟದ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಇದೆಲ್ಲದರ ನಡುವೆ ಮುಂಬೈ ತಂಡದ ಮೆಂಟರ್ ಆಗಿರುವ ಸಚಿನ್ ತೆಂಡೂಲ್ಕರ್ (Sachin Tendulkar) ಪಂದ್ಯದ ನಡುವೆ ಗಿಲ್ ಜೊತೆ ಸಾಕಷ್ಟು ಸಮಯ ಕಳೆದಿದ್ದು, ಇಬ್ಬರು ಮಾತುಕತೆಯಲ್ಲಿ ನಿರತರಾಗಿದ್ದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೆ ಈ ಇಬ್ಬರ ಫೋಟೋ ಮೇಲೆ ಸಾಕಷ್ಟು ಮೀಮ್ಸ್​ಗಳ ಸುರಿಮಳೆಯೂ ಆಗುತ್ತಿದೆ.

ವಾಸ್ತವವಾಗಿ ಈ ಇಬ್ಬರ ಫೋಟೋ ಮೇಲೆ ಇಷ್ಟೊಂದು ಮೀಮ್ಸ್ ಹರಿದು ಬರಲು ಕಾರಣವೂ ಇದ್ದು, ಕ್ರಿಕೆಟಿಗ ಶುಭ್​ಮನ್ ಗಿಲ್ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಹಲವು ದಿನಗಳಿಂದ ಡೆಂಟಿಗ್ ಮಾಡುತ್ತಿದ್ದಾರೆ ಎಂಬ ವದಂತಿ ಬಹಳ ಹಿಂದಿನಿಂದಲೇ ಹರಿದಾಡುತ್ತಿದೆ. ಅಲ್ಲದೆ ಮುಂಬೈ- ಗುಜರಾತ್ ಮುಖಾಮುಖಿಯಾದಾಗ ಈ ಇಬ್ಬರ ಬಗ್ಗೆ ಸಾಕಷ್ಟು ವದಂತಿಗಳು, ಕಾಮೆಂಟ್​ಗಳು ಕೇಳಿಬರುತ್ತವೆ. ಈಗ ಸಚಿನ್ ಮತ್ತು ಗಿಲ್ ಪಂದ್ಯದ ನಡುವೆ ಮಾತುಕತೆ ನಡೆಸಿರುವುದು ಮೀಮ್ಸ್​ಕ್ರಿಯೇಟರ್​ಗಳಿಗೆ ಹಬ್ಬದೂಟ ನೀಡಿದಂತ್ತಾಗಿದೆ. ಹೀಗಾಗಿ ಈ ಇಬ್ಬರ ಫೋಟೋಗೆ ವಿವಿಧ ರೀತಿಯ ಮೀಮ್ಸ್​ಗಳನ್ನು ಹರಿಬಿಡಲಾಗಿದೆ. ಅಂತಹ ಕೆಲವು ಮೀಮ್ಸ್​ಗಳು ಇಲ್ಲಿವೆ.

ಆರೆಂಜ್ ಕ್ಯಾಪ್ ಗೆದ್ದ ಗಿಲ್

ಐಪಿಎಲ್ 2023 ರಲ್ಲಿ ತನ್ನ ಮೂರನೇ ಶತಕ ಬಾರಿಸಿದ ಗಿಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಅನ್ನು ತನ್ನದಾಗಿಸಿಕೊಂಡಿದ್ದಾರೆ. ಗಿಲ್, 16 ಪಂದ್ಯಗಳಿಂದ 851 ರನ್ ಬಾರಿಸಿ, ಸೀಸನ್​ನ ಪ್ರಮುಖ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-memes-pour-in-as-shubman-gill-chats-with-sachin-tendulkar-during-gt-vs-mi-match-psr-588326.html

Leave a Reply

Your email address will not be published. Required fields are marked *