IPL 2023: ಫಾಫ್ ಡುಪ್ಲೆಸಿಸ್​ ಸ್ಕೂಪ್​ ಸಿಕ್ಸ್​ಗೆ ಕಿಂಗ್ ಕೊಹ್ಲಿಯ ರಿಯಾಕ್ಷನ್

IPL 2023: ಐಪಿಎಲ್​ನ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.16 ರನ್​ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಜೊತೆಯಾದ ಫಾಫ್ ಡುಪ್ಲೆಸಿಸ್-ಮ್ಯಾಕ್ಸ್​ವೆಲ್ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಲ್ಲದೆ ಬಿರುಸಿನ ಬ್ಯಾಟಿಂಗ್ ಮೂಲಕ ಫಾಫ್-ಮ್ಯಾಕ್ಸಿ ಜೋಡಿ ಗಮನ ಸೆಳೆದರು. ಇದರ ನಡುವೆ 10ನೇ ಓವರ್​ನಲ್ಲಿ ಫಾಫ್ ಡುಪ್ಲೆಸಿಸ್ ಬಾರಿಸಿದ ಸ್ಕೂಪ್​ ಶಾಟ್​ಗೆ ಡಗೌಟ್​ನಲ್ಲಿದ್ದ ವಿರಾಟ್ ಕೊಹ್ಲಿ ತಲೆದೂಗಿದರು.ಆಕಾಶ್ ಮಧ್ವಾಳ್ ಎಸೆದ 10ನೇ ಓವರ್​ನ 3ನೇ ಎಸೆತವು ನೋ ಬಾಲ್ ಆಗಿತ್ತು. ಹೀಗೆ ಸಿಕ್ಕ ಫ್ರೀ ಹಿಟ್​ಗೆ ಡುಪ್ಲೆಸಿಸ್ ಸ್ಕೂಪ್ ಶಾಟ್ ಸಿಕ್ಸ್ ಬಾರಿಸಿದರು. ಅತ್ತ ಚೆಂಡು ಬೌಂಡರಿ ಲೈನ್​ ದಾಟುತ್ತಿದ್ದಂತೆ ಡಗೌಟ್​ನಲ್ಲಿದ್ದ ವಿರಾಟ್ ಕೊಹ್ಲಿ ಸಿಕ್ಸ್​ ಎಂದು ಕೈ ಎತ್ತುವ ಮೂಲಕ ಸಂಭ್ರಮಿಸಿದರು. ಇದೀಗ ಫಾಫ್ ಡುಪ್ಲೆಸಿಸ್ ಅವರ ಸ್ಕೂಪ್ ಸಿಕ್ಸ್​ಗೆ ವಿರಾಟ್ ಕೊಹ್ಲಿ ನೀಡಿದ ರಿಯಾಕ್ಷನ್​ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಇನ್ನು ಈ ಪಂದ್ಯದಲ್ಲಿ 4ನೇ ವಿಕೆಟ್​ಗೆ ಜೊತೆಯಾದ ಫಾಫ್ ಡುಪ್ಲೆಸಿಸ್ (65) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (68) 120 ರನ್​ಗಳ ಭರ್ಜರಿ ಜೊತೆಯಾಟವಾಡಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ಆರ್​ಸಿಬಿ ತಂಡವು 199 ರನ್ ಕಲೆಹಾಕಿತು.

source https://tv9kannada.com/photo-gallery/cricket-photos/ipl-2023-mi-vs-rcb-faf-du-plessis-six-virat-kohli-reaction-kannada-news-zp-574269.html

Leave a Reply

Your email address will not be published. Required fields are marked *