IPL 2023: ಪ್ರತಿ ಸೀಸನ್ ಐಪಿಎಲ್ ಆಡಿದ 7 ಆಟಗಾರರು ಯಾರು ಗೊತ್ತಾ?

IPL 2023: ಐಪಿಎಲ್ ಶುರುವಾಗಿ 15 ವರ್ಷಗಳೇ ಕಳೆದಿವೆ. 2008 ರಲ್ಲಿ ಶುರುವಾಗಿದ್ದ ಅದ್ಧೂರಿ ಟೂರ್ನಿಯ 16ನೇ ಆವೃತ್ತಿ ಭರದಿಂದ ಸಾಗುತ್ತಿದೆ. ಆದರೆ ಈ ಎಲ್ಲಾ ಆವೃತ್ತಿಗಳಲ್ಲೂ ಕಾಣಿಸಿಕೊಂಡಿರುವುದು ಕೇವಲ 7 ಆಟಗಾರರು ಮಾತ್ರ.ಅಂದರೆ 2008 ರಿಂದ 2023 ರವರೆಗೆ ಏಳು ಆಟಗಾರರು ಮಾತ್ರ ಪ್ರತಿ ಸೀಸನ್​ನಲ್ಲೂ ಕಾಣಿಸಿಕೊಂಡಿದ್ದಾರೆ. ಆ ಆಟಗಾರರು ಯಾರೆಲ್ಲಾ? ಯಾವ ತಂಡದ ಪರ ಕಣಕ್ಕಿಳಿದಿದ್ದರು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...1- ವಿರಾಟ್ ಕೊಹ್ಲಿ: 2008 ರಿಂದ ಆರ್​ಸಿಬಿ ಪರ ಕಣಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ ಈಗಲೂ ಬೆಂಗಳೂರು ಫ್ರಾಂಚೈಸಿ ಪರ ಆಡುತ್ತಿದ್ದಾರೆ. ಅಂದರೆ ಐಪಿಎಲ್ ಇತಿಹಾಸದಲ್ಲೇ ಒಂದೇ ತಂಡದ ಪರ ದೀರ್ಘಕಾಲ ಆಡಿದ ದಾಖಲೆಯೊಂದು ಕಿಂಗ್ ಕೊಹ್ಲಿ ಹೆಸರಿನಲ್ಲಿದೆ.2- ರೋಹಿತ್ ಶರ್ಮಾ: 2008 ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ರೋಹಿತ್ ಶರ್ಮಾ ಇದೀಗ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ.3-  ಮಹೇಂದ್ರ ಸಿಂಗ್ ಧೋನಿ: ಚೊಚ್ಚಲ ಐಪಿಎಲ್​ನಲ್ಲಿ ಸಿಎಸ್​ಕೆ ತಂಡದ ನಾಯಕನಾಗಿ ಐಪಿಎಲ್ ವೃತ್ತಿಜೀವನ ಶುರು ಮಾಡಿದ್ದ ಧೋನಿ ಆ ಬಳಿಕ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದರು. ಇದೀಗ ಸಿಎಸ್​ಕೆ ತಂಡದ ನಾಯಕರಾಗಿ ಮುಂದುವರೆದಿದ್ದಾರೆ.4- ವೃದ್ಧಿಮಾನ್ ಸಾಹ: 2008 ರಲ್ಲಿ ಕೆಕೆಆರ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ವೃತ್ತಿಜೀವನ ಆರಂಭಿಸಿರುವ ವೃದ್ಧಿಮಾನ್ ಸಾಹ ಇದೀಗ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ.5- ಶಿಖರ್ ಧವನ್: ಡೆಲ್ಲಿ ಕ್ಯಾಪಿಟಲ್ಸ್ ಪರ 2008 ರಲ್ಲಿ ಕಣಕ್ಕಿಳಿದಿದ್ದ ಶಿಖರ್ ಧವನ್, ಆ ಬಳಿಕ ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್​ರೈಸರ್ಸ್​ ಹೈದರಾಬಾದ್ ಪರ ಆಡಿದ್ದರು. ಇದೀಗ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಐಪಿಎಲ್​ನಲ್ಲಿ ಮುಂದುವರೆದಿದ್ದಾರೆ.6- ದಿನೇಶ್ ಕಾರ್ತಿಕ್: 2008 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಐಪಿಎಲ್ ಕೆರಿಯರ್ ಆರಂಭಿಸಿದ್ದ ಡಿಕೆ, ಆ ನಂತರ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಆರ್​ಸಿಬಿ, ಗುಜರಾತ್ ಲಯನ್ಸ್ ಹಾಗೂ ಕೆಕೆಆರ್ ಪರ ಆಡಿದ್ದರು. ಇದೀಗ ಆರ್​ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.7- ಮನೀಷ್ ಪಾಂಡೆ: ಚೊಚ್ಚಲ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿದಿದ್ದ ಮನೀಷ್ ಪಾಂಡೆ ಆ ಬಳಿಕ ಆರ್​ಸಿಬಿ, ಪುಣೆ ವಾರಿಯರ್ಸ್, ಕೆಕೆಆರ್, ಎಸ್​ಆರ್​ಹೆಚ್​, ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿಯುತ್ತಿದ್ದಾರೆ.ಈ 7 ಆಟಗಾರರು 2008 ರಿಂದ 2023 ರವರೆಗೆ ಪ್ರತಿ ಸೀಸನ್ ಐಪಿಎಲ್​ನಲ್ಲೂ ಕಣಕ್ಕಿಳಿದಿದ್ದಾರೆ. ಈ ಪಟ್ಟಿಯಲ್ಲಿ ಯಾವುದೇ ವಿದೇಶಿ ಆಟಗಾರರಿಲ್ಲ ಎಂಬುದೇ ವಿಶೇಷ.

source https://tv9kannada.com/photo-gallery/cricket-photos/ipl-records-7-players-who-have-played-in-each-edition-of-the-ipl-kannada-news-zp-au50-564267.html

Leave a Reply

Your email address will not be published. Required fields are marked *