IPL 2023: ನಾನು ಬಂದಿರೋದು ಐಪಿಎಲ್ ಆಡುವುದಕ್ಕೆ, ಬೈಗುಳ ಕೇಳೋಕ್ಕಲ್ಲ: ನವೀನ್ ಉಲ್ ಹಕ್

IPL 2023: ಒಂದೇ ಒಂದು ಪಂದ್ಯದ ಮೂಲಕ ನವೀನ್ ಉಲ್ ಹಕ್ ಇದೀಗ ಐಪಿಎಲ್​ನಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಇದಕ್ಕೆ ಕಾರಣ ಆತನ ಪ್ರದರ್ಶನವಲ್ಲ. ಬದಲಾಗಿ ವಿರಾಟ್ ಕೊಹ್ಲಿ ಜೊತೆಗಿನ ಕಿರಿಕ್.
ಹೌದು, ಐಪಿಎಲ್​ನ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ನವೀನ್ ಉಲ್ ಹಕ್ ಹಾಗೂ ಆರ್​ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದರು. ಲಕ್ನೋ ತಂಡದ ಬ್ಯಾಟಿಂಗ್ ವೇಳೆ ಶುರುವಾದ ಈ ಜಗಳವು ಪಂದ್ಯ ಮುಗಿದ ಬಳಿಕವೂ ಮುಂದುವರೆಯಿತು.ಲಕ್ನೋ ಇನಿಂಗ್ಸ್​ನ 17ನೇ ಓವರ್​ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಈ ವೇಳೆ ಅಂಪೈರ್ ಮಧ್ಯ ಪ್ರವೇಶಿಸಿ ಜಗಳವನ್ನು ನಿಯಂತ್ರಿಸಿದ್ದರು. ಇದೇ ವೇಳೆ ಕಿಂಗ್ ಕೊಹ್ಲಿ ತಮ್ಮ ಶೂ ಧೂಳನ್ನು ನವೀನ್​ಗೆ ತೋರಿಸಿ, ಪರೋಕ್ಷವಾಗಿ ಧೂಳಿಗೆ ಸಮ ಎಂದಿದ್ದರು.
ಇತ್ತ ನವೀನ್ ಉಲ್ ಹಕ್ ಕೂಡ ವಿರಾಟ್ ಕೊಹ್ಲಿಯನ್ನು ಗುರಾಯಿಸುತ್ತಾ ದೃಷ್ಟಿಯುದ್ದದಲ್ಲಿ ನಿರತರಾಗಿದ್ದರು. ಅಲ್ಲದೆ ಪಂದ್ಯ ಮುಗಿದ ಬಳಿಕ ಹಸ್ತಲಾಘವ ಮಾಡುವ ವೇಳೆಯೂ ಪರಸ್ಪರ ಬೈದಾಡಿಕೊಂಡಿದ್ದಾರೆ. ಈ ವೇಳೆ ನವೀನ್ ಕೊಹ್ಲಿಯ ಕೈಯನ್ನು ಎಳೆದಿದ್ದರು. ಅಷ್ಟರಲ್ಲಿ ಮಧ್ಯ ಪ್ರವೇಶಿಸಿ ಗ್ಲೆನ್ ಮ್ಯಾಕ್ಸ್​ವೆಲ್ ಪರಿಸ್ಥಿತಿ ತಿಳಿಗೊಳಿಸಿದರು.ಇದೀಗ ಮೈದಾನದಲ್ಲಿನ ಕಿತ್ತಾಟದ ಬಗ್ಗೆ ನವೀನ್ ಉಲ್ ಹಕ್ ಮಾತನಾಡಿದ್ದಾರೆ. ನಾನು ಬಂದಿರೋದು ಐಪಿಎಲ್ ಆಡುವುದಕ್ಕೆ. ಯಾರ ಬೈಗುಳ ತಿನ್ನುವುದಕಲ್ಲ ಎಂದಿದ್ದಾರೆ.
ಈ ಮೂಲಕ ವಿರಾಟ್ ಕೊಹ್ಲಿ ನಿಂದಿಸಿರುವುದಕ್ಕೆ ನಾನು ಕೋಪಗೊಂಡಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿಯನ್ನು ಎದುರು ಹಾಕಿಕೊಂಡಿರುವುದರಿಂದ ಇದೀಗ ಆರ್​ಸಿಬಿ ಅಭಿಮಾನಿಗಳು ಅಫ್ಘಾನ್ ಆಟಗಾರ ನವೀನ್ ಉಲ್ ಹಕ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ತಿರುಗಿ ಬಿದ್ದಿದ್ದಾರೆ.

source https://tv9kannada.com/photo-gallery/cricket-photos/ipl-2023-i-have-come-to-play-in-the-ipl-naveen-ul-haq-kannada-news-zp-569479.html

Leave a Reply

Your email address will not be published. Required fields are marked *