IPL 2023: ಬ್ಯಾಟರ್​ ಬದಲಿಗೆ ಬೌಲರ್: RCB ತಂಡದ ಮಾಸ್ಟರ್ ಪ್ಲ್ಯಾನ್

IPL 2023: ಐಪಿಎಲ್​ನ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗು ಬಡಿದು ಶುಭಾರಂಭ ಮಾಡಿದ್ದ ಆರ್​ಸಿಬಿ (RCB) ತಂಡವು 2ನೇ ಪಂದ್ಯದಲ್ಲಿ ಕೆಕೆಆರ್ (KKR) ವಿರುದ್ಧ ಹೀನಾಯವಾಗಿ ಸೋಲನುಭವಿಸಿತ್ತು. ಈ ಸೋಲಿನ ಬೆನ್ನಲ್ಲೇ ಆರ್​ಸಿಬಿ ತಂಡದಲ್ಲೂ 2 ಮಹತ್ವದ ಬದಲಾವಣೆಗಳಾಗಿವೆ.ತಂಡದಲ್ಲಿದ್ದ ಪ್ರಮುಖ ವೇಗಿ ರೀಸ್ ಟೋಪ್ಲಿ ಗಾಯಗೊಂಡು ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಆರ್​ಸಿಬಿ ಫ್ರಾಂಚೈಸಿ ಬದಲಿ ಆಟಗಾರನಾಗಿ ಸೌತ್ ಆಫ್ರಿಕಾ ವೇಗಿ ವೇಯ್ನ್ ಪಾರ್ನೆಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಹಾಗೆಯೇ ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್​ ರಜತ್ ಪಾಟಿದಾರ್ ಕೂಡ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ ಇಲ್ಲಿ ಆರ್​ಸಿಬಿ ಮತ್ತೋರ್ವ ಬ್ಯಾಟರ್​ನನ್ನು ಆಯ್ಕೆ ಮಾಡುವ ಬದಲು ಬೌಲರ್​ನನ್ನು ಆಯ್ಕೆ ಮಾಡಿರುವುದು ವಿಶೇಷ.ಅಂದರೆ ರಜತ್ ಪಾಟಿದಾರ್ ಬದಲಿಗೆ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿರುವುದು ಕರ್ನಾಟಕದ ವೇಗಿ ವೈಶಾಖ್ ವಿಜಯಕುಮಾರ್. ಆರ್​ಸಿಬಿ ಇಂತಹದೊಂದು ಮಹತ್ವದ ಬದಲಾವಣೆ ಮಾಡಿಕೊಳ್ಳಲು ಮುಖ್ಯ ಕಾರಣ ಪ್ರಸ್ತುತ ತಂಡದ ಬೌಲಿಂಗ್ ಲೈನಪ್.ಆರ್​ಸಿಬಿ ತಂಡವು ಮೊದಲ ಪಂದ್ಯದಲ್ಲಿ ಜಯ ಸಾಧಿಸಿದರೂ ಬೌಲರ್​ಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಕ್ಕೆ ಸಾಕ್ಷಿಯೇ 48 ರನ್​ಗೆ 4 ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ಆ ಬಳಿಕ 7 ವಿಕೆಟ್ ನಷ್ಟಕ್ಕೆ 171 ರನ್​ ಪೇರಿಸಿರುವುದು.ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಇದೇ ಕಥೆ. 47 ರನ್​ಗೆ 3 ವಿಕೆಟ್​ ಕಬಳಿಸಿದ ಆರ್​ಸಿಬಿ ಬೌಲರ್​ಗಳು ಆ ಬಳಿಕ ದುಬಾರಿಯಾದರು. ಪರಿಣಾಮ ಕೆಕೆಆರ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್​ ಕಲೆಹಾಕಿತು. ಇದೀಗ ತಂಡದ ಬೌಲಿಂಗ್ ಲೈನಪ್​ ಆರ್​ಸಿಬಿಯ ಚಿಂತೆಯನ್ನು ಹೆಚ್ಚಿಸಿದೆ.ಅದರಲ್ಲೂ ಆಕಾಶ್ ದೀಪ್ ಹಾಗೂ ಹರ್ಷಲ್ ಪಟೇಲ್ ಮೊನಚಿಲ್ಲದ ದಾಳಿ ಸಂಘಟಿಸುತ್ತಿದ್ದಾರೆ. ಇನ್ನು ಮೊದಲ ಪಂದ್ಯದಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್ 2ನೇ ಪಂದ್ಯದಲ್ಲಿ ದುಬಾರಿಯಾಗಿದ್ದರು. ಹೀಗಾಗಿಯೇ ಆರ್​ಸಿಬಿ ಫ್ರಾಂಚೈಸಿಯು ರಜತ್ ಪಾಟಿದಾರ್ ಬದಲಿಗೆ ಕರ್ನಾಟಕದ ವೇಗಿಯನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.ಇದಕ್ಕೆ ಮುಖ್ಯ ಕಾರಣ ಆರ್​ಸಿಬಿ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ನೂ 6 ಪಂದ್ಯಗಳನ್ನಾಡಬೇಕಿದೆ. ಇದೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹರ್ಷಲ್ ಪಟೇಲ್ ಹಾಗೂ ಆಕಾಶ್ ದೀಪ್ ಹೆಚ್ಚಿನ ರನ್​ ಬಿಟ್ಟುಕೊಟ್ಟಿದ್ದರು. ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕನ್ನಡಿಗನನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.
ಅಂದರೆ ಇಲ್ಲಿ ವೈಶಾಖ್ ವಿಜಯಕುಮಾರ್​ ಅವರಿಗೆ ಚಿನ್ನಸ್ವಾಮಿ ಸ್ಟೇಡಿಯಂ ತವರು ಮೈದಾನ. ಇಲ್ಲೇ ಕ್ರಿಕೆಟ್ ಕೆರಿಯರ್ ಆರಂಭಿಸಿರುವ ಕನ್ನಡಿಗನಿಗೆ ಬೆಂಗಳೂರು ಪಿಚ್​ನ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಅರಿವಿದೆ. ಹೀಗಾಗಿ ರಜತ್ ಪಾಟಿದಾರ್ ಬದಲಿಗೆ ಬ್ಯಾಟರ್​ನನ್ನು ಆಯ್ಕೆ ಮಾಡುವ ಬದಲು ಆರ್​ಸಿಬಿ ಫ್ರಾಂಚೈಸಿ ಕರ್ನಾಟಕದ ಬೌಲರ್​ಗೆ ಮಣೆ ಹಾಕಿದೆ.ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಮುಂಬರುವ ಪಂದ್ಯಗಳಲ್ಲಿ ಆಕಾಶ್​ ದೀಪ್ ಬದಲಿಗೆ ವೈಶಾಖ್ ವಿಜಯಕುಮಾರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಮೂಲಕ ಚಿನ್ನಸ್ವಾಮಿ ಪಿಚ್​ನಲ್ಲಿ ಕನ್ನಡಿಗನ ವೇಗದ ಅಸ್ತ್ರವನ್ನು ಬಳಸಿ ಜಯ ಸಾಧಿಸಲು ಆರ್​ಸಿಬಿ ತಂಡ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಈ ಪ್ಲ್ಯಾನ್ ವರ್ಕ್ ಆಗಲಿದೆಯಾ ಎಂಬುದು ಮುಂದಿನ ಪಂದ್ಯಗಳಲ್ಲಿ ಗೊತ್ತಾಗಲಿದೆ.
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವಿಜಯಕುಮಾರ್ ವೈಶಾಖ್.

source https://tv9kannada.com/photo-gallery/cricket-photos/ipl-2023-kannada-rcb-selected-bowler-for-rajat-patidar-replacement-kannada-news-zp-au50-552446.html

Views: 0

Leave a Reply

Your email address will not be published. Required fields are marked *