IPL 2023: RCB ತಂಡದ ಅಟ್ಟರ್ ಫ್ಲಾಪ್ ಆಟಗಾರನಿಗೆ ಇನ್ನೆಷ್ಟು ಅವಕಾಶ..?

IPL 2023: ಐಪಿಎಲ್​ ಸೀಸನ್ 16 ರಲ್ಲಿ ಆರ್​ಸಿಬಿ ಆಟಗಾರ ಅನೂಜ್ ರಾವತ್ ಅವರ ಕಳಪೆ ಬ್ಯಾಟಿಂಗ್ ಮುಂದುವರೆದಿದೆ. ಕಳೆದ ಸೀಸನ್​ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ರಾವತ್ ಅವರನ್ನು ಈ ಬಾರಿ ಕೂಡ ಆರ್​ಸಿಬಿ ಉಳಿಸಿಕೊಂಡಿತ್ತು. ಆದರೀಗ ಈ ಸಲ ಕೂಡ ಅನೂಜ್ ಬ್ಯಾಟ್​ನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.ಐಪಿಎಲ್ 2022 ರಲ್ಲಿ ಆರ್​ಸಿಬಿ ಪರ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರಾವತ್ ಕಲೆಹಾಕಿದ್ದು ಕೇವಲ 129 ರನ್​ ಮಾತ್ರ. ಅಂದರೆ ಪ್ರತಿ ಪಂದ್ಯದ ಸರಾಸರಿ 16.13 ರನ್​. ಇದಾಗ್ಯೂ 3.4 ಕೋಟಿ ನೀಡಿ ಆರ್​ಸಿಬಿ ಹರಾಜಿಗೂ ಮುನ್ನ ಉಳಿಸಿಕೊಂಡಿತ್ತು.ಆದರೆ ಈ ಬಾರಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅನೂಜ್ ರಾವತ್ ಕಲೆಹಾಕಿರುವುದು ಕೇವಲ 39 ರನ್​ ಅಂದರೆ ನಂಬಲೇಬೇಕು. ಅದರಲ್ಲೂ ಪ್ಲೇಆಫ್​ ರೇಸ್​ಗೆ ನಿರ್ಣಾಯಕವಾಗಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ 6 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.ಅಂದರೆ ಈ ಸಲ ಕೂಡ ಅನೂಜ್ ರಾವತ್ 6 ಪಂದ್ಯಗಳಲ್ಲಿ ಕಲೆಹಾಕಿರುವ ರನ್ ಸರಾಸರಿ 13.00. ಅಚ್ಚರಿ ಎಂದರೆ ಈ ಐದು ಪಂದ್ಯಗಳಲ್ಲಿ ರಾವತ್ ಬ್ಯಾಟ್​ನಿಂದ ಸಿಡಿದಿರುವುದು ಕೇವಲ 2 ಫೋರ್ ಹಾಗೂ 1 ಸಿಕ್ಸ್ ಮಾತ್ರ.ಇದಾಗ್ಯೂ ಅನೂಜ್ ರಾವತ್​ಗೆ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ನೀಡುತ್ತಿರುವ ಬಗ್ಗೆ ಇದೀಗ ಅಭಿಮಾನಿಗಳಿಂದಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಏಕೆಂದರೆ ಅತ್ತ ತಂಡದಲ್ಲಿ ಆಲ್​ರೌಂಡರ್​ ಆಗಿ ಕನ್ನಡಿಗ ಮನೋಜ್ ಭಾಂಡಗೆ ಇದ್ದರೂ, ಕಳೆದ 11 ಪಂದ್ಯಗಳಲ್ಲಿ ಒಂದೇ ಒಂದು ಚಾನ್ಸ್ ನೀಡಿಲ್ಲ.ಇತ್ತ ಕಳೆದ ಸೀಸನ್​ನಲ್ಲಿ 8 ಪಂದ್ಯಗಳಲ್ಲಿ ವಿಫಲರಾಗಿದ್ದರೂ, ಈ ಬಾರಿ ಕೂಡ ಆರ್​ಸಿಬಿ ಅನೂಜ್ ರಾವತ್​ ಅವರನ್ನು 6 ಪಂದ್ಯಗಳಲ್ಲಿ ಕಣಕ್ಕಿಳಿಸಿದೆ. ಈ ಐದು ಪಂದ್ಯಗಳಲ್ಲಿ 3.4 ಕೋಟಿಯ ಆಟಗಾರ ಕಲೆಹಾಕಿರುವುದು 39 ರನ್ ಅಂದರೆ ನಂಬಲೇಬೇಕು.

source https://tv9kannada.com/photo-gallery/cricket-photos/ipl-2023-anuj-rawat-utter-flop-for-rcb-kannada-news-zp-574199.html

Leave a Reply

Your email address will not be published. Required fields are marked *