IPL 2023: ಇನ್ನೊಂದೇ ಹೆಜ್ಜೆ ಬಾಕಿ; 2023ರ ಐಪಿಎಲ್​ನಲ್ಲಿ ಸೃಷ್ಟಿಯಾಗಲಿದೆ ಅಪರೂಪದ ದಾಖಲೆ..!

ಐಪಿಎಲ್ 2023 ರಲ್ಲಿ ಗುರುವಾರ ನಡೆದ ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವಿನ ಪಂದ್ಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು. ಒಂದೇ ಪಂದ್ಯದಲ್ಲಿ ಎರಡು ಶತಕಗಳು ದಾಖಲಾದವು. ಇದರೊಂದಿಗೆ ಒಂದು ಆವೃತ್ತಿಯಲ್ಲಿ ಸಿಡಿದ ಅತ್ಯಧಿಕ ಶತಕಗಳ ವಿಚಾರದಲ್ಲಿ ಈ ಆವೃತ್ತಿ, ಕಳೆದ ಆವೃತ್ತಿಯನ್ನು ಸರಿಗಟ್ಟಿದೆ.ಬೆಂಗಳೂರು-ಹೈದರಾಬಾದ್​ ಪಂದ್ಯದಲ್ಲಿ ಹೆನ್ರಿಕ್ ಕ್ಲಾಸೆನ್ ಈ ಐಪಿಎಲ್​​ನ 7ನೇ ಶತಕ ಬಾರಿಸಿದರೆ, ಆ ಬಳಿಕ ಗುರಿ ಬೆನ್ನಟ್ಟುವಾಗ ಆರ್​ಸಿಬಿ ಆಟಗಾರ ವಿರಾಟ್ ಕೊಹ್ಲಿ 8ನೇ ಶತಕ ಬಾರಿಸಿದರು. ಇದರೊಂದಿಗೆ ಕಳೆದ ಆವೃತ್ತಿಯ ಶತಕಗಳಿಗೆ ಈ ಆವೃತ್ತಿ ಸಮವಾಗಿದೆ. ಕಳೆದ ಆವೃತ್ತಿಯಲ್ಲೂ ಒಟ್ಟು 8 ಶತಕಗಳು ಸಿಡಿದಿದ್ದವು. ಆದರೆ ಈ ಆವೃತ್ತಿಯಲ್ಲಿ ಇನ್ನು ಪಂದ್ಯಗಳು ಬಾಕಿ ಇರುವುದರಿಂದ ಇನ್ನೊಂದು ಶತಕ ಬಂದರೆ ಐಪಿಎಲ್ ಇತಿಹಾಸದಲ್ಲಿ ದಾಖಲೆ ಸೃಷ್ಟಿಯಾಗಲಿದೆ. ಇನ್ನುಳಿದಂತೆ ಈ ಆವೃತ್ತಿಯಲ್ಲಿ ಶತಕ ಸಿಡಿಸಿದ ಆಟಗಾರರ ಪಟ್ಟಿಯನ್ನು ನೋಡುವುದಾದರೆ...ಹ್ಯಾರಿ ಬ್ರೂಕ್: ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಎಸ್​ಆರ್​ಹೆಚ್ ಬ್ಯಾಟರ್ ಹ್ಯಾರಿ ಬ್ರೂಕ್‌ ಕೇವಲ 55 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಐಪಿಎಲ್‌ 2023 ಟೂರ್ನಿಯ ಮೊತ್ತ ಮೊದಲ ಶತಕವಾಗಿತ್ತು.ವೆಂಕಟೇಶ್ ಅಯ್ಯರ್: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತಂಡದ ಸ್ಪೋಟಕ ಬ್ಯಾಟ್ಸ್​ಮನ್ ವೆಂಕಟೇಶ್ ಅಯ್ಯರ್ 49 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ನೊಂದಿಗೆ ಭರ್ಜರಿ ಶತಕ ಪೂರೈಸಿದ್ದರು.ಯಶಸ್ವಿ ಜೈಸ್ವಾಲ್: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 1000ನೇ ಪಂದ್ಯದಲ್ಲಿ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್ 62 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 16 ಫೋರ್​ನೊಂದಿಗೆ 124 ರನ್​ ಚಚ್ಚಿದರು.ಸೂರ್ಯಕುಮಾರ್ ಯಾದವ್: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ ಅಜೇಯ 103 ರನ್‌ ಸಿಡಿಸಿದ್ದರು. ಪ್ರಭ್​ಸಿಮ್ರಾನ್​ ಸಿಂಗ್: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 59ನೇ ಪಂದ್ಯದಲ್ಲಿ ಪಂಜಾಬ್ ಆರಂಭಿಕ ಪ್ರಭ್​ಸಿಮ್ರಾನ್ ಸಿಂಗ್ 65 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 103 ರನ್​ ಬಾರಿಸಿದ್ದರು.ಶುಭ್​ಮನ್​ ಗಿಲ್​: ಐಪಿಎಲ್​ನ 62ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಶುಭ್​ಮನ್ ಗಿಲ್ 58 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 13 ಫೋರ್​ನೊಂದಿಗೆ 101 ರನ್​ ಬಾರಿಸಿದ್ದರು.ಹೆನ್ರಿಕ್ ಕ್ಲಾಸೆನ್: ಹೈದರಾಬಾದ್​ನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡದ ಹೆನ್ರಿಕ್ ಕ್ಲಾಸೆನ್ 49 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ ಸಿಡಿಲಬ್ಬರದ ಶತಕ ಸಿಡಿಸಿದರು.ವಿರಾಟ್ ಕೊಹ್ಲಿ:  ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ ಕೊಹ್ಲಿ 63 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

source https://tv9kannada.com/photo-gallery/cricket-photos/ipl-2023-most-ipl-centuries-in-one-season-psr-582451.html

Leave a Reply

Your email address will not be published. Required fields are marked *