IPL 2023: ಪ್ಲೇಆಫ್ ಹಾದಿ ಮತ್ತಷ್ಟು ಕಠಿಣ: RCB ಮುಂದಿದೆ 4 ದೊಡ್ಡ ಸವಾಲುಗಳು

IPL 2023: ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಜಯದೊಂದಿಗೆ ಶುರುಭಾರಂಭ ಮಾಡಿದ ಆರ್​ಸಿಬಿ ಇದೀಗ 10 ಪಂದ್ಯಗಳನ್ನು ಮುಗಿಸಿದೆ. ಆದರೆ ಇದರಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ 5 ಪಂದ್ಯಗಳನ್ನು ಮಾತ್ರ. ಅಂದರೆ 5 ಪಂದ್ಯಗಳಲ್ಲಿ ಸೋಲನುಭವಿಸಿರುವ ಫಾಫ್ ಡುಪ್ಲೆಸಿಸ್ ಪಡೆ ಇದೀಗ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.ಆದರೆ ಆರ್​ಸಿಬಿ ಪಾಲಿಗೆ ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಈ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಬಹುದು. ಅಂದರೆ ಇಲ್ಲಿ 18 ಪಾಯಿಂಟ್ಸ್​ಗಳಿಸಿದರೆ ಪ್ಲೇಆಫ್ ಆಡುವುದು ಕನ್ಫರ್ಮ್ ಆಗಲಿದೆ.ಇದೀಗ 10 ಪಾಯಿಂಟ್ಸ್ ಕಲೆಹಾಕಿರುವ ಆರ್​ಸಿಬಿಗೆ 8 ಅಂಕಗಳ ಅಗತ್ಯತೆಯಿದೆ. ಆದರೆ ಈ 8 ಅಂಕಗಳನ್ನು ಪಡೆಯಲು ಆರ್​ಸಿಬಿ 4 ತಂಡಗಳ ವಿರುದ್ಧ ಸೆಣಸಲಿದೆ. ಅದರಲ್ಲಿ ಮೂರು ಪಂದ್ಯಗಳು ಎದುರಾಳಿಗಳ ತವರಿನಲ್ಲಿ ಎಂಬುದು ವಿಶೇಷ.ಅಂದರೆ ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಮೇ.9 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಇದಾದ ಬಳಿಕ ಮೇ 14 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯವು ಇಂದೋರ್​ನಲ್ಲಿ ನಡೆಯಲಿದೆ.ಹಾಗೆಯೇ ಮೇ 18 ರಂದು ಹೈದರಾಬಾದ್​ನಲ್ಲಿ ಎಸ್​ಆರ್​ಹೆಚ್ ವಿರುದ್ಧ ಆಡಬೇಕಿದೆ. ಇನ್ನು ಮೇ 21 ರಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್.ಈ 4 ಸವಾಲುಗಳನ್ನು ಮೆಟ್ಟಿ ನಿಂತು ಗೆದ್ದರೆ ಆರ್​ಸಿಬಿ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಒಂದು ವೇಳೆ ಇದರಲ್ಲಿ ಮೂರಲ್ಲಿ ಗೆದ್ದರೆ ಉಳಿದ ತಂಡಗಳ ನೆಟ್​ ರನ್​ ರೇಟ್​ ಅನ್ನು ಅವಲಂಭಿಸಬೇಕಾಗಿ ಬರಬಹುದು. ಏಕೆಂದರೆ 10 ತಂಡಗಳ ಮುಕ್ತಾಯದ ಬಳಿಕ ಬಹುತೇಕ ತಂಡಗಳು 10 ಅಂಕಗಳನ್ನು ಕಲೆಹಾಕಿದ್ದು, ಹೀಗಾಗಿ ಪ್ಲೇಆಫ್ ಪ್ರವೇಶಿಸಲು 7 ತಂಡಗಳ ನಡುವೆ ನೇರ ಪೈಪೋಟಿ ಇದೆ. ಇತ್ತ ಮೈನಸ್ ನೆಟ್​ ರನ್​ ರೇಟ್ (-0.209) ಹೊಂದಿರುವ ಆರ್​ಸಿಬಿ ಮುಂದಿನ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲಸ್ ನೆಟ್ ರನ್​ ರೇಟ್​ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ.ಸದ್ಯ 5 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ ತಂಡವು ಮುಂದಿನ 4 ಪಂದ್ಯಗಳನ್ನು ಗೆದ್ದರೆ 18 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸುವುದು ಖಚಿತ. ಒಂದು ವೇಳೆ ಇದರಲ್ಲಿ 1 ಪಂದ್ಯದಲ್ಲಿ ಸೋತರೂ ಅಂಕ ಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳಲು ನೆಟ್​ ರನ್ ರೇಟ್​ನ ಮೊರೆ ಹೋಗಬೇಕಾಗಿ ಬರಬಹುದು. ಹೀಗಾಗಿ ಆರ್​ಸಿಬಿ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು ಪ್ಲೇಆಫ್​ಗೆ ಡೈರೆಕ್ಟ್ ಎಂಟ್ರಿ ಕೊಡಲಿದೆಯಾ ಕಾದು ನೋಡಬೇಕಿದೆ.

source https://tv9kannada.com/photo-gallery/cricket-photos/ipl-2023-rcb-playoffs-qualification-scenario-kannada-news-zp-572316.html

Leave a Reply

Your email address will not be published. Required fields are marked *