IPL 2023 Points Table: ರಾಜಸ್ಥಾನ್​​ಗೆ ರೋಚಕ ಜಯ: ಹೊಸ ಪಾಯಿಂಟ್ಸ್​ ಟೇಬಲ್​ ಹೀಗಿದೆ

IPL 2023 Points Table: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ 16 ರ ಪೈಪೋಟಿ ಮುಂದುವರೆದಿದೆ. ಈಗಾಗಲೇ ಎಲ್ಲಾ ತಂಡಗಳು 3 ಪಂದ್ಯಗಳನ್ನು ಆಡಿದ್ದು, ಇನ್ನು ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ 4 ಪಂದ್ಯಗಳು ಪೂರ್ಣಗೊಂಡಿದೆ.ಇತ್ತ 6 ತಂಡಗಳ 3 ಪಂದ್ಯಗಳು ಹಾಗೂ 4 ತಂಡಗಳ 4 ಪಂದ್ಯಗಳ ಮುಕ್ತಾಯದೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲೂ ಮಹತ್ವದ ಬದಲಾವಣೆಯಾಗಿದೆ. ಬುಧವಾರ ಸಿಎಸ್​ಕೆ ವಿರುದ್ಧದ ರೋಚಕ  ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಅದರಂತೆ ಬುಧವಾರದ ಅಂತ್ಯಕ್ಕೆ ಐಪಿಎಲ್​ ಪಾಯಿಂಟ್ಸ್​​ ಟೇಬಲ್​ನ ವಿವರ ಈ ಕೆಳಗಿನಂತಿದೆ...1- ರಾಜಸ್ಥಾನ್ ರಾಯಲ್ಸ್ (6 ಅಂಕಗಳು): 4 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡವು 3 ಗೆಲುವು ಹಾಗೂ 1 ಸೋಲಿನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಆರ್​ಆರ್​ ತಂಡದ ಪ್ರಸ್ತುತ ನೆಟ್​ ರನ್​ ರೇಟ್ ನೆಟ್​​ +1.588.2- ಲಕ್ನೋ ಸೂಪರ್ ಜೈಂಟ್ಸ್ (6 ಅಂಕಗಳು)​: ನಾಲ್ಕು ಪಂದ್ಯಗಳಲ್ಲಿ 1 ಸೋಲು ಹಾಗೂ 3 ಗೆಲುವು ದಾಖಲಿಸಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು +1.048 ನೆಟ್​ ರನ್​ ರೇಟ್​ನೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದೆ.3- ಕೊಲ್ಕತ್ತಾ ನೈಟ್ ರೈಡರ್ಸ್ (4 ಅಂಕಗಳು): ಕೆಕೆಆರ್ ಆಡಿರುವ 3 ಪಂದ್ಯಗಳಲ್ಲಿ 1 ಸೋಲು, 2 ಗೆಲುವು ಕಂಡಿದೆ. ಇದೀಗ +1.375 ನೆಟ್​ ರನ್​ ರೇಟ್ ಹೊಂದಿರುವ ನಿತೀಶ್ ರಾಣಾ ಪಡೆಯು 3ನೇ ಸ್ಥಾನದಲ್ಲಿದೆ.4- ಗುಜರಾತ್ ಟೈಟಾನ್ಸ್ (4 ಅಂಕಗಳು): ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 3 ಪಂದ್ಯಗಳಲ್ಲಿ 1 ಸೋಲು ಹಾಗೂ 2 ಗೆಲುವು ದಾಖಲಿಸಿದೆ. ಈ ಮೂಲಕ +0.431 ನೆಟ್​ ರನ್​ ರೇಟ್​ನೊಂದಿಗೆ 4ನೇ ಸ್ಥಾನದಲ್ಲಿದೆ.5- ಚೆನ್ನೈ ಸೂಪರ್ ಕಿಂಗ್ಸ್ (4 ಅಂಕಗಳು)​: 4 ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್​ಕೆ ತಂಡವು 2 ಸೋಲು, 2 ಗೆಲುವಿನೊಂದಿಗೆ 5ನೇ ಸ್ಥಾನದಲ್ಲಿದೆ. ತಂಡದ ಪ್ರಸ್ತುತ ಪಾಯಿಂಟ್ಸ್ ಟೇಬಲ್​ ನೆಟ್​ ರನ್​ ರೇಟ್​ +0.225.6- ಪಂಜಾಬ್ ಕಿಂಗ್ಸ್ (4 ಅಂಕಗಳು)​: ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 3 ಪಂದ್ಯಗಳಲ್ಲಿ 2 ಜಯ ಹಾಗೂ 1 ಸೋಲು ಕಂಡಿದ್ದು, -0.281 ನೆಟ್​ ರನ್​ ರೇಟ್​ನೊಂದಿಗೆ 6ನೇ ಸ್ಥಾನ ಅಲಂಕರಿಸಿದೆ.7- ರಾಯಲ್ ಚಾಲೆಂಜರ್ಸ್ ಬೆಂಗಳೂರು (2 ಅಂಕಗಳು): ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್​ಸಿಬಿ ತಂಡವು ಮೊದಲ ಪಂದ್ಯದಲ್ಲಿ ಗೆದ್ದರೆ, 2ನೇ ಮತ್ತು 3ನೇ ಪಂದ್ಯದಲ್ಲಿ ಸೋತಿತ್ತು. ಸದ್ಯ -0.800 ನೆಟ್​ ರನ್​ ರೇಟ್ ಹೊಂದಿರುವ ಆರ್​ಸಿಬಿ 7ನೇ ಸ್ಥಾನದಲ್ಲಿದೆ.8- ಮುಂಬೈ ಇಂಡಿಯನ್ಸ್ (2 ಅಂಕಗಳು): ಆಡಿರುವ 3 ಪಂದ್ಯಗಳಲ್ಲಿ 1 ಜಯ ಹಾಗೂ 2 ಸೋಲಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ -0.879 ನೆಟ್​ ರನ್​ ರೇಟ್ ಪಡೆದು 8ನೇ ಸ್ಥಾನದಲ್ಲಿದೆ.9- ಸನ್​ರೈಸರ್ಸ್ ಹೈದರಾಬಾದ್ (2 ಅಂಕಗಳು): ಆಡಿರುವ 3 ಪಂದ್ಯಗಳಲ್ಲಿ 1 ರಲ್ಲಿ ಜಯ ಸಾಧಿಸಿ, 2 ಪಂದ್ಯ ಸೋತಿರುವ ಸನ್​ರೈಸರ್ಸ್ ಹೈದರಾಬಾದ್ ತಂಡವು -1.502 ನೆಟ್​ ರನ್ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 9ನೇ ಸ್ಥಾನದಲ್ಲಿದೆ.10- ಡೆಲ್ಲಿ ಕ್ಯಾಪಿಟಲ್ಸ್ (0): ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 4 ಪಂದ್ಯಗಳಲ್ಲೂ ಸೋಲನುಭವಿಸಿದೆ. ಇನ್ನು ಗೆಲುವಿನ ಖಾತೆ ತೆರೆಯದ ಡೆಲ್ಲಿ ತಂಡವು -1.576 ನೆಟ್​ ರನ್​ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ.ಬುಧವಾರದವರೆಗೆ (ಏ.12) ಒಟ್ಟು 17 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಬಳಿಕ ಅಪ್​ಡೇಟ್ ಆಗಿರುವ ಪಾಯಿಂಟ್ಸ್​ ಟೇಬಲ್ ಅನ್ನು ಇಲ್ಲಿ ನೀಡಲಾಗಿದೆ.

source https://tv9kannada.com/photo-gallery/cricket-photos/ipl-2023-points-table-new-points-table-looks-after-csk-vs-rr-match-kannada-news-zp-au50-554875.html

Leave a Reply

Your email address will not be published. Required fields are marked *